December 5, 2022

Newsnap Kannada

The World at your finger tips!

Murder,minister,politics

Shobha Karandlaje visits Praveen's- 5 lakh and checks to family

ಪ್ರವೀಣ್ ನಿವಾಸಕ್ಕೆ ಸಚಿವೆ ಶೋಭಾ ಕರಂದ್ಲಾಜೆ ಭೇಟಿ-ಕುಟುಂಬಕ್ಕೆ 5 ಲಕ್ಷ ರು ನಗದು, ಚೆಕ್ ವಿತರಣೆ

Spread the love

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಬೆಳ್ಳಾರೆ ಬಿಜೆಪಿ ಯುವ ಘಟಕದ ಮುಖಂಡ ಪ್ರವೀಣ್ ನೆಟ್ಟಾರು ನಿವಾಸಕ್ಕೆ  ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಭೇಟಿ ನೀಡಿ ಕುಟುಂಸ್ಥರಿಗೆ ಸಂತ್ವಾನ ಹೇಳಿದ್ದಾರೆ.

ಸಚಿವೆ ಶೋಭಾ ಕರಂದ್ಲಾಜೆ ಎದುರು ಕುಟುಂಬಸ್ಥರು ನ್ಯಾಯ ಕೊಡಿಸುವಂತೆ ಕಣ್ಣೀರು ಹಾಕಿದ್ದರು. ಇದೇ ವೇಳೆ ನ್ಯಾಯ ದೊರಕಿಸುವ ಭರವಸೆಯನ್ನು ನೀಡಿದರು.ಇದನ್ನು ಓದಿ –ಮುಂಬೈ ನಲ್ಲಿ ಶಿವಸೇನಾ ಸಂಸದ ರಾವತ್ ನಿವಾಸದ ಮೇಲೆ ED ದಾಳಿ

ಬಳಿಕ ಕುಟುಂಬಸ್ಥರಿಗೆ 5 ಲಕ್ಷ ರು ನಗದು, ಅವರ ಒಂದು ತಿಂಗಳ ಸಂಬಳ ಹಾಗೂ ಚೆಕ್ ನೀಡಿದ್ದಾರೆ.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಶೋಭಾ ಕರಂದ್ಲಾಜೆ ಅವರು, ಪ್ರವೀಣ್ ನೆಟ್ಟಾರು ಸಾವು ನಮಗೆಲ್ಲರಿಗೂ ದುಃಖ ತಂದಿದೆ. ಅಮಾಯಕರ ಸಾವು ನೋವುಂಟು ಮಾಡಿದೆ. ಪ್ರೀತಿಯಿಂದ ಬದುಕುತ್ತಿದ್ದ ಪ್ರವೀಣ್ ಇಂದು ನಮ್ಮೊಂದಿಗೆ ಇಲ್ಲ. ಸಮಸ್ಯೆ ಆದಾಗ ಪ್ರವೀಣ್ ಸ್ಪಂದಿಸುತ್ತಿದ್ದ. ಹತ್ಯೆಯಾದಾಗ ನಾನು ದೆಹಲಿಯಲ್ಲಿ ಇದ್ದೆ. ಕೇರಳ ಮಾದರಿಯಲ್ಲಿ ಪ್ರವೀಣ್ ಕೊಲೆಯನ್ನು ಮಾಡಿದ್ದಾರೆ. NIA ತನಿಖೆಗೆ ನಡೆಸಲು ನೀಡಿದ್ದಾರೆ. ಈ ತನಿಖೆಯಲ್ಲಿ ನಿಜವಾದ ಆರೋಪಿಗಳು ಸಿಗುತ್ತಾರೆ, ಕಠಿಣ ಶಿಕ್ಷೆಯಾಗುತ್ತದೆ ಎಂದು ತಿಳಿಸಿದರು.

error: Content is protected !!