ದೇಶ ಕಂಡ ಶೋಕಿಲಾಲ್ ಪ್ರಧಾನಿ ಎಂದರೆ ಮೋದಿ – ಉಗ್ರಪ್ಪ ಟೀಕೆ

Team Newsnap
1 Min Read

ಮಣಿಪುರದ ವಿಷಯದಲ್ಲಿ ನಿರ್ಲಕ್ಷ್ಯ ವಹಿಸುತ್ತಿರುವ ಪ್ರಧಾನಿ ಮೋದಿಯವರಿಗೆ ಈ ದೇಶದ ಪ್ರಜಾಪ್ರಭುತ್ವವನ್ನು ಉಳಿಸಲು ಯಾವುದೇ ಬದ್ಧತೆಯಿಲ್ಲ ಎಂದು ಮಾಜಿ ಸಚಿವ ವಿ. ಉಗ್ರಪ್ಪ ಕಿಡಿ ಕಾರಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ದೇಶ ಕಂಡ ಅತ್ಯಂತ ಶೋಕಿಲಾಲ್ ಪ್ರಧಾನಿ ಅಂತ ಯಾರಾದರೂ ಇದ್ದರೆ ಅದು ಮಿಸ್ಟರ್ ಮೋದಿ ಎಂದು ಲೇವಡಿ ಮಾಡಿದರು.

ರೋಮ್ ಹೊತ್ತಿ ಉರಿಯುವಾಗ ನೀರೋ ಪಿಟೀಲು ಬಾರಿಸಿದಂತೆ, ಇಡೀ ದೇಶವೇ ಹೊತ್ತಿ ಉರಿಯುತ್ತಿರುವುದಾಗ ಪ್ರಧಾನಿ ಮೋದಿ ತಿಲಕ್ ಪದಕ ಪಡೆಯಲು ಪುಣೆಗೆ ಪ್ರಯಾಣಿಸುತ್ತಾರೆ ಎಂದು ಟೀಕಿಸಿದ ವಿ.ಎಸ್.ಉಗ್ರಪ್ಪ, ಸ್ವತಃ ತಮ್ಮ ಕುಟುಂಬದವರನ್ನೇ ಪಾಲನೆ, ಪೋಷಣೆ, ರಕ್ಷಣೆ ಮಾಡದ ಪ್ರಧಾನಿ ಈ ದೇಶದ ಅಥವಾ ಮಣಿಪುರದ ಹೆಣ್ಣುಮಕ್ಕಳ ರಕ್ಷಣೆ ಮಾಡಲು ಸಾಧ್ಯವೇ ಎಂದು ಕಿಡಿಕಾರಿದರು.

ಸ್ವಲ್ಪವಾದರೂ ನಿಮಗೆ ಸಂವಿಧಾನದ ಬಗ್ಗೆ ಬದ್ಧತೆಯಿದ್ದರೆ ಮೊದಲು ಸಂಸತ್ತಿಗೆ ಹಾಜರಾಗಿ, ಸುಪ್ರೀಂ ಕೋರ್ಟ್ ಅಭಿಪ್ರಾಯದಂತೆ ಮಣಿಪುರದ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತವನ್ನು ಜಾರಿಗೊಳಿಸಿ ಎಂದು ಆಗ್ರಹಿಸಿದ ಉಗ್ರಪ್ಪನವರು, ಅಲ್ಲಿರುವ ಎಲ್ಲ ವರ್ಗದ ಜನರ ರಕ್ಷಣೆಗೆ ಮುಂದಾಗಿ ಎಂದರು.

Share This Article
Leave a comment