ಸಿದ್ದು ಸಿಎಂ : ಡಿಕೆಶಿ ಡಿಸಿಎಂ – ರಾಗಾ ಸಂಧಾನ ಸಕ್ಸಸ್ : ಮೇ 20 ರಂದು ಪದಗ್ರಹಣ

Team Newsnap
1 Min Read

ಕರ್ನಾಟಕದ 24 ನೇ ಮುಖ್ಯಮಂತ್ರಿ 2ನೇ ಬಾರಿಗೆ ಸಿದ್ದರಾಮಯ್ಯಸಿಎಂ ಪಟ್ಟ ಅಲಂಕರಿಸಲಿದ್ದಾರೆ ಮತ್ತು ಡಿಸಿಎಂ ಆಗಿ ರಾಜ್ಯದ ಸೇವೆ ಮಾಡಲು ಡಿ.ಕೆ ಶಿವಕುಮಾರ್ ಸಹಮತ ಸೂಚಿಸಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಡಿಕೆಶಿಯೊಂದಿಗೆ ಮಾಡಿದ ಸಂಧಾನವು ಕೊನೆಗೂ ಫಲ ಕೊಟ್ಟಿದೆ.

ಡಿಕೆಶಿವಕುಮಾರ್ ಜೀ ಪ್ಲೀಜ್ ಪವರ್ ಶೇರ್ ಗೆ ಒಪ್ಪಿಕೊಳ್ಳಿ. ಟ್ರಸ್ಟ್ ಅಸ್ ಎಂದು ರಾಗಾ ಹೇಳಿದ ಭರವಸೆಗೆ ಡಿಕೆಶಿ ಸಹಮತ ಸೂಚಿಸಿದ್ದಾರೆ.

ಮೊದಲ 30 ತಿಂಗಳು ಅವಧಿಗೆ ಸಿದ್ದರಾಮಯ್ಯ ಹಾಗೂ ನಂತರದ 30 ತಿಂಗಳಿಗೆ ಡಿ ಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲು ರಾಜೀ ಸಂಧಾನ ರೂಪಿಸಲಾಗಿದೆ.

ಇಂದು ಸಂಜೆ 7 ಗಂಟೆಗೆ ಬೆಂಗಳೂರಿನ ಇಂದಿರಾ ಗಾಂಧಿ ಭವನದಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ ನಡೆಯಲಿದೆ. ಅಲ್ಲಿ ಹೊಸ ಸಿಎಂ ಸಿದ್ದು ಹೆಸರು ಅಧೀಕೃತವಾಗಿ ಘೋಷಣೆ ಮಾಡಲಾಗುವುದು.

ಮೇ 20 ರಂದು ಶನಿವಾರ 12.30 ಕ್ಕೆ ಕಂಠೀರವ ಸ್ಟೇಡಿಯಂ ಬೆಂಗಳೂರಿನಲ್ಲಿ ಪ್ರಮಾಣ ವಚನ ಸಮಾರಂಭ ನಡೆಯಲಿದೆ

ಕಳೆದ ರಾತ್ರಿ ನಡೆದ ಚರ್ಚೆ ಮತ್ತು ಸಭೆಗಳ ವೇಳೆ ಈ ನಿರ್ಣಯಕ್ಕೆ ಬರಲಾಗಿದೆ. ಈ ನಿರ್ಧಾರಕ್ಕೆ ಸರ್ವಾನುಮತವಿದೆ. ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ ಕೂಡ ಹೇಳಿದ್ದಾರೆ.

Share This Article
Leave a comment