February 22, 2026

Newsnap Kannada

The World at your finger tips!

parv

ಬಾಲಕಿ ಮೇಲೆ ಅತ್ಯಾಚಾರ ಆರೋಪ: ಹಿಂದಿ ಕಿರುತೆರೆ ನಟ ಸೇರಿ 6 ಮಂದಿ ಬಂಧನ

Spread the love

ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಆರೋಪದ ಪ್ರಕರಣದಲ್ಲಿ ಕಿರುತೆರೆ ನಟ ಸೇರಿದಂತೆ 6 ಮಂದಿಯನ್ನು ಮುಂಬೈ ವಾಲಿವ್ ಪೊಲೀಸರು ಬಂಧಿಸಿದ್ದಾರೆ.

ನಾಗಿಣಿ-3, ಬ್ರಹ್ಮರಾಕ್ಷಸ್-2 ಮುಂತಾದ ಧಾರವಾಹಿಗಳನ್ನು ನಟಿಸಿದ್ದ ಪರ್ವ್ ವಿ. ಪುರಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಪೊಲೀಸರ ಅತಿಥಿಯಾಗಿದ್ದಾರೆ.

ಕಾರಿನಲ್ಲಿ ನನ್ನ ಮೇಲೆ ಅತ್ಯಾಚಾರ ಎಸಗಿದ ನಂತರ ನಟ ಸೇರಿದಂತೆ ಇತರರು ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಬಾಲಕಿ ದೂರು ನೀಡಿದ್ದಳು.‌

ನಟ ಪರ್ವ್ ವಿ ಪುರಿ ಸೇರಿದಂತೆ 6ಮಂದಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ದಿಲ್ ಕಿ ನಸರ್ ಸೆ ಖೂಬ್ ಸೂರತ್ ಧಾರವಾಹಿ ಮೂಲಕ 2013ರಲ್ಲಿ ಕಿರುತೆರೆ ಕಾಲಿಟ್ಟ ಪರ್ವ್ ವಿ ಪುರಿ, ಫಿರ್ ಬಿ ನಾ ಮಾನೆ ಮೂಲಕ ಜನಪ್ರಿಯತೆ ಪಡೆದಿದ್ದರು.

error: Content is protected !!