ಚಂದ್ರಯಾನ-3 ರ ಸಫಲತೆಯ ಸಮಯದಲ್ಲಿ ಮಾಧ್ಯಮದಲ್ಲಿ ಚಂದ್ರನ ಒಂದು ಹಗಲು ಭೂಮಿಯ 15 ದಿನಕ್ಕೆ ಸಮವೆಂದು ಹೇಳಿದಾಗ ಹೌದ? ಹೀಗೂ ಉಂಟಾ ಅಂತ! ಮೊನ್ನೆ ಕೆಲವರು ಆಶ್ಚರ್ಯವಾಗಿ ಗಮನಿಸಿದ್ದು ಇದೆ. ವಿಜ್ಞಾನಿಗಳು ಎಷ್ಟೆಲ್ಲಾ ತಿಳ್ಕೊಂಡಿದ್ದಾರೆ ಅಂತ ಕೆಲವರಿಗೆ ಅನಿಸಿದ್ದು ಇದೆ. ಆದರೆ ಇದನ್ನು ಸನಾತನ ಧರ್ಮ ಸಾವಿರಾರು ವರ್ಷಗಳ ಹಿಂದೆಯೇ ಶುಕ್ಲಪಕ್ಷ ಮತ್ತು ಕೃಷ್ಣಪಕ್ಷ ಎಂದು ಹೇಳಿದೆ! ಅದು ನಮ್ಮಲ್ಲಿ ಬಹುತೇಕರಿಗೆ ಗೊತ್ತಿರಲಿಲ್ಲ ಅಷ್ಟೇ.
ಭಾರತಕ್ಕೆ ಮತ್ತು ಚಂದ್ರನಿಗೆ ಅದೇನೋ ವಿಶೇಷವಾದ ದೈವಿಕ ಸಂಬಂಧವಿದೆ. ಸೂರ್ಯನನ್ನು ಬಿಟ್ಟರೆ ಹಿಂದೂ ಧರ್ಮಿಯರು ವಿಶೇಷವಾಗಿ ಕಾಣುವುದು ಚಂದ್ರನನ್ನೇ. ಚಂದ್ರನ ಚಲನೆಯನ್ನು ಆಧಾರವಾಗಿ ಇಟ್ಟುಕೊಂಡು ನಮ್ಮಲ್ಲಿ ಕಾಲವನ್ನು ನಿರ್ಧಾರ ಮಾಡುವುದಿದೆ. ಈ ಕಾಲಗಣನೆ ಚಾಂದ್ರಮಾನ ಯುಗಾದಿಯಂದು ಆರಂಭವಾಗುತ್ತದೆ.
ಅಮಾವಾಸ್ಯೆಯ ಮರುದಿನದಿಂದ ಹುಣ್ಣಿಮೆಯವರೆಗಿನ ಅವಧಿಯನ್ನು ಶುಕ್ಲಪಕ್ಷ ಎಂದು ಕರೆದರೆ, ಹುಣ್ಣಿಮೆಯ ಮರುದಿನದಿಂದ ಅಮಾವಾಸ್ಯೆಯವರೆಗಿನ ಕಾಲವನ್ನು ಕೃಷ್ಣಪಕ್ಷ ಎಂದು ಕರೆಯುತ್ತಾರೆ. ಶುಕ್ಲಪಕ್ಷದಲ್ಲಿ ಚಂದ್ರ ದಿನೇ ದಿನೇ ಪ್ರಕಶಾನಮಾನವಾಗುತ್ತಾ ಹೋಗುತ್ತಾನೆ. ಕೃಷ್ಣ ಪಕ್ಷದಲ್ಲಿ ಚಂದ್ರನ ಪ್ರಕಾಶ ಕ್ಷೀಣಿಸುತ್ತಾ ಹೋಗುತ್ತಾನೆ.
ಭೂಮಿಯ 15 ದಿನ ಚಂದ್ರನ ಒಂದು ಹಗಲಿಗೆ ಸಮ. ಬಹುತೇಕವಾಗಿ ಭೂಮಿಯ 29/30 ದಿನ ಚಂದ್ರನ ಒಂದು ದಿನ. ಶುಕ್ಲಪಕ್ಷ- ಕೃಷ್ಣಪಕ್ಷ ಸರಿಯಾಗಿ ಅರಿಯಲು ನಾವು ತಿಥಿಯನ್ನು ಅರಿಯುದು ಮುಖ್ಯವಾಗಿರುತ್ತದೆ. ತಿಥಿಯನ್ನು ಒಂದು ದಿನ ಅಂತಲೂ ನಾವು ಭಾವಿಸಬಹುದು. ಮೊದಲ 15 ತಿಥಿ ಶುಕ್ಲಪಕ್ಷದಲ್ಲಿ ಬರುತ್ತದೆ. ಎರಡನೇ 15 ತಿಥಿ ಕೃಷ್ಣ ಪಕ್ಷದಲ್ಲಿ ಬರುತ್ತದೆ.
ಚಂದ್ರ ಮತ್ತು ಸೂರ್ಯನ ರೇಖಾಂಶಗಳು ಸಮಾನವಾಗಿರುವಾಗ ಅಮಾವಾಸ್ಯೆ ಸಂಭವಿಸುತ್ತದೆ.
ಸೂರ್ಯ ಮತ್ತು ಚಂದ್ರನ ಚಲನೆಗಳು ವೇಗದಲ್ಲಿ ಬದಲಾಗುತ್ತಲೇ ಇರುತ್ತವೆ. ಆದ್ದರಿಂದ, ತಿಥಿಯ ಉದ್ದವು ಬದಲಾಗುತ್ತಲೇ ಇರುತ್ತದೆ. ಒಂದು ತಿಥಿಯ ಉದ್ದವು 26 ಗಂಟೆಗಳವರೆಗೆ ಇರಬಹುದು ಮತ್ತು ಇದು 21 ಗಂಟೆ ಕೂಡ ಆಗಿರಬಹುದು. ಕೆಲವೊಮ್ಮೆ ತಿಥಿಯು ಒಂದೇ ದಿನದಲ್ಲಿ ಪ್ರಾರಂಭವಾಗಿ ಕೊನೆಗೊಳ್ಳಬಹುದು. ಹೀಗಾದರೆ ಒಂದೇ ದಿನದಲ್ಲಿ ಎರಡು ತಿಥಿಗಳು ಬರುತ್ತವೆ. ಕೆಲವೊಮ್ಮೆ ತಿಥಿಯು ಮುಂದಿನ ದಿನಕ್ಕೆ ಅತಿಕ್ರಮಿಸಬಹುದು. ಹೀಗಾದರೆ ಸತತ ಎರಡು ದಿನ ಒಂದೇ ತಿಥಿಗಳು ಬರಬಹುದು.
ಒಂದು ತಿಂಗಳಲ್ಲಿ ಎರಡು ಪಕ್ಷಗಳು ಬರುತ್ತದೆ. 1 ರಿಂದ 15 ದಿನಕ್ಕೆ ಶುಕ್ಲಪಕ್ಷ, 16ನೇ ದಿನದಿಂದ 30ನೇ ದಿನಕ್ಕೆ ಕೃಷ್ಣಪಕ್ಷ.
ಶುಕ್ಲಪಕ್ಷದಲ್ಲಿ ಬರುವ ತಿಥಿಗಳು.( ಶುಕ್ಲಪಕ್ಷ ಅಮಾವಾಸ್ಯೆಯಿಂದ ಪ್ರಾರಂಭವಾಗಿ, ಚಂದ್ರ 🌑🌒🌓🌖🌕 15 ದಿನದಲ್ಲಿ ಸ್ವಲ್ಪ ಸಲ್ಪ ಜಾಸ್ತಿ ಬೆಳಗುತ್ತಾ 15ನೇ ದಿನ ಸಂಪೂರ್ಣವಾಗಿ ಬೆಳಗಿ ಹುಣ್ಣಿಮೆಯೊಂದಿಗೆ ಕೊನೆಗೊಳ್ಳುತ್ತದೆ.)
- 1.ಪಾಡ್ಯ
- 2.ಬಿದಿಗೆ
- 3.ತದಿಗೆ
- 4.ಚತುರ್ಥಿ/ ಚೌತಿ
- 5.ಪಂಚಮಿ
- 6.ಷಷ್ಠಿ
- 7.ಸಪ್ತಮಿ
- 8.ಅಷ್ಟಮಿ
- 9.ನವಮಿ
- 10.ದಶಮಿ
- 11.ಏಕಾದಶಿ
- 12.ದ್ವಾದಶಿ
- 13.ತ್ರಯೋದಶಿ
- 14.ಚತುರ್ದಶಿ
- 15.ಹುಣ್ಣಿಮೆ
ಕೃಷ್ಣ ಪಕ್ಷದಲ್ಲಿ ಬರುವ ತಿಥಿಗಳು. (ಇದು ಪೂರ್ಣ ಬೆಳಗಿದ ಹುಣ್ಣಿಮೆ ಚಂದ್ರನಿಂದ ಆರಂಭವಾಗಿ 🌕 🌔🌓🌒🌑 15 ದಿನದಲ್ಲಿ ಬೆಳಕು ಕ್ಷೀಣಿಸುತ್ತಾ ಅಮಾವಾಸ್ಯೆಯಂದು ಪೂರ್ತಿ ಕಪ್ಪಾಗುವ ಮೂಲಕ ಕೊನೆಗೊಳ್ಳುತ್ತದೆ.)
16.ಪಾಡ್ಯ
17.ಬಿದಿಗೆ
18.ತದಿಗೆ
19.ಚತುರ್ಥಿ/ಚೌತಿ
20.ಪಂಚಮಿ
21.ಷಷ್ಠಿ
22.ಸಪ್ತಮಿ
23.ಅಷ್ಟಮಿ
24.ನವಮಿ
25.ದಶಮಿ
26.ಏಕಾದಶಿ
27.ದ್ವಾದಶಿ
28.ತ್ರಯೋದಶಿ.
29.ಚತುರ್ದಶಿ
30.ಅಮವಾಸ್ಯೆ
ಹೀಗೆ ಚಾಂದ್ರಮಾನ ಕಾಲಗಣನೆಯ ಶುಕ್ಲಪಕ್ಷ- ಕೃಷ್ಣಪಕ್ಷವನ್ನು ಒಳಗೊಂಡ ಒಂದು ತಿಂಗಳನ್ನು ಮಾಸ ಎಂದು ಕರೆಯುತ್ತಾರೆ. ಎಲ್ಲರಿಗೂ ತಿಳಿದಂತೆ ಒಟ್ಟು 12 ಮಾಸಗಳು. ವರ್ಷದ ಮೊದಲ ದಿನ ಅಂದರೆ ಯುಗದ ಆದಿ (ಯುಗಾದಿ) ಆರಂಭವಾಗುವುದು ಚೈತ್ರ ಮಾಸದ, ಶುಕ್ಲಪಕ್ಷದ ಮೊದಲ ದಿನದಂದು. ಮಾಸಗಳು
1 ಚೈತ್ರ ಮಾಸ
2 ವೈಶಾಖ ಮಾಸ
3 ಜ್ಯೇಷ್ಠ ಮಾಸ
4 ಆಷಾಢ ಮಾಸ
5 ಶ್ರಾವಣ ಮಾಸ
6 ಭಾದ್ರಪದ ಮಾಸ
7 ಅಶ್ವಿನ ಮಾಸ
8 ಕಾರ್ತಿಕ ಮಾಸ
9 ಮಾರ್ಗಶಿರ ಮಾಸ
10 ಪುಷ್ಯ ಮಾಸ
11 ಮಾಘ ಮಾಸ
12 ಫಾಲ್ಗುಣ ಮಾಸ
ಹೀಗೆ 12 ಮಾಸಗಳನ್ನು ಒಳಗೊಂಡ ಒಂದು ಚಾಂದ್ರಮಾನ ವರ್ಷವನ್ನು ಸಂವತ್ಸರ ಎಂದು ಕರೆಯುತ್ತಾರೆ. ಒಂದು ಸಂವತ್ಸರದ ಚಕ್ರದಲ್ಲಿ ಒಟ್ಟು 60 ಸಂವತ್ಸರಗಳು ಇರುತ್ತದೆ.
- ಪ್ರಭವ
- ವಿಭವ
- ಶುಕ್ಲ
- ಪ್ರಮೋದೂತ
- ಪ್ರಜೋತ್ಪತ್ತಿ
- ಆಂಗೀರಸ
- ಶ್ರೀಮುಖ
- ಭಾವ
- ಯುವ
- ಧಾತ್ರಿ
- ಈಶ್ವರ
- ಬಹುಧಾನ್ಯ
- ಪ್ರಮಾಥಿ
- ವಿಕ್ರಮ
- ವೃಷ
- ಚಿತ್ರಭಾನು
- ಸ್ವಭಾನು
- ತಾರಣ
- ಪಾರ್ಥಿವ
- ವ್ಯಯ
- ಸರ್ವಜಿತ್
- ಸರ್ವಧಾರಿ
- ವಿರೋಧಿ
- ವಿಕೃತ
- ಖರ
- ನಂದನ
- ವಿಜಯ
- ಜಯ
- ಮನ್ಮಥ
- ದುರ್ಮುಖಿ
- ಹೇವಿಳಂಬಿ
- ವಿಳಂಬಿ
- ವಿಕಾರಿ
- ಶಾರ್ವರಿ
- ಪ್ಲವ
- ಶುಭಕೃತ್
- ಶೋಭಾಕೃತ್
- ಕ್ರೋಧಿ
- ವಿಶ್ವಾವಸು
- ಪರಾಭವ
- ಪ್ಲವಂಗ
- ಕೀಲಕ
- ಸೌಮ್ಯ
- ಸಾಧಾರಣ
- ವಿರೋಧಿಕೃತ್
- ಪರಿಧಾವಿ
- ಪ್ರಮಾದೀ
- ಆನಂದ
- ರಾಕ್ಷಸ
- ನಳ
- ಪಿಂಗಳ
- ಕಾಳಯುಕ್ತಿ
- ಸಿದ್ಧಾರ್ಥಿ
- ರುದ್ರ / ರೌದ್ರಿ
- ದುರ್ಮತಿ
- ದುಂದುಭಿ
- ರುಧಿರೋದ್ಗಾರಿ
- ರಕ್ತಾಕ್ಷಿ
- ಕ್ರೋಧನ
- ಅಕ್ಷಯ
60 ವರ್ಷದ ಸಂವತ್ಸರದ ಚಕ್ರ ಮುಗಿದ ಬಳಿಕ ಮತ್ತೆ ಮೊದಲಿಂದ ಆರಂಭವಾಗುತ್ತದೆ. ನಾವಿಂದು 37ನೆಯ ಶೋಬಾಕೃತ್ ಸಂವತ್ಸರದಲ್ಲಿ ಇದ್ದೇವೆ. 2046ಕ್ಕೆ ಈ ಸಂವತ್ಸರ ಚಕ್ರ ಕೊನೆಗೊಳ್ಳುತ್ತದೆ. ಒಟ್ಟಿನಲ್ಲಿ ಆಧುನಿಕ ಕ್ಯಾಲೆಂಡರ್ ಪದ್ಧತಿಗೆ ಒಗ್ಗಿಕೊಂಡಿರುವ ಈಗಿನ ಜನರಿಗೆ ಇದರ ಬಗ್ಗೆ ಗೊತ್ತಿಲ್ಲ. ಬಹುತೇಕ ಜನ ಈ ಮಾಸ ,ತಿಥಿ, ಪಕ್ಷ ಎಲ್ಲವನ್ನು ಮದುವೆ ಅಥವಾ ಇನ್ನಿತರ ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಲು, ಮುಹೂರ್ತ ಹೇಳಲು ಮಾತ್ರ ಇಂದು ಉಪಯೋಗ ಮಾಡ್ತಾ ಇದ್ದಾರೆ ಅಷ್ಟೇ. ಚಾಂದ್ರಮಾನ ಕಾಲಗಣನೆಯೇ ಒಂದು ದೊಡ್ಡ ಅಧ್ಯಯನ ವಿಚಾರ. ಇನ್ನು ಸೌರಮಾನ ಕಾಲಗಣನೆ ಅದಕ್ಕಿಂತ ದೊಡ್ಡ ಸಾಗರ. ಒಟ್ಟಿನಲ್ಲಿ ನಮ್ಮ ಪೂರ್ವಜರು ಸಾವಿರಾರು ವರ್ಷಗಳ ಹಿಂದೆ ವೈಜ್ಞಾನಿಕವಾಗಿ ತರ್ಕಬದ್ಧವಾಗಿ ಹಾಕಿಕೊಟ್ಟ ದಿನಗಳ ಲೆಕ್ಕಾಚಾರ ನಮಗೆ ಬೇಡವಾಗಿದೆ ಅಷ್ಟೇ. ಇಂದು ಅದನ್ನೇ ವಿಜ್ಞಾನಿಗಳು ಬೇರೆ ರೀತಿಯಲ್ಲಿ ಹೇಳಿದಾಗ ವಾವ್! ಎನ್ನುತ್ತೇವೆ….
ಸಂಗ್ರಹ : ಮಂಜುಳಾ ಆನಂದ್
- ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು
- ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಗೆಲುವು: ಅಧಿಕೃತ ಘೋಷಣೆ ಬಾಕಿ
- ರಾಜ್ಯದ ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ: ಬಿಜೆಪಿಗೆ ಆಘಾತ
- ಕಾಪರ್ ಏಜ್ ಇನ್ಸ್ಟಿಟ್ಯೂಟ್ ಮಾಲೀಕ ಶರತ್ ಆತ್ಮಹತ್ಯೆ: ಕಾರಣ ನಿಗೂಢ
- 104ರನ್ಗೆ ಆಸ್ಟ್ರೇಲಿಯಾ ಆಲೌಟ್ ,ಬುಮ್ರಾಗೆ 5 ವಿಕೆಟ್
More Stories
ಜಲಗಾರ ಮತ್ತು ಕಾಲ ಜ್ಞಾನಿ ಕನಕ ನಾಟಕಗಳಲ್ಲಿ ದೈವ-ದೇಗುಲ ಸಂಕಥನ
ಕನ್ನಡ ರಾಜ್ಯೋತ್ಸವ
ಬದುಕಿದ್ದೂ ಸತ್ತಂತಿರುವವರು ನೂರಾರು ; ಸತ್ತೂ ಬದುಕಿರುವ ಒಂದೇ ಒಂದು ಕೊಹಿನೂರು..!