ಆಗಸ್ಟ್ 5 ರಂದು ಕಲಬುರಗಿಯಲ್ಲಿ ಗೃಹಜ್ಯೋತಿ ಗ್ಯಾರೆಂಟಿ ಯೋಜನೆಗೆ ಚಾಲನೆ- ಜಾರ್ಜ್

Team Newsnap
1 Min Read

ಬೆಂಗಳೂರು :
ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆಗೆ ಆಗಸ್ಟ್ 5ರಂದು ಕಲಬುರಗಿಯಲ್ಲಿ ಚಾಲನೆ ನೀಡಲಾಗುವುದು.

ಇಂಧನ ಸಚಿವ ಕೆ ಜೆ ಜಾರ್ಜ್ ಈ ಮಾಹಿತಿ ನೀಡಿ ಜುಲೈ ತಿಂಗಳ 200 ಯೂನಿಟ್ ಯೊಳಗೆ ಬಳಸಿದ ಯಾವುದೇ ಗ್ರಾಹಕರು ವಿದ್ಯುತ್ ಬಿಲ್ ಪಾವತಿಸುವಂತಿಲ್ಲ. ಅವರಿಗೆ ಆಗಸ್ಟ್ ತಿಂಗಳು ಈ ವಾರದಲ್ಲಿ ಬರುವ ಬಿಲ್ ನಲ್ಲಿ ಶೂನ್ಯ ಮೊತ್ತ ಎಂದು ದಾಖಲಾಗಿರುತ್ತದೆ ಎಂದರು.

200 ಯೂನಿಟ್ ಗೂ ಹೆಚ್ಚು ವಿದ್ಯುತ್ ಬಳಕೆ ಮಾಡಿದರೆ ಪೂರ್ಣ ಬಿಲ್ ಪಾವತಿ ಮಾಡಬೇಕು. ಮುಂದಿನ ದಿನಗಳಲ್ಲಿ 200 ಯೂನಿಟ್ ಗೂ ಹೆಚ್ಚು ಬಳಕೆ ಮಾಡಿದರೆ ಅಂತಹ ಗ್ರಾಹಕರಿಗೆ ಹೇಗೆ ಯೋಜನೆ ಲಾಭ ನೀಡಬೇಕು ಎಂಬ ಬಗ್ಗೆ ಸಿಎಂ ಜೊತೆ ಚೆರ್ಚೆ ಮಾಡಲಾಗುವುದು ಎಂದರು.

1 ಕೋಟಿ 43 ಲಕ್ಷ ಗ್ರಾಹಕರು ಅರ್ಜಿ: ಶೇ.10 ರಷ್ಟು ಹೆಚ್ಚುವರಿ ಉಚಿತ ವಿದ್ಯುತ್ ನ್ನು ಗ್ರಾಹಕರಿಗೆ ಕೊಡುವ ಉದ್ದೇಶದಿಂದ ಒಂದು ವರ್ಷದ ಸರಾಸರಿ ವಿದ್ಯುತ್ ಬಿಲ್ ಪರಿಗಣಿಸಿದ್ದು, ಈ ಯೋಜನೆಗೆ 1 ಕೋಟಿ 43 ಲಕ್ಷ ಗ್ರಾಹಕರು ಅರ್ಜಿ ಸಲ್ಲಿಸಿದ್ದಾರೆ.

ಆಗಸ್ಟ್ 5ರಂದು ಕಲಬುರಗಿಯಲ್ಲಿ ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಪ್ರಿಯಾಂಕ್ ಖರ್ಗೆ ಭಾಗಿಯಾಗಲಿದ್ದಾರೆ.

Share This Article
Leave a comment