December 21, 2024

Newsnap Kannada

The World at your finger tips!

rohini and sharat

ಮೈಸೂರು ಡಿಸಿಯಾಗಿ ಶರತ್ ಮರು ನೇಮಕ- ಸರ್ಕಾರ , ರೋಹಿಣಿಗೆ ಮುಖಭಂಗ

Spread the love

ಮತ್ತೆ ಬಿ. ಶರತ್ ಅವರನ್ನೇ ಮೈಸೂರು ಡಿ ಸಿ ಯಾಗಿ ಮರು ನೇಮಕ ಮಾಡಿ ಕೇಂದ್ರೀಯ ಆಡಳಿತ ನ್ಯಾಯ ಮಂಡಳಿ ಮಹತ್ವದ ತೀರ್ಪು ನೀಡಿದೆ.

ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಬಿ. ಶರತ್ ಅವರನ್ನು ಕೇವಲ 29 ದಿನದಲ್ಲಿ ವರ್ಗಾವಣೆ ಮಾಡಿ ರೋಹಿಣಿ ಸಿಂಧೂರಿಯವರನ್ನು ಡಿಸಿ ಆಗಿ ನೇಮಕ ಮಾಡಿದ ಸರ್ಕಾರದ ನಿರ್ಧಾರ ಈಗ ಮುಖಭಂಗವಾಗಿದೆ.

ROHINI1

ಶರತ್ ಅವರ ಜಾಗಕ್ಕೆ ರೋಹಿಣಿ ಸಿಂಧೂರಿಯವರನ್ನು ಮೈಸೂರು ಜಿಲ್ಲಾಧಿಕಾರಿಯಾಗಿ ನೇಮಿಸಿದ್ದ ರಾಜ್ಯ ಸರ್ಕಾರದ ಆದೇಶಕ್ಕೆ ಹಿನ್ನಡೆ ಯಾದಂತಾಗಿದೆ

ಡಿಸೆಂಬರ್ 22 ರೊಳಗೆ ಈ ಸಂಬಂಧ ಆದೇಶ ಹೊರಡಿಸಲು ರಾಜ್ಯ ಸರ್ಕಾರಕ್ಕೆ ಸೂಚಿಸುವಂತೆ ತಿಳಿಸಲು ಅಡ್ವೊಕೇಟ್ ಜನರಲ್ ಗೆ ಸಿಎಟಿ ನಿರ್ದೇಶನ ನೀಡಿದೆ.

ತಮ್ಮ ಆದೇಶವನ್ನು ಪಾಲಿಸದೇ ಹೋದರೆ ಡಿಸೆಂಬರ್ 22 ರಂದು ಸಿಎಟಿಯೇ ಈ ಬಗ್ಗೆ ಆದೇಶ ಹೊರಡಿಸಬೇಕಾಗುತ್ತದೆ ಎಂಬ ಎಚ್ಚರಿಕೆಯ ನಿರ್ದೇಶನವನ್ನೂ ಸಹ ನೀಡಿದೆ.

dc sharath

ಬಿ ಶರತ್ ತಮ್ಮ ವರ್ಗಾವಣೆ ಪ್ರಶ್ನಿಸಿ ಸಿಎಟಿ ಮೊರೆ ಹೋರೆ ಹೋಗಿದ್ದರು. ಅನೇಕ ಬಾರಿ ಸಿಎಟಿ ನ್ಯಾಯಾಲಯವು ರೋಹಿಣಿ ಗೆ ಅನುಕೂಲವಾಗುವಂತೆ ನಡೆದುಕೊಂಡು, ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಕೊನೆಗೆ ಸತ್ಯಕ್ಕೆ ಜಯ ಎಂಬುದು ಸಾಬೀತಾಯಿತು.

Copyright © All rights reserved Newsnap | Newsever by AF themes.
error: Content is protected !!