ಕರುನಾಡ ಜಿಲ್ಲೆಗಳ ಕಿರು ಪರಿಚಯ – 7-ಬೆಳಗಾವಿ

Team Newsnap
1 Min Read

ಕಲಾವತಿ ಪ್ರಕಾಶ್
ಬೆಂಗಳೂರು

ಬೆಳಗಿನ+ಆವಿ=ಅಂದರೆ ಬೆಳಿಗ್ಗೆ ಬೀಳುವ
ಬೆಳ್ಳನೆ ಮಂಜು ಇರುವ ಹಾಗೆ ಆವಿ
ಅದಕೇ ಈ ಊರಿನ ಹೆಸರಾಯಿತು
ಬಲು ಚಂದದ ಬೆಳಗಾವಿ

ಬೆಳಗಾವಿಗೆ ಪುರಾತನ ಹೆಸರು
ಕರೆಯುತಿದ್ದರು ವೇಣು ಗ್ರಾಮ
ವೇಣು ಎಂದರೆ ಬಿದಿರು ಎಂದು
ಬಿದಿರು ಬೆಳೆಯುವ ಊರಿಗೆ ಈ ನಾಮ

ಬೆಳಗಾವಿ ಕೋಟೆ ನಿರ್ಮಾತೃಗಳು
“ರಟಾ” ವಂಶದ ರಾಜರು
ಕೋಟೆಯನ್ನು ಆಲಂಕರಿಸಿದರು
ಬಿಜಾಪುರದ ಸುಲ್ತಾನರು

ಶತಮಾನ ಆರರಿಂದಲೇ ಆರಂಭವೆಂದು
ತಿಳಿಯುವುದಿಲ್ಲಿ ಇತಿಹಾಸ ಶುರು
ಚಾಲುಕ್ಯ ರಾಷ್ಟ್ರಕೂಟ ಯಾದವ
ದೆಹಲಿಯ ಸುಲ್ತಾನ ಮತ್ತು ಮುಘಲರು

ಸ್ವಾತಂತ್ರ್ಯ ಸಂಗ್ರಾಮದ ಮೊದಲೇ ಕತ್ತಿ ಎತ್ತಿದ
ಕಿತ್ತೂರು ಚನ್ನಮ್ಮ ಬೆಳವಡಿ ಮಲ್ಲಮ್ಮ ರಾಯಣ್ಣರು
ಅಮಟೂರು ಬಾಳಪ್ಪ ಬಿಚ್ಚುಗತ್ತಿ ಚನ್ನಪ್ಪ
ಶಿವಪುರದ ಸತ್ಯಪ್ಪ ಹೋರಾಟ ಮಾಡಿದವರು

ಸಹ್ಯಾದ್ರಿ ತಪ್ಪಲಿನ ಬಹುಭಾಷಿಕರ ನಾಡು
ಕನ್ನಡ ಭಾಷೆಯ ಪೂಜಿಸುವ
ಅನ್ಯರ ಭಾಷೆಯ ಗೌರವಿಸುವ
ಉದಾರ ಮನಗಳ ನೆಲೆ ಬೀಡು

ಪಶ್ಚಿಮ ಘಟ್ಟದ ಜಲಪಾತ ಜಲರಾಶಿಯ ಆಗರ
ಗೊಕಾಕ್ ಜಲಪಾತವೇ ಭಾರತದ ನಯಾಗರ
ಘಟಪ್ರಭಾ ಮಲಪ್ರಭಾ ಕೃಷ್ಣ ಮಾರ್ಕಂಡೇಯರ
ದೂದ್ ಗಂಗಾ ವೇದ ಗಂಗಾ ನದಿಗಳ ಆಗರ

ಉತ್ತಮ ಗುಣಮಟ್ಟದ ಬ್ಯಾಕ್ವೇಟ್
ಅಲ್ಯುಮಿನಿಯಮ್ ದೊರೆಯುವುದಿಲ್ಲೆ
ಭಾರತೀಯ ಸೇನಾಪಡೆ ತರಬೇತಿ
ಕೇಂದ್ರ ಇರುವ ಸೇನೆಯ ವಾಯುನೆಲೆ

ಹುದಲಿ ಖಾದಿ ಗ್ರಾಮೋದ್ಯೋಗಕೆ ಪ್ರಸಿದ್ಧ ತಾಣ
ತಯಾರಿಕೆಯಲು ೨ನೇ ಸ್ಥಾನ (ಹೆಲ್ಮೆಟ್) ಶರಸ್ಥಾಣ
ಎತ್ತರದ ಧ್ವಜಸ್ತಂಭ ಇರುವುದು ಬೆಳಗಾವಿಯಲೆ
ಒಲಂಪಿಕ್ಸ್ ನ ಓಟಗಾರ ಮಡೆಪ್ಪ ತಾರಪ್ಪ ಚೌಗ್ಲೆ

ಹಾಲು ಉತ್ಪಾದನೆ ಕರುನಾಡಲ್ಲೆ ೨ನೆ ಸ್ಥಾನ
ಅತಿ ಹೆಚ್ಚು ಸಕ್ಕರೆ ಕಾರ್ಖಾನೆ ಗಳೆಂಬ ಮಾನ
ಮೂರು ರಾಜ್ಯ ಗಳಿಗೆಲ್ಲ ಸಾಕಾಗುವಷ್ಟು
ಹಣ್ಣು ತರಕಾರಿಗಳ ಬೆಳೆವರು ಬೇಕಾಗುವಷ್ಟು

ಜಾನಪದ ಲಾವಣಿ ರಿಯಾತ ಹಂತಿ ಪದ
ಕರಗತ ಮಾಡಿಕೊಂಡ ಬೀಸೋ ಕಲ್ಲಿನ ಪದ
ಚಂದ್ರಶೇಖರ್ ಕಂಬಾರ ವಿ ಕೃ ಗೋಕಾಕರು
ಬಸವರಾಜ ಕಟ್ಟೀಮನಿ ಸಿದ್ದಯ್ಯ ಪುರಾಣಿಕರು

Share This Article
Leave a comment