ಬೆಂಗಳೂರು: ಸರ್ಕಾರದ ಶಕ್ತಿ ಯೋಜನೆ ಭರ್ಜರಿಯಾಗಿ ಫಲಿತಾಂಶ ನೀಡಿ ,ಈಗ ಶಕ್ತಿ ಯೋಜನೆಯಿಂದ ಸಾರಿಗೆ ಇಲಾಖೆ (Transport Department) ಕೈಸುಟ್ಟುಕೊಂಡು ಇಕ್ಕಟ್ಟಿನ ಪರಿಸ್ತಿತಿಯಲ್ಲಿ ಸಿಲುಕಿದೆ .
ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳಲ್ಲಿ (Congress Guarantee) ಒಂದಾದ ಶಕ್ತಿ ಯೋಜನೆ ಜಾರಿಯಾಗಿ ಐದು ತಿಂಗಳು ಕಳೆದಿವೆ.
ಈ ಯೋಜನೆ ರಾಜ್ಯದಲ್ಲಿ ಜೂನ್ 11ರಿಂದ ಜಾರಿಯಾಗಿದ್ದು , 90 ಕೋಟಿಗೂ ಹೆಚ್ಚು ನಾರಿಯರು ಉಚಿತವಾಗಿ ಪ್ರಯಾಣಿಸಿದ್ದಾರೆ.
ಶಕ್ತಿ ಯೋಜನೆಗೆಂದು ಸಿಎಂ ಸಿದ್ದರಾಮಯ್ಯ (CM Siddaramaiah) ಬಜೆಟ್‌ನಲ್ಲಿ 9 ತಿಂಗಳಿಗೆ 2,800 ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದರು.
ಐದೇ ತಿಂಗಳಳ್ಳಿ ಯೋಜನೆಗೆ ಜಾರಿಗಿದ್ದ ಹಣ ಖಾಲಿಯಾಗಿದೆ ಎಂದು ತಿಳಿದು ಬಂದಿದೆ.
ರಾಜ್ಯ ಸರ್ಕಾರದ ಅಂದಾಜು ?
ತಿಂಗಳಿಗೆ 311 ಕೋಟಿ ರೂ. ಬೇಕಾಗಬಹುದು ಎಂದು ಅಂದಾಜಿಸಲಾಗಿತ್ತು, ಆದರೆ 5 ತಿಂಗಳಿಗೆ (ನವೆಂಬರ್ 12ರವರೆಗೆ) 2,246 ಕೋಟಿ ರೂ. ಖರ್ಚಾಗಿದೆ.
ಸರ್ಕಾರದಿಂದ ನಿಗದಿ ಮಾಡಿದ ಲೆಕ್ಕಾಚಾರದಂತೆ ಉಳಿದ 4 ತಿಂಗಳಿಗೆ 1,244 ಕೋಟಿ ರೂ. ಹಣ ಬೇಕಾಗುತ್ತದೆ. ಇದೀಗಾ ಲೆಕ್ಕ ಪರಿಗಣಿಸಿದರೆ ಒಟ್ಟು 690 ಕೋಟಿ ರೂ. ಹಣ ಕೊರತೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ದಿನನಿತ್ಯ 40 ಲಕ್ಷದಿಂದ 60 ಲಕ್ಷ ಮಹಿಳೆಯರು ಉಚಿತವಾಗಿ ಸಂಚಾರಿಸುತ್ತಿದ್ದು. ಪ್ರಸ್ತುತ ಹಣಕಾಸು ವರ್ಷ ಮುಗಿಯಲು ಇನ್ನೂ 5 ತಿಂಗಳು ಇರುವುದರಿಂದ ಶಕ್ತಿ ಯೋಜನೆಗೆ ಎಷ್ಟು ಖರ್ಚಾಗಬಹುದು ಎಂಬ ಕುತೂಹಲ ಹೆಚ್ಚಾಗಿದೆ.ದೀಪಾವಳಿ ಪಟಾಕಿ ಪರಿಣಾಮ- ಬೆಂಗಳೂರಿನಲ್ಲಿ ವಾಯುಮಾಲಿನ್ಯ 193ಕ್ಕೇರಿದ AQI
ಶಕ್ತಿ ಯೋಜನೆಗೆ ಇನ್ನೂ 1 ಸಾವಿರ ಕೋಟಿ ರೂ. ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.
More Stories
ನವೆಂಬರ್ 11ರಿಂದ ಉಪ ಚುನಾವಣಾ ಕ್ಷೇತ್ರಗಳಲ್ಲಿ ಮದ್ಯ ಮಾರಾಟ ನಿಷೇಧ
ಮಂಡ್ಯ : ಹಿಂದೂ ಸ್ಮಶಾನವನ್ನು ವಕ್ಫ್ ಆಸ್ತಿಯೆಂದು ಘೋಷಿಸಿದ ಪ್ರಕರಣ
MUDA ಹಗರಣ: ನಾಳೆ ಬೆಳಿಗ್ಗೆ 10 ಗಂಟೆಗೆ ಲೋಕಾಯುಕ್ತ ವಿಚಾರಣೆಗೆ ಹಾಜರಾಗಲು ಸಿಎಂ ಸಿದ್ದರಾಮಯ್ಯ ನಿರ್ಧಾರ