ಗೊಂದಲದಿಂದ ಹೊರ ಬರದ ಸಿದ್ದು: ಪತ್ನಿ , ಪುತ್ರನ ಸಲಹೆಗಳೇ ವಿಭಿನ್ನ

Team Newsnap
1 Min Read

ಕ್ಷೇತ್ರ ಆಯ್ಕೆಯ ಗೊಂದಲದಲ್ಲಿರುವ ಸಿದ್ದರಾಮಯ್ಯ ಪರಿಹಾರ ಹುಡುಕಲು ಇದೇ ಮೊದಲ ಬಾರಿಗೆ ಕುಟುಂಬಸ್ಥರ ಮೊರೆ ಹೋದರೂ ನಿರ್ಣಯಕ್ಕೆ ಬರಲು ಸಾಧ್ಯವಾಗಿಲ್ಲ

ಪತ್ನಿ ಪಾರ್ವತಿ ಹಾಗೂ ಪುತ್ರ ಡಾ ಯತೀಂದ್ರರ ಅಭಿಪ್ರಾಯ ಮತ್ತು ವಿಭಿನ್ನ ಸಲಹೆಗಳು ಸಿದ್ದರಾಮಯ್ಯರನ್ನು ಮತ್ತಷ್ಟು ಗೊಂದಲಕ್ಕೆ ತಳ್ಳಿದೆ. ಮಂಡ್ಯದ ಸ್ಪೋರ್ಟ್ಸ್ ಕ್ಲಬ್ ಮೇಲೆ ಧಾಳಿ : ಜೂಜಾಟದಲ್ಲಿ ತೊಡಗಿದ್ದ 55 ಮಂದಿ ಬಂಧನ – 18 ಲಕ್ಷ ವಶ

ಕಳೆದ ಬಾರಿ ಚಾಮುಂಡೇಶ್ವರಿಯಲ್ಲಿ ಸ್ಪರ್ಧಿಸಬೇಡಿ. ಬೇರೆ ಕ್ಷೇತ್ರವನ್ನು ಆಯ್ಕೆ ಮಾಡಿ ಎಂದು ಪತ್ನಿ ಸಲಹೆ ಕೊಟ್ಟಿದ್ದರಂತೆ ಆದರೆ ಈ ಸಲಹೆ ಪರಿಗಣಿಸದ ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಜೆಡಿಎಸ್‌ನ ಜಿಟಿ ದೇವೇಗೌಡ ವಿರುದ್ಧ ನಿಂತು ಸೋಲನ್ನು ಅನುಭವಿಸಿದ್ದರು. 

ಪಾರ್ವತಿ ಹೇಳಿರುವುದು ಏನು?

ವರುಣಾಗೆ ಹೋಗಿ ಮಗನ ಭವಿಷ್ಯ ಹಾಳು ಮಾಡುವುದು ಸರಿಯಲ್ಲ. ಮಗನ ರಾಜಕೀಯ ಭವಿಷ್ಯ ಒಮ್ಮೆ ಬಿದ್ದರೆ ಮತ್ತೆ ಏಳುವುದು ಕಷ್ಟವಾಗುತ್ತದೆ. ಹೀಗಾಗಿ ವರುಣಾದಲ್ಲಿ ಮಗನನ್ನು ಗೆಲ್ಲಿಸಿ ಒಂದು ಅವಧಿಗೆ ಮಂತ್ರಿ ಮಾಡಿ. ನೀವು ಕೋಲಾರಕ್ಕೆ ಹೋದರೆ ಗೆಲ್ಲಬಹುದು ಎಂದು ಪತ್ನಿ ಪಾರ್ವತಿ ಸಲಹೆ ನೀಡಿದ್ದಾರೆ.

ಯತೀಂದ್ರ ಹೇಳಿದ್ದೇ ಬೇರೆ:

ಕೋಲಾರದಲ್ಲಿ ಹೇಳಿದಷ್ಟು ಗೆಲುವು ಸುಲಭ ಇಲ್ಲ. ಕೊನೆಯ ಚುನಾವಣೆಯಲ್ಲಿ ವಿಪರೀತ ರಿಸ್ಕ್‌ ತೆಗೆದುಕೊಳ್ಳುವುದು ಬೇಡ. ವರುಣಾ ಕ್ಷೇತ್ರದಲ್ಲಿ ಸುಲಭವಾಗಿ ಗೆಲ್ಲಬಹುದು. ನಾನು ಬೇರೆ ಎಲ್ಲಿಯೂ ಸ್ಪರ್ಧೆ ಮಾಡುವುದಿಲ್ಲ ನಿಮ್ಮನ್ನು ಗೆಲ್ಲಿಸಿಕೊಡುತ್ತೇನೆ ಎಂದು ಪುತ್ರ ಯತೀಂದ್ರ ಹೇಳಿದ್ದಾರಂತೆ

ಸಿದ್ದು ಏನಂತಾರೆ?

ಕೋಲಾರದಲ್ಲಿ ರಿಸ್ಕ್‌ ಜಾಸ್ತಿ ಎಂಬ ಹಿರಿಯ ನಾಯಕರು, ಕಾಂಗ್ರೆಸ್‌ ಹೈಕಮಾಂಡ್‌ ಅಭಿಪ್ರಾಯಕ್ಕೆ ಸಿದ್ದರಾಮಯ್ಯ ಸಹಮತ ವ್ಯಕ್ತಪಡಿಸಿದ್ದಾರೆ.

ವರುಣಾದಿಂದ ಸ್ಪರ್ಧಿಸುವ ಆಸೆ ಇದ್ದರೂ ಇದಕ್ಕೆ ಪುತ್ರ ವ್ಯಾಮೋಹ ಅಡ್ಡಿಯಾಗುತ್ತಿದೆ. ನಾನು ಸ್ಪರ್ಧಿಸಿದರೆ ಪುತ್ರ ಯತೀಂದ್ರ ರಾಜಕೀಯ ಜೀವನಕ್ಕೆ ಅಡ್ಡಿಯಾಗಬಹದು ಎಂಬ ಭೀತಿ ಕಾಡುತ್ತಿದೆ. ಈ ಕಾರಣಕ್ಕೆ ಇನ್ನೂ ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಬೇಕು ಎಂಬ ಗೊಂದಲದಿಂದ ಇನ್ನೂ ಹೊರ ಬಂದಿಲ್ಲ

Share This Article
Leave a comment