September 27, 2022

Newsnap Kannada

The World at your finger tips!

vishwanath amith

ಸಿದ್ದರಾಮಯ್ಯ ಹೊಳೆಯುವ ವಜ್ರ: ಸಿದ್ದು ಬೆಂಬಲಕ್ಕೆ ನಿಂತ ಎಚ್. ವಿಶ್ವನಾಥ್ ಪುತ್ರ ಅಮಿತ್

Spread the love

ದಾವಣಗೆರೆಯಲ್ಲಿ ಆ.3 ರಂದು ನಡೆಯಲಿರುವ ಸಿದ್ದರಾಮೋತ್ಸವಕ್ಕೆ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಪುತ್ರ ಅಮಿತ್ ಕೈ ಜೋಡಿಸಿದ್ದಾರೆ.

ಈ ಮೂಲಕ ಸಿದ್ದರಾಮಯ್ಯ ಪರ ಮತ್ತು ವಿರುದ್ಧವಾಗಿ ಅಪ್ಪ -ಮಗ ನಿಂತಂತಾಗಿದೆ, ಸಿದ್ದರಾಮಯ್ಯ ವಿರುದ್ಧ ಹೆಚ್ ವಿಶ್ವನಾಥ್ ಸದಾ ಟೀಕೆ ಮಾಡುತ್ತಾರೆ. ಆದರೆ, ಇತ್ತ ಸಿದ್ದರಾಮಯ್ಯ ಪರ ಅವರ ಪುತ್ರ ಅಮಿತ್ ದೇವರಹಟ್ಟಿ ನಿಂತಿದ್ದಾರೆ.

ಮೈಸೂರಿನಲ್ಲಿ ನಡೆದ ಸಿದ್ದರಾಮೋತ್ಸವದ ಪೂರ್ವಭಾವಿ ಕುರುಬ ಸಮುದಾಯದ ಪ್ರಮುಖ ಮುಖಂಡ ಪೂರ್ವಭಾವಿ ಸಭೆಯಲ್ಲಿ ವಿಶ್ವನಾಥ್ ಪುತ್ರ ಅಮಿತ್ ಭಾಗಿಯಾಗಿ ಸಿದ್ದರಾಮೋತ್ಸವಕ್ಕೆ ಜನರನ್ನು ಸೇರಿಸುವ ಹೊಣೆ ಹೊತ್ತರು.

ನಾನು ಜಿಲ್ಲಾ ಪಂಚಾಯತ್‍ನಲ್ಲಿ ಗೆಲ್ಲಲು ಸಿದ್ದರಾಮಯ್ಯ ಕಾರಣ. ನನ್ನ ಪರ ಪ್ರಚಾರಕ್ಕೆ ಬಂದು ನನ್ನನ್ನು ಸಿದ್ದರಾಮಯ್ಯ ಗೆಲ್ಲಿಸಿದರು.15ನೇ ರಾಷ್ಟ್ರಪತಿಯಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದ ದ್ರೌಪದಿ ಮುರ್ಮು

ಸಿದ್ದರಾಮಯ್ಯ ಹೊಳೆಯುವ ವಜ್ರವಿದ್ದಂತೆ. ನಾವು(ಕುರುಬ ಸಮಾಜದವರು) ಮತ್ತಷ್ಟು ಹೊಳಪು ನೀಡುವ ಕೆಲಸ ಮಾಡಬೇಕು. ಶಾಸಕ ಹೆಚ್.ಪಿ. ಮಂಜುನಾಥ್, ಮುಖಂಡ ರವಿಶಂಕರ್ ಜೊತೆಗೂಡಿ ಹೆಚ್ಚಿನ ಜನರನ್ನು ಸೇರಿಸುವ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.

error: Content is protected !!