ಕೋಲಾರದಲ್ಲಿ ಸ್ಪರ್ಧೆಗೆ ಪಕ್ಷದ ಒಳಗೆ ವಿರೋಧಿ ಗುಂಪು ಒಂದು ಕಡೆಯಾದರೆ, ಇನ್ನೊಂದು ಕಡೆ ವಿಪಕ್ಷ ಜೆಡಿಎಸ್ ನ ವಿರೋಧ ಮತ್ತೊಂದು ಕಡೆ. ಸಿದ್ದರಾಮಯ್ಯ ಕೋಲಾರ ಸ್ಪರ್ದೆ ಮಾಡಿದರೆ ಅವರನ್ನು ಬಿಡದೆ ಖೆಡ್ಡಾ ತೋಡಲು ಕುಮಾರಸ್ವಾಮಿ, ಇಬ್ರಾಹಿಂ ಪ್ಲಾನ್ ಮಾಡುತ್ತಿದ್ದಾರೆ.ಜನವರಿ 12ರಂದು ಹುಬ್ಬಳ್ಳಿಗೆಮೋದಿ: ಭರದ ಸಿದ್ಧತೆ
ಕುಮಾರಸ್ವಾಮಿ-ಇಬ್ರಾಹಿಂ ಪ್ಲಾನ್ ಏನು..?:
ಕೋಲಾರ ಕ್ಷೇತ್ರದಲ್ಲಿ ಒಕ್ಕಲಿಗ, ಅಲ್ಪಸಂಖ್ಯಾತ ಮತಗಳು ನಿರ್ಣಾಯಕ. ಹೀಗಾಗಿ ಈ ಮತಗಳ ಮೇಲೆ ಇಬ್ಬರು ನಾಯಕರು ಕಣ್ಣಿಟ್ಟಿದ್ದಾರೆ. ಒಕ್ಕಲಿಗ ಮತಗಳ ಭೇಟೆಗೆ ಕುಮಾರಸ್ವಾಮಿ ಹಾಗೂ ಅಲ್ಪಸಂಖ್ಯಾತ ಮತಗಳಿಗೆ ಇಬ್ರಾಹಿಂ ಅಖಾಡಕ್ಕೆ ಇಳಿಯುವುದಾಗಿದೆ.
ಸಿದ್ದರಾಮಯ್ಯ ಸೋಲಿಸೋಕೆ ಕುಮಾರಸ್ವಾಮಿ, ಇಬ್ರಾಹಿಂ ಒಟ್ಟಾಗಿ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಾರೆ. ಅತಿ ಹೆಚ್ಚು ಪ್ರಚಾರ ಸಭೆಗಳನ್ನು ಆಯೋಜನೆ ಮಾಡಿ ಸಿದ್ದರಾಮಯ್ಯ ವಿರುದ್ಧ ಜನ ವಿರೋಧಿ ಭಾವನೆ ಬರುವಂತೆ ಮೂಡಿಸೋದು. ಸಿದ್ದರಾಮಯ್ಯ ಒಕ್ಕಲಿಗರ ವಿರೋಧಿಯಾಗಿದ್ದು, ಸಮ್ಮಿಶ್ರ ಸರ್ಕಾರ ಬೀಳಿಸಿದ್ದಾರೆ ಅಂತ ಪ್ರಚಾರ ಮಾಡಿ ಒಕ್ಕಲಿಗರ ಮತ ಪಡೆಯುವುದು.
ಕಾಂಗ್ರೆಸ್ ಅಲ್ಪಸಂಖ್ಯಾತರನ್ನು ವೋಟ್ ಬ್ಯಾಂಕ್ ರಾಜಕೀಯ (Vote Bank Politics) ಕ್ಕೆ ಬಳಕೆ ಮಾಡಿಕೊಳ್ಳುತ್ತೆ ಅಂತ ಇಬ್ರಾಹಿಂ ಪ್ರಚಾರ ಮಾಡೋದು. ಹಾಗೂ ಕೋಲಾರ ಕ್ಷೇತ್ರದಲ್ಲಿ ಹೆಚ್ಚು ಮುಸ್ಲಿಂ ಸಮುದಾಯ ಸಭೆಗಳನ್ನ, ಚುನಾವಣೆ ಪ್ರಚಾರವನ್ನು ಪ್ರತ್ಯೇಕವಾಗಿ ಮಾಡಿ ಸಿದ್ದರಾಮಯ್ಯ ವಿರುದ್ಧ ಸೇಡು ತೀರಿಸಿಕೊಳ್ಳುವ ಯೋಜನೆ ರೂಪಿಸಲಾಗಿದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು