ಅ.18ರಂದು ಮೈಶುಗರ್ ಕುರಿತು ರೈತರ, ಜನ ಪ್ರತಿನಿಧಿಗಳ ಮಹತ್ವದ ಸಭೆ- ಸಿಎಂ

Team Newsnap
1 Min Read

ಅ. 18 ರಂದು ಮಂಡ್ಯದ ಮೈಶುಗರ್ ಸಕ್ಕರೆ ಕಾಖಾ೯ನೆ ಆರಂಭಕ್ಕೆ ಸಂಬಂಧಿಸಿದಂತೆ ರೈತ ನಾಯಕರು ಹಾಗೂ ಜಿಲ್ಲೆಯ ಜನಪ್ರತಿನಿಧಿಗಳ, ಸಚಿವರ ಸಭೆ ಕರೆದು ಅಂತಿಮ ನಿಣ೯ಯ ಕೈಗೊಳ್ಳುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಮಂಡ್ಯದಲ್ಲಿ ಶುಕ್ರವಾರ ತಿಳಿಸಿದರು.

shugar factory1

ಮೈಸೂರಿಗೆ ಹೋಗುವ ಮಾಗ೯ ಮಧ್ಯೆ ಮಂಡ್ಯದಲ್ಲಿ ರೈತರು ಮೈಶುಗರ್ ಆರಂಭಿಸುವಂತೆ ಒತ್ತಾಯಿಸಿ ಕಳೆದ 36 ದಿನಗಳಿಂದ ನಡೆಸಿರುವ ಧರಣಿ ಸ್ಥಳಕ್ಕೆ ಭೇಟಿ ನೀಡಿದ ಸಿಎಂ ಬಸವರಾಜು , ಬೊಮ್ಮಾಯಿ ಮಾತನಾಡಿ, ಕಳೆದ ಬಾರಿ ಧರಣಿ ಸ್ಥಳಕ್ಕೆ ಬರಬೇಕಿತ್ತು. ಈ ಬಾರಿ ಮೈಸೂರಿಗೆ ಹೋಗುವಾಗ ಮನವಿ ಕೊಡ್ತಿರಿ ಎಂದು ಬಂದಿದ್ದೇನೆ ಎಂದರು

ಅ. 18 ರಂದು ನಿಮ್ಮೆಲ್ಲರನ್ನೂ ಕರೆಸಿ ಚರ್ಚಿಸಿ ಒಂದು ನಿರ್ಣಯ ತೆಗೆದುಕೊಳ್ಳೊಣ. ಮೈಶುಗರ್ ಕಾರ್ಖಾನೆ ಇತಿಹಾಸ ಹೊಂದಿದೆ.
ಮಂಡ್ಯ ಅಂದ್ರೆ ಸಕ್ಕರೆ ನಾಡು, ಸಕ್ಕರೆ ನಾಡಿನಲ್ಲಿ ಈ ಕಾರ್ಖಾನೆ ಉಳಿಯಬೇಕು ಎಂದರು. ಕಬ್ಬು ಅರೆದರೆ ಮಾತ್ರ ಮಂಡ್ಯಕ್ಕೆ ಹೆಸರು. ರೈತರ ಕಬ್ಬು ನುರಿಸುವ ಕೆಲಸ ಆಗಬೇಕು.

ಒಂದು ಸಾರಿ ಕಾರ್ಖಾನೆ ಶುರುವಾದ್ರೆ, ಮತ್ತೆ ನಿಲ್ಲಬಾರದು. ಸಚಿವರು, ನೀವು ಎಲ್ಲರೂಬನ್ನಿ ಚರ್ಚೆ ಮಾಡೋಣ. ಒಂದು ಮಾತು ಕೊಟ್ಟ ಮೇಲೆ ಕಾಖಾ೯ನೆ ಆರಂಭಿಸಬೇಕು ಅಂದ್ರೆ ಆರಂಭಿಸಲೇ ಬೇಕು. ಈಗ ನೀವು ಬನ್ನಿ ಒತ್ತಾಯ ಮಾಡಿದರಿ. ನಿಮ್ಮ ಮೇಲಿನ ಗೌರವದಿಂದ ಬಂದಿದ್ದೇನೆ ಎಂದು ಸಿಎಂ ಹೇಳಿದರು.

Suma ravi conventional hall Best Conventional hall in mandya
Share This Article
Leave a comment