November 16, 2024

Newsnap Kannada

The World at your finger tips!

hike,electric,bill

If the bill is not paid, the electricity will be cut! ಬಿಲ್ ಕಟ್ಟದಿದ್ದರೆ ಕರೆಂಟ್ ಕಟ್ !

ಉಚಿತ ವಿದ್ಯುತ್ ಬಳಸುವವರಿಗೆ ಶಾಕ್ : 200 ಯೂನಿಟ್ ಮೀರಿದ್ರೆ ಪೂರ್ತಿ ಬಿಲ್

Spread the love

ಬೆಂಗಳೂರು :

ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಲಾಭ ಪಡೆಯುವವರು 200 ಯೂನಿಟ್ ಗಿಂತ ಹೆಚ್ಚಿಗೆ ಬಳಸಿದರೆ ಪೂರ್ತಿ ಬಿಲ್ ಪಾವತಿಸಬೇಕು ಎಂದು ಬೆಸ್ಕಾಂ ಹೇಳಿದೆ.

ನಮ್ಮ ಬೆಸ್ಕಾಂ ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮಂಗಳವಾರ ಈ ಮಾಹಿತಿ ಹಂಚಿಕೊಳ್ಳಲಾಗಿದೆ.

ಈ ಮುನ್ನ ವಿದ್ಯುತ್ ಕಂಪನಿಗಳು ಬಿಡುಗಡೆ ಮಾಡಿದ್ದ ಶಕ್ತಿ ಯೋಜನೆಯ ಪ್ರಶ್ನೋತ್ತರ ಮಾಲಿಕೆಯಲ್ಲಿ (FAQ) ವಾರ್ಷಿಕವಾಗಿ 200 ಯೂನಿಟ್ಗಿಂತ ಸರಾಸರಿ ಶೇ 10 ರಷ್ಟು ಹೆಚ್ಚಿಗೆ ವಿದ್ಯುತ್ ಬಳಸಿದವರಿಗೂ ಕೂಡ ಉಚಿತ ವಿದ್ಯುತ್ ನೀಡಲಾಗುವುದು ಎನ್ನಲಾಗಿತ್ತು.

ಆದರೆ ಏಕಾಏಕಿ ಬೆಸ್ಕಾಂ ಈ ರೀತಿ ಮಾಹಿತಿ ನೀಡುವ ಮೂಲಕ ಗ್ರಾಹಕರಿಗೆ ಆಘಾತ ನೀಡಿದೆ.
ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ನೀಡಿದ್ದ ಗ್ಯಾರೆಂಟಿಯಂತೆ ಅಧಿಕಾರಕ್ಕೆ ಬಂದೊಡನೆ 200 ಯೂನಿಟ್ ಉಚಿತ ವಿದ್ಯುತ್ ಪೂರೈಕೆ ಘೋಷಿಸಿತ್ತು.

ಆಸಕ್ತರು ಯೋಜನೆಗೆ ಅರ್ಜಿ ಹಾಕುವ ಮೂಲಕ ನೋಂದಣಿ ಮಾಡಿಕೊಳ್ಳಬೇಕಿದ್ದು, ರಾಜ್ಯಾದ್ಯಂತ ಕೋಟ್ಯಂತರ ಮಂದಿ ಈ ಯೋಜನೆಗೆ ಹೆಸರು ನೋಂದಾಯಿಸಿಕೊಂಡಿದ್ದರು.

Copyright © All rights reserved Newsnap | Newsever by AF themes.
error: Content is protected !!