October 6, 2024

Newsnap Kannada

The World at your finger tips!

BJP , JDS , alliance

ದಲಿತ ವಿಕಲಚೇತನ ಸೈಟ್ ನಲ್ಲಿ ಸಿದ್ದರಾಮಯ್ಯ ಮನೆ ನಿರ್ಮಾಣ – HDK

Spread the love

ಬೆಂಗಳೂರು: ಸಿಎಂ ಸಿದ್ದರಾಮಯ್ಯನವರು ದಲಿತ ವಿಕಲಚೇತನ ವ್ಯಕ್ತಿಗೆ ಹಂಚಿಕೆಯಾದ ಜಾಗದಲ್ಲಿ ಮನೆ ನಿರ್ಮಾಣ ಮಾಡಿದ್ದಾರೆಂದು ಕುಮಾರಸ್ವಾಮಿ ಆರೋಪಿಸಿದ್ಧಾರೆ.

ಸಿದ್ದರಾಮಯ್ಯನವರು ಡಿಸಿಎಂ ಆಗಿಗಿದ್ದ ಸಮದಲ್ಲಿ , ಮೈಸೂರಿನಲ್ಲಿ ದಲಿತ ವಿಕಲಚೇತನ ವ್ಯಕ್ತಿಗೆ ಹಂಚಿಕೆಯಾದ ಜಾಗವನ್ನ ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಆ ಜಾಗದಲ್ಲಿ ಮನೆ ಕಟ್ಟಿದ್ದಾರೆ ಎಂದು ಕೇಂದ್ರ ಬೃಹತ್‌ ಕೈಗಾರಿಕಾ ಸಚಿವ ಕುಮಾರಸ್ವಾಮಿ ತಿಳಿಸಿದ್ಧಾರೆ.

ದಲಿತ ವಿಕಲಚೇತನ ಮುಡಾಗೆ 24 ಸಾವಿರ ರೂ. ಪಾವತಿಸಿ ಮುಡಾದಿಂದ ಜಾಗ ಪಡೆದಿದ್ದು , ಜಾಗವನ್ನು ಸಾಕಮ್ಮ ಹೆಸರಿ‌ನಲ್ಲಿ ಸುಳ್ಳು ದಾಖಲೆ ಸೃಷ್ಟಿ ಮಾಡಿದ್ಧಾರೆ.

ಈ ಜಾಗವನ್ನು ಸಾಕಮ್ಮನಿಂದ ತೆಗೆದುಕೊಂಡು ಸಿದ್ದರಾಮಯ್ಯ ಮನೆ ಕಟ್ಟಿದ್ದಾರೆ.ಇದನ್ನು ಓದಿ –ಪ್ರಜ್ವಲ್​ ರೇವಣ್ಣನಿಂದ ಜಿ.ಪಂ ಮಾಜಿ ಸದಸ್ಯೆಗೆ 3 ವರ್ಷ ಲೈಂಗಿಕ ದೌರ್ಜನ್ಯ

ತನ್ನನ್ನು ಸಿದ್ದರಾಮಯ್ಯ ತೆರೆದ ಪುಸ್ತಕ ಅಂತಾರೆ. ದಲಿತನ‌ ಜಾಗದಲ್ಲಿ ಕಟ್ಟಿದ್ದ ಮನೆ ಯಾರಿಗೆ ಸೇಲ್ ಮಾಡಿದ್ದೀರಿ? ಈಗ ಈ ಮನೆ ಯಾರ ಕೈಯಲ್ಲಿ ಇದೆ? ಸುಮ್ಮನೆ ಹೆಸರಿಗೆ ಮಾತ್ರ ಸಿದ್ದರಾಮಯ್ಯ ಮಾರಾಟ ಮಾಡಿದ್ದೇನೆ ಎಂದು ತೋರಿಸಿದ್ದಾರೆ. ಆ ದಾಖಲಾತಿ ತೆಗೆದರೆ ಸಿದ್ದರಾಮಯ್ಯ ವಿರುದ್ದ ದೊಡ್ಡ ರಾಮಾಯಣ ಶುರುವಾಗುತ್ತದೆ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!