ಕರುನಾಡ ಜಿಲ್ಲೆಗಳ ಕಿರು ಪರಿಚಯ – 12 – ಧಾರವಾಡ

Team Newsnap
1 Min Read

ಕಲಾವತಿ ಪ್ರಕಾಶ್
ಬೆಂಗಳೂರು

ಈ ಹೆಸರು ಬಂದಿದ್ದು ಸಂಸ್ಕ್ರತದ ದ್ವಾರಾವಾಟಾದಿಂದ
ದ್ವಾರ ಎಂದರೆ ಬಾಗಿಲು ವಾಟಾ ಎಂದರೆ ಊರೆಂದು
ಕನ್ನಡದಲ್ಲಿದರರ್ಥ ಸುದೀರ್ಘ ಪ್ರಯಾಣದಲ್ಲಿ ವಿಶ್ರಾಂತಿ ಪಡೆಯುವ ಧಾಮವದೇ ಧಾರವಾಡವೆಂದು

ಬಾದಾಮಿ ಅರಸರು ಚಾಲುಕ್ಯರು ರಾಷ್ಟ್ರಕೂಟರು ವಿಜಯನಗರದರಸರು ಮೈಸೂರು ಅರಸರು
ಆದಿಲ್ ಶಾಹಿ ಪುಣೆಯ ಪೇಶ್ವೆಯವರೂ ಆಳಿದರು
ಕನ್ನಡಿಗರು ಬ್ರಿಟೀಷರ ಭಾಷಾ ಹೇರಿಕೆಗೆ ನಲುಗಿದರು

ಧಾರವಾಡ ಹುಬ್ಬಳ್ಳಿ ಕುಂದಗೋಳ ನವಲಗುಂದ
ಕಲಘಟಗಿ ತಾಲ್ಲೂಕುಗಳ ವೈಶಿಷ್ಟ್ಯ ಎಂಥ ಚಂದ
ಹುಬ್ಬಳ್ಳಿ ಧಾರವಾಡ ಹೆಸರಾಂತ ಅವಳಿ ನಗರಗಳು
ಈ ನಗರಗಳು ವಾಣಿಜ್ಯ ಸಂಸ್ಕೃತಿಯ ಕೇಂದ್ರಗಳು

ಸಾಧನಕೇರಿಯ ಅಂಬಿಕಾತನಯ ದತ್ತರ ಕಾವ್ಯ ಕೃಷಿಗೆ
ಉತ್ತೇಜನ ನೀಡಿ ಬೆಳೆಸಿದರು ಸಾಧನಕೇರಿಯೊಳಗೆ
ಕೆರೆ ಉದ್ಯಾನವನ ಬೇಂದ್ರೆ ಭವನಗಳು ಆಕರ್ಷಕ
ನಾಕು ತಂತಿ ಕಾವ್ಯ ಜ್ಞಾನ ಪೀಠ ಪ್ರಶಸ್ತಿ ತಂತು ಕನ್ನಡಕ

ಹಿಂದೂಸ್ತಾನಿ ಗಾಯಕಿ ಗಂಗೂಬಾಯಿ ಹಾನಗಲ್ ರು
ಪಂಡಿತ್ ಭೀಮಸೇನ ಜ್ಯೋಷಿ ಬಸವರಾಜರಾಜಗುರು
ಧಾರವಾಡದ ಹೆಮ್ಮೆ ಸಂಗೀತ ಕಟ್ಟಿ ಮುಂತಾದವರು
ಕನ್ನಡಕ್ಕಾಗಿ ಹೋರಾಡಿದ ಆಲೂರು ವೆಂಕಟರಾಯರು

ಜಾನಪದ ಕಲೆಗಳ ಪೋಷಿಸಿದ ನಾಡು ಧಾರವಾಡ
ಡೊಳ್ಳುಕುಣಿತ,ವೀರಗಾಸೆ,ನಂದಿಕೋಲು ನೋಡ
ಜೋಡು ಹಲಗೆ ಲಂಬಾಣಿ ನೃತ್ಯ ಇತ್ಯಾದಿ ಕಲೆಗಳು
ಕೃಷಿ ಕಾನೂನು ಕರ್ನಾಟಕ ವಿಶ್ವ ವಿದ್ಯಾಲಯಗಳು

ಮುರುಘಾಮಠ ಮೂರು ಸಾವಿರಮಠವಿದೆ
ಸಿದ್ದಾರೂಢ ಮಠ ಜ್ಞಾನ ದಾಸೋಹಕೆ ಹೆಸರಾಗಿದೆ
ಉಳುವಿಯ ಚನ್ನಬಸವೇಶ್ವರ ಗುಡಿ ಕಾಡಿನಲ್ಲಿದೆ ಬನಶಮಕರಿ ಗುಡಿ ಅಮರಗೋಲದಲ್ಲಿದೆ

ಅಣ್ಣಿಗೇರಿಯ ಅಮೃತೇಶ್ವರ ಗುಡಿ ಅದ್ಭುತ ಕೆತ್ತನೆಯಿದೆ
ಪಶ್ಚಿಮ ಚಾಲುಕ್ಯರ ವಾಸ್ತು ಶೈಲಿಯಲ್ಲಿಯೂ ಇಲ್ಲಿದೆ
ನೃಪತುಂಗ ಬೆಟ್ಟದ ಮೇಲೆ ಮಕ್ಕಳ ಉದ್ಯಾನವಿದೆ
ಉಣಕಲ್ ಕೆರೆ ದೋಣಿವಿಹಾರ ಗ್ಲಾಸ್ ಹೌಸ್ ಅಲ್ಲಿದೆ

Share This Article
Leave a comment