ಕಾಂಗ್ರೆಸ್ ನೈಜ ಬಣ್ಣ ಬಯಲು -ಮೇಲ್ಮನೆಯ ಘಟನೆ ದುರದೃಷ್ಟಕರ: ಸಚಿವ ಸುಧಾಕರ್

Team Newsnap
1 Min Read
sudhakar picture

ಚಿಂತಕರ ಚಾವಡಿ ಎಂದು ಕರೆಯಿಸಿಕೊಳ್ಳುವ ಮೇಲ್ಮನೆಯಲ್ಲಿ ಇಂದು ನಡೆದ ಘಟನೆ ಅತ್ಯಂತ ದುರದೃಷ್ಟಕರ. ಪ್ರಜಾಪ್ರಭುತ್ವದ ಬಗ್ಗೆ ಪಾಠ ಹೇಳುವ ಕಾಂಗ್ರೆಸ್ ನಾಯಕರ ನೈಜ ಬಣ್ಣ ಬಯಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಧಾನಪರಿಷತ್ತಿನಲ್ಲಿ ಕಾಂಗ್ರೆಸ್ ಸದಸ್ಯರ ಅನುಚಿತ ವರ್ತನೆ ಕುರಿತು ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿರುವ ಸಚಿವರು, ಸದನದ ಮೇಲ್ಮನೆ ಚಿಂತಕರ ಚಾವಡಿ ಎಂದು ಕರೆಯಿಸಿಕೊಳ್ಳುತ್ತದೆ. ಆದರೆ ಇಲ್ಲಿ ಇಂದು ನಡೆದ ಘಟನೆ ಅತ್ಯಂತ ದುರದೃಷ್ಟಕರವಾಗಿದ್ದು, ಇದನ್ನು ತೀವ್ರವಾಗಿ ಖಂಡಿಸುತ್ತೇನೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಭಾಷಣ ಮಾಡುವ, ಇತರರಿಗೆ ಪಾಠ ಹೇಳುವ ಕಾಂಗ್ರೆಸ್ ಪಕ್ಷದ ನಾಯಕರ ನೈಜ ಬಣ್ಣ ಬಯಲಾಗಿದೆ ಎಂದು ಹೇಳಿದ್ದಾರೆ.

‘ಯಥಾ ರಾಜ ತಥಾ ಪ್ರಜಾ’ ಎಂಬಂತೆ, ಕೆಪಿಸಿಸಿಗೆ ನೂತನ ಅಧ್ಯಕ್ಷರು ನೇಮಕಗೊಂಡಾಗಿನಿಂದ ಕಾಂಗ್ರೆಸ್ ಪಕ್ಷದವರ ನಡವಳಿಕೆ ಹಾಗೂ ನೈತಿಕತೆ ಪಾತಾಳಕ್ಕೆ ಕುಸಿದಿದೆ. ರಾಜ್ಯದ ಜನರು ಸಜ್ಜನಿಕೆಗೆ ಹೆಸರಾಗಿದೆ. ಈ ರೀತಿಯ ಅಸಭ್ಯ ನಡವಳಿಕೆಯನ್ನು ಎಂದೂ ಕ್ಷಮಿಸುವುದಿಲ್ಲ ಎಂದು ಸಚಿವರು ಹೇಳಿದ್ದಾರೆ.

2017 ರಲ್ಲಿ ಅಂದಿನ ವಿಧಾನಪರಿಷತ್ ನ ಸಭಾಪತಿಗಳಾಗಿದ್ದ ಡಿ.ಎಚ್.ಶಂಕರಮೂರ್ತಿ ಅವರ ವಿರುದ್ಧ ಕಾಂಗ್ರೆಸ್ ಸದಸ್ಯರು ಅವಿಶ್ವಾಸ ನಿರ್ಣಯ ಮಂಡಿಸಿದಾಗ, ಚರ್ಚೆಗೆ ಅವಕಾಶ ನೀಡಿದ್ದರು. ಅಲ್ಲದೆ, ಸಭಾಪತಿ ಪೀಠದಲ್ಲಿ ಅವರು ಕೂರದೆ ಉಪ ಸಭಾಪತಿ ಮೂಲಕ ಕಲಾಪ ನಡೆಸಲಾಗಿತ್ತು. ತಮ್ಮ ವಿರುದ್ಧ ಬಂದ ಎಲ್ಲ ಆರೋಪಗಳಿಗೂ ಶಂಕರಮೂರ್ತಿಯವರು ಉತ್ತರ ನೀಡಿದ್ದರು. ಇದನ್ನು ನೆನಪಿಸಿಕೊಳ್ಳಬೇಕು ಎಂದು ಸಚಿವರು ಹೇಳಿದ್ದಾರೆ.

Share This Article
Leave a comment