ಶಿವಮೊಗ್ಗದಲ್ಲಿ ಕಳೆದ ಫೆ 20 ರಂದು ನಡೆದ ಹಿಂದೂ ಕಾರ್ಯಕರ್ತ ಹರ್ಷ ಹತ್ಯೆಯಲ್ಲಿ ಉಗ್ರ ಸಂಘಟನೆ ಕೈವಾಡ ಇರುವುದು ಎನ್ ಐಎ ತನಿಖಾ ತಂಡಕ್ಕೆ ವಿಚಾರಣೆಯ ವೇಳೆ ಸಾಕ್ಷ್ಯಾಧಾರಗಳು ಸಿಕ್ಕಿವೆ.
ಹರ್ಷ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಎನ್‍ಐಎ ಅಧಿಕಾರಿಗಳು ಆರೋಪಿಗಳ ಮನೆ ಮೇಲೆ ದಾಳಿ ನಡೆಸಿದಾಗ ಕೆಲವೊಂದು ಎಲೆಕ್ಟ್ರಾನಿಕ್ ವಸ್ತುಗಳಿಂದ ತಾಂತ್ರಿಕ ಸಾಕ್ಷ್ಯ ಲಭ್ಯವಾಗಿದೆ. ಆರೋಪಿಗಳ ಹೇಳಿಕೆ ಮತ್ತು ತಾಂತ್ರಿಕ ಸಾಕ್ಷ್ಯಗಳ ಜೊತೆಗೆ ಶೀಘ್ರದಲ್ಲೇ ಕೋರ್ಟ್‍ಗೆ ಚಾರ್ಜ್‍ಶೀಟ್ ಸಲ್ಲಿಕೆ ಮಾಡಲು ಎನ್‍ಇಎ ಸಿದ್ಧತೆ ನಡೆಸಿದೆ.
ದೋಷಾರೋಪ ಪಟ್ಟಿಯಲ್ಲಿ ಹರ್ಷನ ಹತ್ಯೆಗೆ ಪ್ರಚೋದನೆ ನೀಡಿದ ಉಗ್ರ ಸಂಘಟನೆಯ ಹೆಸರನ್ನೂ ಉಲ್ಲೇಖಿಸಲಿದೆ ಎಂದು ಮೂಲಗಳು ಹೇಳಿವೆ
ಹತ್ಯೆಗೆ ಸಂಬಂಧಿಸಿದಂತೆ 11 ಮಂದಿ ಆರೋಪಿಗಳು ಈಗಾಗಲೇ ಜೈಲಿನಲ್ಲಿದ್ದಾರೆ. ಈ ನಡುವೆ ಪ್ರಕರಣವನ್ನು ಸರ್ಕಾರ ಎನ್‍ಐಎಗೆ ತನಿಖೆಗೆ ವರ್ಗಾಹಿಸಿತ್ತು. ಎನ್‍ಐಎ ವಿಚಾರಣೆ ವೇಳೆ ಅಧಿಕಾರಿಗಳು ಮಹತ್ವದ ಮಾಹಿತಿ ಕಲೆ ಹಾಕಿದ್ದರು. ಈವರೆಗೆ ಒಟ್ಟು 450 ಹೆಚ್ಚು ಮಂದಿಯನ್ನು ಎನ್‍ಐಎ ಅಧಿಕಾರಿಗಳು ವಿಚಾರಣೆ ಮಾಡಿದ್ದಾರೆಂಬ ಮಾಹಿತಿ ಇದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು