ಜಾನಪದ ಹಾಡಿನ ಸಾಹಿತ್ಯ:
ಸೋಜುಗದ ಸೂಜು ಮಲ್ಲಿಗೆ
ಸೋಜುಗದ ಸೂಜು ಮಲ್ಲಿಗೆ,
ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆಅಂದಾವರೆ ಮುಂದಾವರೆ ಮತ್ತೆ ತಾವರೆ ಪುಷ್ಪ, ಚಂದಕ್ಕಿ ಮಾಲೆ ಬಿಲ್ಪತ್ರೆ ಮಾದೇವ ನಿಮ್ಗೆ
ಚಂದಕ್ಕಿ ಮಾಲೆ ಬಿಲ್ಪತ್ರೆ ತುಳಸಿದಳವ ಮಾದಪ್ನ ಪೂಜೆಗೆ ಬಂದು.ಮಾದೇವ ನಿಮ್ಮ ಸೋ|2|
ತಪ್ಪಳೆ ಬೇಳಗಿವ್ನಿ ತುಪ್ಪವ ಕಾಯ್ಸಿವ್ನಿ , ಕಿತ್ತಳೆ ಹಣ್ಣ ತಂದಿವ್ನಿ ಮಾದೇವ ನಿಮ್ಗೆ
ಕಿತ್ತಳೆ ಹಣ್ಣ ತಂದಿವ್ನಿ, ಮಾದಪ್ಪ. ಕಿತ್ತಡಿ ಬರುವ ಪರಸೆಗೆ, ಮಾದೇವ ನಿಮ್ಮಮಾದೇವ ನಿಮ್ಮ ಸೋ |2|
ಬೆಟ್ಟತ್ಕೋಂಡೋಗೋರ್ಗೆ ಹಟ್ಟಿ ಹಂಬಲವ್ಯಾಕ ಬೆಟ್ಟದ್ಮಾದೇವ ಗತಿಯೆಂದು ಮಾದೇವ ನೀವೆ
ಬೆಟ್ಟದ್ಮಾದೇವ ಗತಿಯೆಂದು ಅವರಿಂದು ಹಟ್ಟಿ ಹಂಬಲವ ಮರೆತಾರೋ. ಮಾದೇವ ನಿಮ್ಮಮಾದೇವ ನಿಮ್ಮ ಸೋ |2|
ಹುಚ್ಚೆಳ್ಳು ಹೂನಂಗೆ ಹೆಚ್ಚೇವೊ ನಿನ್ನ ಪರುಸೆ, ಹೆಚ್ಚಾಳಗಾರ ಮಾದಯ್ಯ ಮಾದಯ್ಯ ನೀನೆ
ಹೆಚ್ಚಳಗಾರ ಮಾದಯ್ಯ ಎಳು ಮಲೆಯ | ಹೆಚ್ಚೇವು ಗೌರಳ್ಳಿ ಕಣಿವೇಲಿ ಮಾದೇವ ನಿಮ್ಮಮಾದೇವ ನಿಮ್ಮ ಸೋ |2|
ಜಾನಪದ
- MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
- ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
- ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ
- ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
- ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
- ದರ್ಶನ್ ಮಧ್ಯಂತರ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಲು ತೀರ್ಮಾನ
More Stories
ಮೈಸೂರು ಜಿಲ್ಲೆಯ ಸಂಕ್ಷಿಪ್ತ ಮಾಹಿತಿಯ ಕವನ
ರಾಮನಗರ ಜಿಲ್ಲೆಯ ಸಂಕ್ಷಿಪ್ತ ಪರಿಚಯದ ಕವನ (ಜಿಲ್ಲೆ ೨೯)
ಕರುನಾಡ ಜಿಲ್ಲೆಗಳ ಕಿರು ಪರಿಚಯ – 25- ಕೊಡಗು