January 7, 2025

Newsnap Kannada

The World at your finger tips!

sucide

ಅಕ್ಕ – ತಂಗಿ ನಡುವೆ ತಾರತಮ್ಯ ಎಂದು ಭಾವಿಸಿ ತಂಗಿ ನೇಣಿಗೆ ಶರಣು

Spread the love

ಮನೆಯಲ್ಲಿ ಅಕ್ಕ – ತಂಗಿಯ ನಡುವೆ ತಾರತಮ್ಯ ಮಾಡುತ್ತಾರೆ ಎಂಬ ಕಾರಣಕ್ಕಾಗಿ ತಂಗಿ‌ ನೇಣು ಬಿಗಿದುಕೊಂಡು‌ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನ ನೇತಾಜಿ ನಗರದಲ್ಲಿ ನಡೆದಿದೆ.

ನೇತಾಜಿನಗರದ ನಾರಾಯಣ್ ಎಂಬವರ ಪುತ್ರಿ ಭಾವನ (23) ಆತ್ಮಹತ್ಯೆ ಮಾಡಿಕೊಂಡ ಯುವತಿ.

ಅಪ್ಪ – ಅಮ್ಮ ಅಕ್ಕನಿಗೆ ಮಾತ್ರ ಚಿನ್ನಾಭರಣ, ಬಟ್ಟೆ ಸೇರಿದಂತೆ ಏನೇ ಬೇಕಾದರೂ ಆಕೆಯನ್ನು ಕೇಳಿ, ಅವಳನ್ನೂ ಕರೆದುಕೊಂಡು ಹೋಗಿ ಕೊಡಿಸುತ್ತಾರೆ.

ಆದರೆ, ನನಗೆ ಮಾತ್ರ ಏನು ಬೇಕು, ಯಾವ ತರದ ಚಿನ್ನಾಭರಣ ಬೇಕು, ಬಟ್ಟೆಬೇಕು ಎಂಬುವುದನ್ನೇ ಕೇಳುವುದಿಲ್ಲ. ಅವರು ತಂದುಕೊಟ್ಟದನ್ನು ಹಾಕಿಕೊಳ್ಳಬೇಕು.

ಈ ತಾರತಮ್ಯ ನೀತಿ ನಂಗೆ ಬೇಸರ ತಂದಿದೆ ಎಂದು ನೊಂದು ಶನಿವಾರ ಮನೆಯಲ್ಲಿ ಯಾರು ಇಲ್ಲದ ವೇಳೆ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದಾರೆ .

Copyright © All rights reserved Newsnap | Newsever by AF themes.
error: Content is protected !!