ಬಳ್ಳಾರಿ ಜಿಪಂನಲ್ಲಿ ಆಡಳಿತ – ಅಭಿವೃದ್ಧಿಯ ಚಿತ್ರಣ ಬದಲಾಯಿಸಿದ ಸಿಇಒ ನಂದಿನಿ

Team Newsnap
1 Min Read

ಬಳ್ಳಾರಿಯ ಜಿಲ್ಲಾ ಪಂಚಾಯತ್​ ಆಡಳಿತ ಮತ್ತು ಅಭಿವೃದ್ಧಿಯ ಚಿತ್ರಣವೇ ಬದಲಾವಣೆಯ ದಾರಿಯತ್ತ ಸಾಗಿವೆ.

ಜಿಪಂನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಆರ್.ನಂದಿನಿ ದಕ್ಷತೆ, ಸಾಮಾಜಿಕ ಕಳಕಳಿಗಳು ಅಧಿಕಾರ ಚಲಾವಣೆಯಲ್ಲಿ ಎದ್ದು ಕಾಣುತ್ತವೆ.

ಕೆ ಆರ್ ನಂದಿನಿ 2017ರ ಯುಪಿಎಸ್​​ಸಿ ಪರೀಕ್ಷೆಯಲ್ಲಿ ದೇಶಕ್ಕೆ ಮೊದಲ ರ್ಯಾಂಕ್ ಪಡೆದಿದ್ದರು. ತರಬೇತಿ ಮುಗಿಸಿಕೊಂಡು ಕಳೆದ 4 ತಿಂಗಳ ಹಿಂದೆ ಬಳ್ಳಾರಿ ಜಿಲ್ಲಾ ಪಂಚಾಯ್ತಿ ಸಿಇಒ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಕಡಿಮೆ ಅವಧಿಯಲ್ಲಿಯೇ ಬಳ್ಳಾರಿ ಜಿಲ್ಲಾ ಪಂಚಾಯ್ತಿಯ ಚಿತ್ರಣವನ್ನು ಬದಲಿಸಿದ್ದಾರೆ.

ತಮ್ಮ ಅಧೀನದ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚಾಕಚಕ್ಯತೆಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪರಿಣಾಮ ಬಳ್ಳಾರಿ ಜಿಲ್ಲಾ ಪಂಚಾಯ್ತಿಯಲ್ಲೀಗ ವಿಶೇಷ ಕಳೆ ಬಂದಿದೆ.

ಕೇಂದ್ರದ ಹಣ ಬಳಕೆಗೆ ಕ್ರಮ :

ಪ್ರಮುಖವಾಗಿ 14ನೇ ಹಣಕಾಸು ಯೋಜನೆಗೆ ಸಂಬಂಧಿಸಿದಂತೆ ಮಾರ್ಚ್ ಅಂತ್ಯಕ್ಕೆ ಮುಕ್ತಾಯವಾಗಿ ಬಾಕಿ ಇರುವ ಅನುದಾನ, ಬಡ್ಡಿ, ಉಳಿತಾಯ ಮತ್ತು ಕಾಮಗಾರಿ ಮಾಡದೇ ಬಾಕಿ ಉಳಿದಿರುವ ಅನುದಾನ ಮರಳಿ ಕೇಂದ್ರ ಸರ್ಕಾರಕ್ಕೆ ವಾಪಸ್ಸು ಮಾಡುವುದರ ಬದಲಿಗೆ ಆ ಅನುದಾನವನ್ನು ಕ್ರೋಢೀಕರಿಸಿ ಬಳ್ಳಾರಿ ಜಿಲ್ಲೆಯಲ್ಲಿ ಶೈಕ್ಷಣಿಕ ಕ್ಷೇತ್ರ ಅಭಿವೃದ್ಧಿಪಡಿಸುವುದಕ್ಕೆ ಕೈಹಾಕುವುದರ ಮೂಲಕ ಗಮನ ಸೆಳೆದಿದ್ದಾರೆ.

ನಂದಿನಿ ಏನು ಮಾಡುತ್ತಿದ್ದಾರೆ?:

ಅದೇ ಅನುದಾನವನ್ನು ಉಪಯೋಗಿಸಿಕೊಂಡು ಮಾದರಿ ಶಾಲೆ, ಮಾದರಿ ಅಂಗನವಾಡಿ, ಮಾದರಿ ಲೈಬ್ರರಿ, ಮಾದರಿ ಘನ ತ್ಯಾಜ್ಯ ವಿಲೇವಾರಿ ಘಟಕ, ತಾಲೂಕು ಪಂಚಾಯ್ತಿಯಲ್ಲಿ ಮಹಿಳೆಯರಿಗೆ ಸಖಿ ಕೊಠಡಿ ನಿರ್ಮಿಸಲು ತೀರ್ಮಾನಿಸಿ ದ್ದಾರೆ.

ceo nandini 1

ಬಳ್ಳಾರಿ ತಾಲೂಕಿನ ಸಂಗನಕಲ್ಲು ಗ್ರಾಮದ ದಲಿತಕೇರಿಯಲ್ಲಿ ಮಾದರಿ ಅಂಗನವಾಡಿ ಕೇಂದ್ರವನ್ನು ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರು ಮಂಗಳವಾರ ಉದ್ಘಾಟಿಸಿದರು.

ಹೆಣ್ಣು ಮಕ್ಕಳಿಗೆ ಒಂದು ದಿನ ಅಧಿಕಾರ:

ಮೊದಲ ಬಾರಿಗೆ ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ ವಿಶೇಷವಾಗಿ ವಿದ್ಯಾರ್ಥಿನಿಯರಿಗೆ ಒಂದು ದಿನದ ಮಟ್ಟಿಗೆ ತಮ್ಮ ಅಧಿಕಾರವನ್ನು ಬಿಟ್ಡು ಕೊಟ್ಟು ನಂದಿನಿ  ಗಮನ ಸೆಳೆದರು. ಕಾರ್ಯಕ್ರಮದಲ್ಲಿ ನೆರೆದಿದ್ದ ವಿವಿಧ ಶಾಲೆಯ ವಿದ್ಯಾರ್ಥಿಗಳಿಗೆ  ಅಧಿಕಾರ ಹಸ್ತಾಂತರಿಸುವ ಮೂಲಕ ಪ್ರಾಯೋಗಿಕವಾಗಿ ಐಎಎಸ್, ಐಪಿಎಸ್ ಅಧಿಕಾರ ಹೇಗಿರುತ್ತೆ ಎಂಬುದನ್ನು ತಿಳಿಸಿಕೊಟ್ಟು ಮಕ್ಕಳಿಗೆ ಮಾರ್ಗ ದರ್ಶನ ಮಾಡುತ್ತಿದ್ದಾರೆ.

Share This Article
Leave a comment