ಶಿಕ್ಷಕರ ಚುಣಾವಣೆಯಲ್ಲಿ ಶಶೀಲ್ ನಮೋಶಿ ಗೆಲುವು ನಿಶ್ಚಿತ. ನಾನು ಈಶಾನ್ಯ ಶಿಕ್ಷಕ ಮತ ಕ್ಷೇತ್ರದ ಎಲ್ಲಾ ಜಿಲ್ಲೆಗಳಲ್ಲೂ 18 ಜನ ಶಾಸಕರು, 5 ಜನ ಸಂಸದರು ಹಾಗೂ ಸಚಿವರು ಶಶೀಲ್ ನಮೋಷಿ ಬೆಂಬಲಕ್ಕೆ ನಿಂತಿದ್ದಾರೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶ್ವತ್ಥ ನಾರಾಯಣ ಹೇಳಿದರು.
ಕಲಬುರ್ಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಶ್ವತ್ಥ್ ನಾರಾಯಣ ‘ಪ್ರಧಾನಿ ನರೇಂದ್ರ ಮೋದಿಯವರ ಶೈಕ್ಷಣಿಕ ಕ್ರಾಂತಿ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಾಳಜಿ ಪೂರ್ವಕ ಆಡಳಿತದಲ್ಲಿ ನಾಲ್ಕು ವಿಧಾನ ಪರಿಷತ್ ಹಾಗೂ ವಿಧಾನಸಭೆಯ ಚುಣಾವಣೆಗಳಲ್ಲಿ ಬಿಜೆಪಿಯ ಗೆಲ್ಲಲಿದೆ’ ಎಂದರು.
ಶಿಕ್ಷಕರ ಚುಣಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಿಗೇ ಏಕೆ ಮತ ಹಾಕಬೇಕು ಎಂಬುದನ್ನು ತಿಳಿಸಲು ಇಪ್ಪತ್ತು ಮತದಾರರಿಗೊಬ್ಬ ಘಟ ನಾಯಕರನ್ನು ನಾವು ನೇಮಕ ಮಾಡಿದ್ದೇವೆ. ಅಲ್ಲದೇ ಪ್ರತೀ ಶಿಕ್ಷಣ ಸಂಸ್ಥೆಗೂ ಒಂದು ತಂಡವನ್ನು ಸಿದ್ಧ ಮಾಡಿದ್ದೇವೆ. ನಾವು ಮತದಾರರನ್ನು ಎ, ಬಿ ಮತ್ತು ಸಿ ವರ್ಗಗಳಾಗಿ ವಿಂಗಡಣೆ ಮಾಡಿ ಸಮೀಕ್ಷೆ ನಡೆಸಿದ್ದೇವೆ. ಎ ವರ್ಗದಲ್ಲಿ ಬಿಜೆಪಿ ಅಭ್ಯರ್ಥಿಗಳಿಗೇ ಮತ ಹಾಕುವ ಮತದಾರರಿದ್ದಾರೆ. ಬಿ ವರ್ಗದಲ್ಲಿ ಭಾಗಶಃ ಹಾಗೂ ಸಿ ವರ್ಗದಲ್ಲಿ ಬೇರೆ ಪಕ್ಷಗಳಿಗೆ ಮತ ಹಾಕುವ ಮತದಾರರಿದ್ದಾರೆ. ಬಿ ಮತ್ತು ಸಿ ವರ್ಗದವರು ಬಿಜೆಪಿಗೆ ಮತ ಹಾಕಲು ಮನವೊಲಿಸಲಾಗುವುದಿ. ನಮಗೆ ಈಗಾಗಲೇ ಎ ವರ್ಗದಲ್ಲೇ ಲೀಡ್ ಸಿಕ್ಕಿದೆ’ ಎಂದು ಮಾಹಿತಿ ನೀಡಿದರು.
ಈಶಾನ್ಯ ಶಿಕ್ಷಕ ಕ್ಷೇತ್ರದ ಅಭ್ಯರ್ಥಿಯಾದ ಶಶೀಲ್ ನಮೋಶಿ ಮಾತನಾಡಿ ‘ಶಂಕರ ಮೂರ್ತಿಯವರು ಶಿಕ್ಷಣ ಸಚಿವರಾಗಿದ್ದ ಸಮಯದಲ್ಲಿ ರಾಜ್ಯದಲ್ಲಿ 141 ಪದವಿ ಕಾಲೇಜುಗಳು ಮಾತ್ರ ಇದ್ದವು. ಆದರೆ ನಂತರ ಅವರು 204 ಪದವಿ ಕಾಲೇಜು ಆರಂಭ ಮಾಡಿ ಸುಮಾರು ಏಳು ಸಾವಿರ ಶಿಕ್ಷಕರಿಗೆ ಇದ್ಯೋಗ ದೊರಕುವಂತೆ ಮಾಡಿದ್ದರು. ಹಾಗಾಗಿ ಶೈಕ್ಷಣಿಕ ಕ್ಷೇತ್ರದ ಅಭಿವೃದ್ದಿಗೆ ಬಿಜೆಪಿಯೇ ಸರಿಯಾದ ಪಕ್ಷ ಎಂದು ಜನರಿಗೆ ತಿಳಿದಿದೆ. ಈ ಭಾಗದ ಮತದಾರರು ನನಗೆ ಅಭೂತಪೂರ್ವ ಬೆಂಬಲ ನೀಡಿದ್ದಾರೆ. ಲಾಕ್‌ಡೌನ್‌ನಿಂದ ತನಗೆ ಹೊರೆಯಾದರೂ ಸಹ ಸರ್ಕಾರ ನೌಕರರ ಒಂದು ರೂಪಾಯಿ ಸಂಬಳವನ್ನೂ ಕಡಿತಗೊಳಿಸಲಿಲ್ಲ. ಇದೇ ವೇಳೆಯಲ್ಲಿ 2400 ಉಪನ್ಯಾಸಕರ ಹುದ್ದೆಗಳನ್ನುಬಖಾಯಂ ಮಾಡಿತು. 2600ಕ್ಕೂ ಹೆಚ್ಚು ಜೆಒಸಿ ಶಿಕ್ಷಕರನ್ನು ನೇಮಿಸಿ, 1757 ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ನೀಡಿ ಶಿಕ್ಷಣ ಕ್ಷೇತ್ರ ಅಭಿವೃದ್ಧಿಗೊಳ್ಳಲು ಸಹಕಾರ ನೀಡಿದೆ. ಸರ್ಕಾರದ ಈ ಸಹಕಾರ ಪ್ರತಿಯೊಬ್ಬ ಶಿಕ್ಷಕರಿಗೂ ತಿಳಿದಿದೆ’ ಎಂದು ಚುಣಾವಣೆಯಲ್ಲಿ ತಾವು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ, ನಗರ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ಧಾಜಿ ಪಾಟೀಲ, ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ, ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಚಂದು ಪಾಟೀಲ ಉಪಸ್ಥಿತರಿದ್ದರು.
More Stories
ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ
ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!
ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ