January 5, 2025

Newsnap Kannada

The World at your finger tips!

mahila si

ಸಂಸ್ಕಾರಕ್ಕಾಗಿ ಅನಾಥ ಶವ ಹೊತ್ತು ಎರಡು ಕಿಮಿ ದೂರ ಸಾಗಿದ ಮಹಿಳಾ ಎಸ್​​ಐ

Spread the love

ಮಹಿಳಾ ಎಸ್​ಐ ಒಬ್ಬರು ಅನಾಥ ಶವಕ್ಕೆ ಹೆಗಲು ಕೊಟ್ಟು ಮಾನವೀಯತೆ ಮೆರೆದಿದ್ದಾರೆ.

ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯೊಂದರ ಗ್ರಾಮದಲ್ಲಿ ಅಪರೂಪದ ಘಟನೆ ನಡೆದಿದೆ.

ಅಡವಿಕೊತ್ತೂರು ಅನ್ನೋ ಗ್ರಾಮದ ಜಮೀನುವೊಂದರಲ್ಲಿ ಅನಾಥ ಶವ ಪತ್ತೆಯಾಗಿತ್ತು. ಕಾಸಿಗುಬ್ಬ ಪೊಲೀಸ್​ ಠಾಣೆಯ ಸಬ್​ ಇನ್ಸ್​​ಪೆಕ್ಟರ್​​ ಶಿರೀಶಾ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು.

ಗ್ರಾಮಸ್ಥರು ಶವವನ್ನು ಹೊತ್ತೊಯ್ಯಲು ಮುಂದೆ ಬರಲಿಲ್ಲ., ತಾವೇ ಶವವನ್ನು ಹೊತ್ತುಕೊಂಡು ಹೋಗಲು ಎಸ್​ಐ ಮುಂದಾದರು. ಮತ್ತೋರ್ವ ವ್ಯಕ್ತಿಯ ಜೊತೆ ಶಿರೀಶಾ ಶವವನ್ನು ತಮ್ಮ ಹೆಗಲ ಮೇಲೆ ಹೊತ್ತು ಜಮೀನಿನಿಂದ ವಾಹನವಿದ್ದ ಸ್ಥಳದವರೆಗೆ ಸುಮಾರು ಎರಡು ಕಿಲೋಮೀಟರ್ ದೂರ ನಡೆದುಕೊಂಡು ಹೋಗಿದ್ದಾರೆ.

ಅಂತ್ಯಕ್ರಿಯೆ ನೆರವೇರಿಸಲು ಲಲಿತಾ ಚಾರಿಟೆಬಲ್​​ ಟ್ರಸ್ಟ್​​ಗೆ ಮೃತದೇಹವನ್ನು ಹಸ್ತಾಂತರಿಸಿದ್ದಾರೆ.ಒಬ್ಬ ಮಹಿಳಾ ಪೊಲೀಸ್ ಅಧಿಕಾರಿಯ ಮಾಡಿದ ಸಾರ್ಥಕ ಸೇವೆ ಇದು.

Copyright © All rights reserved Newsnap | Newsever by AF themes.
error: Content is protected !!