December 21, 2024

Newsnap Kannada

The World at your finger tips!

sidda

Pic Credits : deccanherald.com

ಎತ್ತಿನ ಬಂಡಿಯಲ್ಲಿ ವಿಧಾನಸೌಧದ ಆವರಣ ಪ್ರವೇಶಿಸಿದ ಸಿದ್ದರಾಮಯ್ಯ

Spread the love

ವಿಧಾನಮಂಡಲದ ಅಧಿವೇಶನ ಇಂದು ಅರಂಭಗೊಂಡಿತು. ವಿಧಾನ ಸಭೆಯ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಎತ್ತಿನಬಂಡಿಯಲ್ಲಿ ವಿಧಾನಸೌಧ ಆವರಣ ಪ್ರವೇಶಿಸಿದರು.

siddaramaih cow

ಸಾಮಾನ್ಯವಾಗಿ ಕಾರಿನಲ್ಲಿ ಬರುತ್ತಿದ್ದ ಸಿದ್ದರಾಮಯ್ಯ ಇವತ್ತು ಎತ್ತಿನಬಂಡಿ ಬಳಿಸಿದ ಕಾರಣ ಬೆಲೆ ಏರಿಕೆ ಬಗ್ಗೆ ಸರ್ಕಾರದ ವಿರುದ್ಧ ಪ್ರತಿಭಟನಾರ್ಥವಾಗಿ.
ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸಿಲಿಂಡರ್ ಬೆಲೆ ಹೆಚ್ಚಳದ ವಿರುದ್ಧ ಪೂರ್ವ ನಿರ್ಧಾರಿದಂತೆ ಕಾಂಗ್ರೆಸ್ ನಾಯಕರು ಬೆಂಗಳೂರಿನಲ್ಲಿ ಸೋಮವಾರ ಬೆಳಗ್ಗೆ ಎತ್ತಿನಬಂಡಿಗಳನ್ನು ಏರಿ ಪ್ರತಿಭಟನೆ ಆರಂಭಿಸಿದರು.


ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತಿತರ ನಾಯಕರು, ಕಾಂಗ್ರೆಸ್‌ನ ಹಲವು ಶಾಸಕರು ಎತ್ತಿನಬಂಡಿ ಏರಿ ವಿಧಾನಸೌಧದತ್ತ ಹೊರಟರು.ವಿಂಡ್ಸರ್ ಮ್ಯಾನರ್ ವೃತ್ತದಲ್ಲಿ ಪೊಲೀಸರು ತಡೆಹಾಕಿದರು. ವಿಧಾನಸಭೆ ವಿರೋಧ ಪಕ್ಷದ ನಾಯಕರು ಸೇರಿ ಪ್ರಮುಖ ಮುಖಂಡರಿದ್ದ ಎರಡು ಬಂಡಿಗಳಿಗೆ ಮಾತ್ರ ವಿಧಾನಸೌಧದತ್ತ ತೆರಳಲು ಅವಕಾಶ ನೀಡಿದರು.


ಈ ಎರಡು ಬಂಡಿಗಳು ವಿಧಾನಸೌಧ ಬಳಿ ಬರುತ್ತಿದ್ದಂತೆ ಒಳಗೆ ಪ್ರವೇಶ ನೀಡಲು ಪೊಲೀಸರು ಒಪ್ಪಲಿಲ್ಲ. ಇದೇ ವೇಳೆ ಕೆಲಹೊತ್ತು ಮಾತಿನ ಚಕಮಕಿ ನಡೆಯಿತು. ಸಿದ್ದರಾಮಯ್ಯ ಏರಿದ ಧ್ವನಿಯಲ್ಲಿ ತಮ್ಮ ಅಸಮಾಧಾನ ತೋರಿದರು. ಕೊನೆಗೂ ಒತ್ತಡಕ್ಕೆ ಮಣಿದ ಪೊಲೀಸರು ಪ್ರವೇಶದಬಾಗಿಲು ತೆರೆಯುತ್ತಿದ್ದಂತೆ ಸಿದ್ದರಾಮಯ್ಯ ಮತ್ತಿತರ ಪ್ರಮುಖರಿದ್ದ ಎತ್ತಿನಬಂಡಿ ರಾಜ್ಯದ ಶಕ್ತಿಕೇಂದ್ರದ ಆವರಣವನ್ನು ಪ್ರವೇಶಿಸಿತು.


ಇದಕ್ಕೂ ಮುನ್ನ ಎತ್ತಿನಬಂಡಿ ಏರುವ ವೇಳೆ ಕೆಲ ನಾಯಕರು ಕೆಳಗೆ ಬಿದ್ದ ಘಟನೆಯೂ ನಡೆಯಿತು. ಇತ್ತ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ರೈತರ ಪ್ರತಿಭಟನೆಯೂ ನಡೆಯಿತು. ಇದರಿಂದ ಆನಂದರಾವ್ ವೃತ್ತ ಸುತ್ತಮುತ್ತಲ ಪ್ರದೇಶದಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು. ಇದರ ಬಿಸಿ ಸಚಿವ ಡಾ. ಸುಧಾಕರ್ ಅವರಿಗೂ ತಟ್ಟಿತು.

Copyright © All rights reserved Newsnap | Newsever by AF themes.
error: Content is protected !!