ಕರುನಾಡ ಜಿಲ್ಲೆಗಳ ಕಿರು ಪರಿಚಯ – 15 – ಉಡುಪಿ

Team Newsnap
1 Min Read

ಕಲಾವತಿ ಪ್ರಕಾಶ್
ಬೆಂಗಳೂರು

ಸಂಸ್ಕ್ರತದ ಈ ಪದಗಳಿಂದ ಉಡುಪಿ ಎಂದರು
ಉಡು ಎಂದರೆ ನಕ್ಷತ್ರ ಪ ಎಂದರೆ ದೇವರು
ದಂತಕಥೆಯಲ್ಲಿ ನಕ್ಷತ್ರ ದೇವರು-ಚಂದ್ರನ ನಾಡು ಇದರ ಪರ್ಯಾಯ ಹೆಸರೂ ಸಹ ಒಡಿಪು ಎಂದು

ಉಡುಪಿ ದೇವಾಲಯ ನಗರವೆಂದು ಕರಯಲಾಗುತ್ತದೆ
ಇದು ಜನಪ್ರಿಯ ಪಾಕ ಪದ್ಧತಿಗು ಹೆಸರನ್ನು ನೀಡುತ್ತದೆ
ವೈಷ್ಣವ ಸಂತ ಮಧ್ವಾಚಾರ್ಯರು ಅದ್ವೈತ ಸಾರಿದರು
ಇದರ ಪ್ರಚಾರಕ್ಕೆ ಅಷ್ಟ‌ ಮಠಗಳನ್ನೂ ಸ್ಥಾಪಿಸಿದರು

ತಾಲ್ಲೂಕುಗಳಿವು ಉಡುಪಿ ಬೈಂದೂರು ಕುಂದಾಪುರ
ಕಾರ್ಕಳ ಕಾಪು ಹೆಬ್ರಿ ಹಾಗೂ ಬ್ರಹ್ಮಾವರ
ನೀರ್ ದೋಸೆ ಮಂಡಕ್ಕಿ ಉಪ್ಕರಿ ಪತ್ರೊಡೆ ವಿಶೇಷ
ತುಷಾರ ತರಂಗ ಉದಯವಾಣಿ ದಿನಪತ್ರಿಕೆ ವಿಶೇಷ

ಭೂತಕೋಲ ಆಟಿಕಳಂಜ ಕರಂಗೋಲು ನಾಗಾರಾಧನೆ
ಹುಲಿವೇಷ ಯಕ್ಷಗಾನದಂಥ ಸಾಂಸ್ಕೃತಿಕ ಆರಾಧನೆ
ಮುದ್ರಣ ಬ್ಯಾಂಕಿಂಗ್ ಹೊಟೇಲ್ ಉದ್ಯಮ
ಕಡಲೆ ತೊಗರಿ ಏಲಕ್ಕಿ ಕಾಳುಮೆಣಸು ಮಲ್ಲಿಗೆ ಘಮ

ಉಡುಪಿ ಕೃಷ್ಣನ ದೇಗುಲ ವೇಣೂರಿನ ಗೊಮಟೇಶ್ವರ
ಸಂತ ಮೇರಿ ದ್ವೀಪ ಕೂಡ್ಲದ ಜಲಪಾತ ಸ್ಥಳಗಳು
ಮಲ್ಪೆ ಬೀಚ್ ಕಾಪು ಬೀಚ್ ಡೆಲ್ಟಾ ಬೀಚ್ ಗಳು
ಸುಂದರವಾದ ಮರವಂತೆ ಒತ್ತಿನೆಣೆ ಬೀಚ್ ಗಳು

ಚಂದ್ರಮೌಳೇಶ್ವರ ಅನಂತೇಶ್ವರ ಕೊಲ್ಲೂರು ದೇಗುಲ
ಚತುರ್ಮುಖ ಬಸದಿ ಕಾರ್ಕಳ ಗೊಮ್ಮಟೇಶ್ವರ ಗುಡಿ
ಅಂಬಲ್ಪಾಡಿ ದೇಗುಲ ಬ್ರಹ್ಮಾವರ ಮಹಾಲಿಂಗ ಗುಡಿ
ರೋಸರಿ ಚರ್ಚ್ ಆನೆ ಗುಡ್ಡದ ವಿನಾಯಕ ನೋಡಿ

ಶಾಂಭವಿ ಉದ್ಯಾವರ ಸ್ವರ್ಣಾ ನದಿ ಸೀತಾ ನದಿ
ಚಕ್ರಾ ಕುಬ್ಜ ವಾರಾಹಿ ಮೈಸುಂಬಿ ಹರಿಯುವ ನದಿ
ಮೀನುಗಾರಿಕೆಗೆ ಸುಪ್ರಸಿದ್ಧಿ ಪಡೆದ ಮಲ್ಪೆ ಬಂದರು
ಸುಂದರ ಸೀತಾ ನದಿಯ ಹಂಗಾರುಕಟ್ಟೆಯ ಬಂದರು

Share This Article
Leave a comment