ಅಧಿಕಾರಕ್ಕಾಗಿ ಸಿದ್ದರಾಮಯ್ಯ ಅವರು ಸಿದ್ದರಹೀಮ್ ಅಯ್ಯ ಎಂದು ಬೇಕಾದರೂ ಹೆಸರು ಬದಲಾಯಿಸಿಕೊಳ್ಳುತ್ತಾರೆ ಎಂದು ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ಮಾಡಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಂಹ, ಹಿಜಬ್ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಡಿ. ಗೋರಿಪಾಳ್ಯದ ಜಮೀರ್ ಅಹಮದ್ ಈಗ ಸಿದ್ದರಾಮಯ್ಯ ಅವರನ್ನು ಚಾಮರಾಜ ಪೇಟೆಯಲ್ಲಿ ಚುನಾವಣೆಗೆ ಸ್ಪರ್ಧಿಸಲು ಕರೆಯುತ್ತಿದ್ದಾರೆ. ಅಧಿಕಾರಕ್ಕಾಗಿ ಅವರು ಹೆಸರನ್ನು ಬದಲಾಯಿಸಿಕೊಳ್ಳಲು ಸಿದ್ಧರಿದ್ದಾರೆ ಎಂದು ಕಿಡಿಕಾರಿದರು.
ಒತ್ತಡ, ಟೀಕಾಪ್ರಹಾರದ ನಡುವೆಯೂ ಸಮವಸ್ತ್ರ ಕಡ್ಡಾಯಕ್ಕೆ ಸರ್ಕಾರ ಬದ್ಧವಾಗಿರೋದು ಒಳ್ಳೆಯ ಸಂದೇಶ. ಸಮವಸ್ತ್ರ ಎನ್ನುವುದು ಬರೀ ಬಣ್ಣದ ಉಡುಪಲ್ಲ. ಅದು ಎಲ್ಲಾ ಮಕ್ಕಳು ಸಮಾನರು ಎಂದು ಸಾರುವ ಉಡುಪಾಗಿದೆ. ಆದರೆ ಹಿಜಬ್‍ಗಾಗಿ ಇಷ್ಟು ಹಠ ಹಿಡಿದು ಯಾಕಾಗಿ ವಿದ್ಯಾರ್ಥಿಗಳು ಕೂತಿದ್ದಾರೆ ಎಂದು ಪ್ರಶ್ನಿಸಿದರು.
ಹಿಜಬ್ ಹಾಕಿಕೊಂಡು, ಟೋಪಿ ಹಾಕಿಕೊಂಡು ನೀವು ಕಲಿಯಬೇಕು ಎಂಬುದಾದರೆ ಮದರಸಗೆ ಹೋಗಿ. ಅಲ್ಲಿ ನಿಮ್ಮ ಪ್ರತ್ಯೇಕ ಭಾವನೆ ಕಾಪಾಡಿಕೊಳ್ಳಬಹುದು ಎಂದು ಟೀಕಿಸಿದರು.
- ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಸರ್ಕಾರಿ ಉದ್ಯೋಗಕ್ಕೆ ಅರ್ಹತೆ ಇಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
- ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಎರಡು ವಾರ ಭಾರೀ ಮಳೆಯ ಮುನ್ಸೂಚನೆ
- ಡಿ.9 ರಿಂದ ಬೆಳಗಾವಿಯಲ್ಲಿ ಅಧಿವೇಶನ : ಯು ಟಿ ಖಾದರ್
- ವಯನಾಡಿನ ನೂತನ ಸಂಸದೆಯಾಗಿ ಪ್ರಿಯಾಂಕಾ ಗಾಂಧಿ ಪ್ರಮಾಣ ವಚನ
- ನಟ ಧನುಷ್ ಮತ್ತು ಐಶ್ವರ್ಯಾ ರಜನಿಕಾಂತ್ ವಿಚ್ಛೇದನಕ್ಕೆ ಕೋರ್ಟ್ ಅನುಮೋದನೆ
More Stories
ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಸರ್ಕಾರಿ ಉದ್ಯೋಗಕ್ಕೆ ಅರ್ಹತೆ ಇಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಎರಡು ವಾರ ಭಾರೀ ಮಳೆಯ ಮುನ್ಸೂಚನೆ
ಡಿ.9 ರಿಂದ ಬೆಳಗಾವಿಯಲ್ಲಿ ಅಧಿವೇಶನ : ಯು ಟಿ ಖಾದರ್