ಕಾಂಗ್ರೆಸ್ ಗೆ ಮತ್ತೊಂದು ಶಾಕ್ : ಎಸಿಬಿ ರದ್ದುಗೊಳಿಸಿ ಹೈಕೋರ್ಟ್​ ಆದೇಶ – ಲೋಕಯುಕ್ತಕ್ಕೆ ಮತ್ತೆ ಅಧಿಕಾರ

Team Newsnap
1 Min Read
shock for Congress: High Court order to cancel ACB - Lokyukta gets power again

2016 ರಲ್ಲಿ ಕಾಂಗ್ರೆಸ್ ಸರ್ಕಾರ ಜಾರಿ ಮಾಡಿದ್ದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರದ್ದುಗೊಳಿಸಿ ಕರ್ನಾಟಕ ಹೈಕೋರ್ಟ್​ ಆದೇಶ ಹೊರಡಿಸಿದೆ.

ಈ ಸಂಬಂಧ ನ್ಯಾ ವೀರಪ್ಪ. ನವರು ಮಹತ್ವದ ಆದೇಶ ಹೊರಡಿಸಿದ ಹೈಕೋರ್ಟ್​, ಎಸಿಬಿ ರದ್ದುಗೊಳಿಸಿ ಮತ್ತೆ ಸ್ವತಂತ್ರವಾಗಿ ಲೋಕಾಯುಕ್ತ ಕಾರ್ಯ ನಿರ್ವಹಿಸಬೇಕು ಎಂದು ತೀರ್ಪು ನೀಡಿದ್ದಾರೆ.ಇದನ್ನು ಓದಿ –ಆಗಸ್ಟ್ 19 ರಂದು ರೋಹಿಣಿ ಸಿಂಧೂರಿಗೆ ಮೈಸೂರಿನಲ್ಲಿ ವಿಚಾರಣೆ

ಈ ಹಿಂದಿನ ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಲೋಕಾಯುಕ್ತವನ್ನು ನಿಯಂತ್ರಿಸಲು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರಚಿಸಿತ್ತು. ಭಾರತದಲ್ಲಿ ಎರಡು ಭ್ರಷ್ಟಾಚಾರ ನಿಗ್ರಹ ಸಂಸ್ಥೆಗಳನ್ನು ಹೊಂದಿರುವ ರಾಜ್ಯ ಕರ್ನಾಟಕ ಮಾತ್ರ ಆಗಿತ್ತು. ಹೀಗಾಗಿ ಎಸಿಬಿಯನ್ನು ಮುಚ್ಚಬೇಕು ಎಂದು ಹಲವರು ಹೈಕೋರ್ಟ್​ ಮೆಟ್ಟಿಲೇರಿದ್ದರು.

ಎಸಿಬಿಯ ಎಲ್ಲಾ ಪ್ರಕರಣಗಳನ್ನು ಎಸಿಬಿ ಲೋಕಾಯುಕ್ತಕ್ಕೆ. ವಹಿಸಿಕೊಡುವಂತೆ ಕೋರ್ಟ್ ಹೇಳಿದೆ.

Share This Article
Leave a comment