ಕೋಲಾರದ ಆಂತರಿಕ ಸಮೀಕ್ಷಾ ವರದಿ ಕಂಡು ಗರಬಡಿದ ಸಿದ್ದರಾಮಯ್ಯ

Team Newsnap
1 Min Read
Siddaramaiah was shocked to see the internal survey report of Kolar ಕೋಲಾರದ ಆಂತರಿಕ ಸಮೀಕ್ಷಾ ವರದಿ ಕಂಡು ಗರಬಡಿದ ಸಿದ್ದರಾಮಯ್ಯ

ಕೋಲಾರದಿಂದ ಅಖಾಡಕ್ಕೆ ಇಳಿಯುವ ನಿರ್ಧಾರ ಮಾಡಿದ ಸಿದ್ದರಾಮಯ್ಯಗೆ ಇನ್ನೊಂದು ಶಾಕ್ ಎದುರಾಗಿದೆ.

ಜಿಲ್ಲೆಯ 6 ಅಭ್ಯರ್ಥಿಗಳು ಗೆಲುವಿಗೆ ಸಾಕಷ್ಟು ಸೈಕಲ್ ಹೊಡೆಯಲೇಬೇಕು ಎಂಬ ಪಕ್ಷದ ಆಂತರಿಕ ವರದಿ ಸಿದ್ದರಾಮಯ್ಯ ಕೈ ಸೇರಿದೆ. ಇರುವುದರಲ್ಲಿ ಶಾಸಕಿ ರೂಪಾ ಶಶಿಧರ್ ಬೆಸ್ಟ್. ಉಳಿದವರು‌ ಗೆಲುವಿಗೆ ಸಾಕಷ್ಟು ಬೆವರು ಹರಿಸಬೇಕು ಎಂದು ವರದಿ ಹೇಳಿದೆ.ಸ್ಯಾಂಟ್ರೋ ರವಿ ಆತ್ಮಹತ್ಯೆಗೆ ಯತ್ನ? ಆರೋಗ್ಯದಲ್ಲಿ ಏರುಪೇರು- ಆಸ್ಪತ್ರೆಗೆ ದಾಖಲು

ಕೋಲಾರ ಜಿಲ್ಲಾ ಕಾಂಗ್ರೆಸ್ ಸ್ಥಿತಿಗತಿ ಅಂದಿಕೊಂಡಷ್ಟು ಸುಲಭವಾಗಿಲ್ಲ. ಜಿಲ್ಲೆಯಲ್ಲಿರುವ ಕಾಂಗ್ರೆಸ್ ಶಾಸಕರು ಹಾಗೂ ಮುಂದಿನ ಅಭ್ಯರ್ಥಿಗಳ ಗೆಲುವಿಗೆ ಸಾಕಷ್ಟು ಶ್ರಮ ಹಾಕಬೇಕು. ಪಕ್ಷದ ಅಭ್ಯರ್ಥಿಗಳು ಗೆಲುವಿಗೆ ಸಿದ್ದರಾಮಯ್ಯರನ್ನೇ ನಂಬಿಕೊಂಡಿದ್ದಾರೆ. ಈ ವರದಿಯಿಂದಾಗಿ ಉಳಿದವರನ್ನು ಗೆಲ್ಲಿಸಲು ಶ್ರಮಿಸಬೇಕಾದ ಒತ್ತಡ ಸಿದ್ದರಾಮಯ್ಯ ಮೇಲಿದೆ.

ಕಾಂಗ್ರೆಸ್ ಪ್ರಾಬಲ್ಯ ಇರುವ ಜಿಲ್ಲೆ ಎಂದು ಕೋಲಾರವನ್ನು ಬಿಂಬಿಸಲಾಗುತ್ತಿದೆಯಾದರೂ ಚುನಾವಣೆಯಲ್ಲಿ ಅಭ್ಯರ್ಥಿಗಳು ಗೆಲುವಿಗೆ ಸಿದ್ದರಾಮಯ್ಯರನ್ನೇ ನಂಬಿಕೊಂಡಿದ್ದಾರೆ.

ಜಿಲ್ಲಾ ಕಾಂಗ್ರೆಸ್‌ ಆಂತರಿಕ ಸ್ಥಿತಿಗತಿಯ ವರದಿ ತರಿಸಿಕೊಂಡ ಸಿದ್ದರಾಮಯ್ಯಗೆ ಶಾಕ್ ಆಗಿದ್ದು ಕೋಲಾರದಿಂದ ಸ್ಪರ್ಧೆಗೆ ಮುಂದಾಗಿರುವ ಸಿದ್ದರಾಮಯ್ಯಗೆ ಈಗ ಸವಾಲುಗಳ ಮೇಲೆ ಸವಾಲು ಎದುರಾಗಿದೆ.

Share This Article
Leave a comment