ಸಿಎಂ ಬೊಮ್ಮಾಯಿ ಸ್ವಕ್ಷೇತ್ರದಲ್ಲಿ ಗುಂಡಿನ ಸದ್ದು- KGF-2 ಚಿತ್ರ ವೀಕ್ಷಣೆ ವೇಳೆ ಗುಂಡೇಟು

Team Newsnap
1 Min Read

KGF-2 ಚಲನಚಿತ್ರ ವೀಕ್ಷಣೆ ವೇಳೆ ಪ್ರೇಕ್ಷಕನ ಮೇಲೆ ಗುಂಡು ಹಾರಿಸಿರುವ ಘಟನೆ ಹಾವೇರಿ ಜಿಲ್ಲೆ ಶಿಗ್ಗಾಂವಿ ಪಟ್ಟಣದ ರಾಜೇಶ್ವರಿ ಚಿತ್ರಮಂದಿರದಲ್ಲಿ ಜರುಗಿದೆ.

ಈ ಘಟನೆಯಲ್ಲಿ ವಸಂತಕುಮಾರ ಎಂಬ ಯುವಕನಿಗೆ ಗುಂಡು ತಗುಲಿದೆ, ಯುವಕನ ಹೊಟ್ಟೆಯ ಭಾಗಕ್ಕೆ ಗುಂಡು ಹೊಕ್ಕಿದೆ. ಸದ್ಯ ಗಾಯಾಳುವಿಗೆ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆ ಮಾಡಲಾಗಿದೆ.

ಈ ಕುರಿತಂತೆ ಮಾಹಿತಿ ಖಚಿತ ಪಡಿಸಿದ ಎಸ್​​​​ಪಿ ಹನುಮಂತರಾಯ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಿಗ್ಗಾಂವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ ಎಂದಿದ್ದಾರೆ.

ಚಿತ್ರ ನೋಡುವಾಗ ಎದುರುಗಡೆ ಸೀಟ್​ ಮೇಲೆ ಕಾಲು ಹಾಕಿದ್ದಕ್ಕೆ ವಸಂತಕುಮಾರ ಹಾಗೂ ಆರೋಪಿ ನಡುವೆ ಮಾತಿನ ಚಕಮಕಿ ಉಂಟಾಗಿದೆ. ಈ ವೇಳೆ , ಜಗಳ ವಿಕೋಪಕ್ಕೆ ತಿರುಗಿದೆ. ಆಗ ವಸಂತಕುಮಾರನ ಮೇಲೆ ಗುಂಡು ಹಾರಿಸಿದ್ದಾರೆ. ವಸಂತ್​ ಮೇಲೆ ಮೂರು ಸುತ್ತು ಗುಂಡು ಹಾರಿಸಲಾಗಿದೆ.

2 ಗುಂಡು ಕಾಲಿಗೆ, ಮತ್ತೊಂದು ಮಿಸ್‌ಫೈರ್‌ ಆಗಿದೆ. ಗುಂಡಿನ ಸದ್ದು ಕೇಳುತ್ತಿದ್ದಂತೆ ಹೊರಗಡೆ ಪ್ರೇಕ್ಷಕರು ಓಡಿ ಹೋಗಿದ್ದಾರೆ. ಕೆಜಿಎಫ್‌-2 ನೋಡಲು ನಾಲ್ವರ ಜೊತೆ ವಸಂತಕುಮಾರ ಬಂದಿದ್ದ, ಸದ್ಯ ಗುಂಡು ಹಾರಿಸಿದ ಆರೋಪಿಗಾಗಿ ತೀವ್ರ ಶೋಧ ನಡೆಸಿದ್ದೇವೆ ಎಂದು ತಿಳಿಸಿದ್ದಾರೆ.

Share This Article
Leave a comment