July 4, 2022

Newsnap Kannada

The World at your finger tips!

dks and siddarammaya

ಕಾಂಗ್ರೆಸ್‍ನಲ್ಲೂ ಪರಷತ್ ಟಿಕಟ್ ಗೆ ಜೋರಾಯ್ತು ಗಲಾಟೆ – ಡಿಕೆಶಿ , ಸಿದ್ದು ದೆಹಲಿಗೆ

Spread the love

ರಾಜ್ಯ ಕಾಂಗ್ರೆಸ್‍ನಲ್ಲಿ ಪರಿಷತ್ ಟಿಕೆಟ್ ಅನ್ನು ಈ ಬಾರಿ ದಲಿತ ಹಾಗೂ ಕ್ರಿಶ್ಚಿಯನ್ ಸಮುದಾಯದವರಿಗೆ ಅವಕಾಶ ಮಾಡಿಕೊಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪಟ್ಟು ಹಿಡಿದಿದ್ದಾರೆ.

ಇದನ್ನು ಓದಿ – ಅಂತಾರಾಷ್ಟ್ರೀಯ ಯೋಗ ದಿನದಂದು ಮೋದಿ ಮೈಸೂರಿಗೆ

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತ್ರ ಒಂದು ಸ್ಥಾನವನ್ನು ಎಸ್.ಆರ್.ಪಾಟೀಲ್‍ಗೆ ಕೊಡಬೇಕು. ಇನ್ನೊಂದು ಸ್ಥಾನ ಯಾರಿಗಾದ್ರೂ ನೀಡಿ ಎನ್ನುತ್ತಿದ್ದಾರೆ.

ಯಾವುದೇ ಕಾರಣಕ್ಕೂ ಎಸ್‍ಆರ್ ಪಾಟೀಲ್‍ಗೆ ಅವಕಾಶ ಸಿಗಬಾರದು ಎಂದು ಸಿದ್ದರಾಮಯ್ಯ ಹಠಕ್ಕೆ ಬಿದ್ದಿದ್ದಾರೆ

ಸಿದ್ದು ಮನವೊಲಿಕೆಗೆ ಮುಂದಾದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಾ ಬಳಿ ಸಿದ್ದರಾಮಯ್ಯ ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ.

ಈ ಟಿಕೆಟ್ ಸಮಸ್ಯೆ ಬಗೆಹರಿಸಲು ಸ್ವತಃ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮುಂದಾಗಿದ್ದಾರೆ.
ಇಂದು ಮಧ್ಯಾಹ್ನ ಉಭಯ ನಾಯಕರೊಟ್ಟಿಗೆ ಸೋನಿಯಾ ಮಾತನಾಡಲಿದ್ದಾರೆ. ಈಗಾಗಲೇ ಡಿಕೆಶಿ ದೆಹಲಿಗೆ ತೆರಳಿದ್ದಾರೆ. ಇಂದು ಬೆಳಗ್ಗೆ ಸಿದ್ದರಾಮಯ್ಯನವರು ವಿಮಾನ ಹತ್ತಲಿದ್ದಾರೆ.

error: Content is protected !!