ಮದ್ಯಪ್ರಿಯರಿಂದ ರಾಜ್ಯ ಸರಕಾರಕ್ಕೇ ಶಾಕ್‌

Team Newsnap
1 Min Read

ಬೆಂಗಳೂರು : ಫೆಬ್ರವರಿ 1ರಿಂದ ರಾಜ್ಯ ಸರ್ಕಾರ ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆಯನ್ನು ಶೇ 185ರಿಂದ 195ಕ್ಕೆ ಏರಿಸಿ ಮದ್ಯಪ್ರಿಯರ ಕಿಸಿಗೆ ಕೈ ಹಾಕಲು ಮಂದಾಗಿತ್ತು. ಇದೀಗಾ ಮದ್ಯಪ್ರಿಯರೇ ರಾಜ್ಯ ಸರ್ಕಾರಕ್ಕೆ ಶಾಕ್‌ ನೀಡಿದ್ದಾರೆ.

ಫೆಬ್ರವರಿ 1ರಂದು ಎಇಡಿ ಹೆಚ್ಚಳದ ನಂತರ ಬಿಯರ್ ಮಾರಾಟದಲ್ಲಿ ಕಡಿಮೆಯಾಗಿದೆ ಎನ್ನಲಾಗಿದೆ.

ಬಿಯರ್‌ ದರವು ಕನಿಷ್ಠ 8 ರೂ.ಗಳಿಂದ ಗರಿಷ್ಠ 15 ರೂ.ವರೆಗೆ ಹೆಚ್ಚಳವಾಗಿದೆ . ಇದರಿಂದಾಗಿ
ಮದ್ಯಪ್ರಿಯರು ಬಿಯರ್‌ ಖರೀದಿಗೆ ನಿರಾಸಕ್ತಿ ತೋರಿ , ರಾಜ್ಯದೆಲ್ಲೆಡೆ ಫೆಬ್ರವರಿ 1ರಿಂದಲೂ ಬಿಯರ್‌ ಮಾರಾಟದಲ್ಲಿ ಕಡಿಮೆಯಾಗಿದೆ ಎನ್ನಲಾಗಿದೆ.

ಮದ್ಯ ಪ್ರಿಯರು ಕಡಿಮೆ ಬೆಲೆಯ ಬಿಯರ್‌ ಬ್ರ್ಯಾಂಡ್‌ಗಳತ್ತ ಮುಖ ಮಾಡುತ್ತಿದ್ದಾರೆ ಮತ್ತು ಕೆಲ ಮದ್ಯಪ್ರಿಯರು ಬಿಯರ್‌ ಖರೀದಿ ಪ್ರಮಾಣ ಕಡಿಮೆ ಮಾಡಲು ಮುಂದಾಗುತ್ತಿದ್ದಾರೆ .‘ಗ್ಯಾರಂಟಿ ಯೋಜನೆ’ಗಳಿಗೆ ರಾಜ್ಯ ಸರ್ಕಾರದಿಂದ 58,000 ಕೋಟಿ ರೂ ವ್ಯಯ

ಮೊದಲಿದ್ದಂತೆ ದುಬಾರಿ ಬ್ರ್ಯಾಂಡ್‌ಗಳ ಬಿಯರ್‌ಗಳಿಗೆ ಬೇಡಿಕೆ ಇಲ್ಲ ಹಾಗು ಕಡಿಮೆ ಬೆಲೆಯ ಬಿಯರ್‌ಗಳನ್ನು ಕೊಂಡುಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.

Share This Article
Leave a comment