ಕರುನಾಡ ಜಿಲ್ಲೆಗಳ ಕಿರು ಪರಿಚಯ – 17-ದಾವಣಗೆರೆ

Team Newsnap
1 Min Read

ಕಲಾವತಿ ಪ್ರಕಾಶ್
ಬೆಂಗಳೂರು

ಚಾಲುಕ್ಯರು ಕುದುರೆ ಸವಾರಿಯ ಆಯಾಸದಿಂದ
ಬಾಯಾರಿಕೆ ನೀಗಿಸಿಕೊಂಡರು ದಣಿವಿನ ಕೆರೆಯಿಂದ
ದಣಿವಿನ ಕೆರೆಯಿಂದ ಈ ದಾವಣಗೆರೆ ಹೆಸರಾಗಿದೆ
ದಾವಣಗೆರೆ ದಖನ್ ಪ್ರಸ್ಥಭೂಮಿಯ ಮೈದಾನದಲ್ಲಿದೆ

ಮೌರ್ಯರು ಸಾತವಾಹನರು ಪಲ್ಲವರು ಕದಂಬರು
ಹೊಯ್ಸಳರು ಮೊಘಲರು ವಿಜಯನಗರದರಸರು
ಚಾಲುಕ್ಯರಲ್ಲದೆ ಅನೇಕ ರಾಜರುಗಳಿಲ್ಲಿ ಆಳಿದರು
ಅವಳಿ ನಗರಗಳಿವು ದಾವಣಗೆರೆ ಮತ್ತು ಹರಿಹರ

ಹರಿಹರ ದಾವಣಗೆರೆ ಹೊನ್ನಾಳಿ ಜಗಳೂರುಗಳು
ಚನ್ನಗಿರಿ ನ್ಯಾಮತಿ ಈ ಜಿಲ್ಲೆಯ ೬ ತಾಲ್ಲೂಕುಗಳು
ಹತ್ತಿ ಮೆಕ್ಕೆಜೋಳ ಕಡಲೆ ಸೂರ್ಯಕಾಂತಿಗಳು
ಭತ್ತ ಜೋಳ ಮುಂತಾದವು ಇಲ್ಲಿನ ಬೆಳೆಗಳು

ದಾವಣಗೆರೆ ಬೆಣ್ಣೆ ದೋಸೆ ಮಿರ್ಚಿ ಮಂಡಕ್ಕಿಗಳು
ಜೋಳದ ರೊಟ್ಟಿ ತಾಳಿಪಟ್ಟು ಪ್ರಸಿದ್ಧ ಖಾದ್ಯಗಳು
ಚಿತ್ರಕಲೆ ವಸ್ತ್ರ ನಿನ್ಯಾಸ ಕಲೆ ವಾಣಿಜ್ಯ ಕೇಂದ್ರಗಳು
ದಾವಣಗೆರೆ ದಕ್ಷಿಣದ ಜವಳಿ ರಾಜಧಾನಿ ಎನ್ನುವರು

ಉಚ್ಛ್ರಾಣಿ ಬೆಟ್ಟ ಮಾಯಕೊಂಡ ಪರ್ವತ ಶ್ರೇಣಿಗಳು
ಸೂಳೆಕೆರೆ ಹಳ್ಳ ತುಂಗಭದ್ರ, ಸಿರುವಣಿ ಜಲಪಾತಗಳು
ಕಬ್ಬಿಣದ ಅದಿರು ಮತ್ತು ಮ್ಯಾಂಗನೀಸ್ ಕಲ್ನಾರುಗಳು
ತಾಮ್ರದದಿರು ಸಿಮೆಂಟ್ ದರ್ಜೆಯ ಸುಣ್ಣದ ಕಲ್ಲುಗಳು

ಹೊನ್ನಾಳಿಯ ಪಿ ಲಂಕೇಶ್ ಚಿದಾನಂದ ಮೂರ್ತಿಗಳು
ಎಚ್ ಎಸ್ ವೆಂಕಟೇಶ್ ಮೂರ್ತಿ ಇಲ್ಲಿನ ಸಾಹಿತಿಗಳು
ಶಾಂತಿಸಾಗರ ಕೆರೆ ಏಷ್ಯಾದ ೨ನೇ ದೊಡ್ಡ ಸರೋವರ
ದಾವಣಗೆರೆ ಕರ್ನಾಟಕದ ಮ್ಯಾಂಚಿಸ್ಟರೆಂದು ಕರಿತಾರ

ಕೊಂಡಜ್ಜಿ ಅರಣ್ಯಧಾಮ ಉಚ್ಚಂಗಿ ದುರ್ಗದ ಕೋಟೆ
ಇಂದಿರಾ ಪ್ರಿಯದರ್ಶಿನಿ ಪ್ರಾಣಿ ಸಂಗ್ರಹಾಲಯವುಂಟು
ಭಾರತದಲ್ಲೇ ಅತಿದೊಡ್ಡ ಗ್ಲಾಸ್ ಹೌಸ್ ಸಹ ಇಲ್ಲುಂಟು
ಸಂತೆಬೆನ್ನೂರ ಪುಷ್ಕರಣಿ ಜೈನ ತೀರ್ಥಂಕರ ಬಸದಿ ಇದೆ

ಬಾಗಳಿಯ ಕಲ್ಲೇಶ್ವರ ಸ್ವಾಮಿ ರಂಗನಾಥ ದೇವಾಲಯ
ಬೆಟಗೇರಿ ಶಿವಾನಂದ ಮುನಿ ಹರಿಹರೇಶ್ವರ ಆಲಯ
ವೃಷಭಮಠ ಉಕ್ಕಡಗಾತಿ ಕರಿಬಸವೇಶ್ವರರ ಗುಡಿ ಕೊಮಾರನಹಳ್ಳಿಯ ಹೆಳವನಕಟ್ಟೆ ಶ್ರೀ ರಂಗನಾಥ
ದಾವಣಗೆರೆಯನೊಮ್ಮೆ ಎಲ್ಲರೂ ಬಂದು ನೋಡಿ

Share This Article
Leave a comment