November 6, 2024

Newsnap Kannada

The World at your finger tips!

WhatsApp Image 2023 06 11 at 4.47.45 PM

ಶಕ್ತಿ ಯೋಜನೆ – ವಾರದಲ್ಲಿ ಸಂಚಾರ ಮಾಡಿದ ಮಹಿಳೆಯರೆಷ್ಟು? ಖರ್ಚು ಎಷ್ಟು?

Spread the love

ಬೆಂಗಳೂರು: ಕಾಂಗ್ರೆಸ್​ ಸರ್ಕಾರ ನೀಡಿದ ಚುನಾವಣಾ ಭರವಸೆಗಳಲ್ಲಿ ಒಂದಾದ ಶಕ್ತಿ ಯೋಜನೆಯು ಯಶಸ್ವಿಯಾಗಿ ಒಂದು ವಾರ ಪೂರೈಸಿದೆ.

ಉಚಿತ ಪ್ರಯಾಣ ಘೋಷಣೆಯಾದ ಬೆನ್ನಲ್ಲೇ ಮಹಿಳೆಯರ ಓಡಾಟ ದ್ವಿಗುಣಗೊಂಡಿದೆ, ಯಾವುದೇ ಸರ್ಕಾರಿ ಬಸ್​ ನೋಡಿದರೂ ತುಂಬಿ ತುಳುಕುತ್ತಿದೆ.

ಶಕ್ತಿ ಯೋಜನೆ ಒಂದು ವಾರ ಪೂರ್ಣಗೊಳಿಸಿದೆ, ಒಂದು ವಾರದಲ್ಲಿ ಬರೊಬ್ಬರಿ 3 ಕೋಟಿ 12 ಲಕ್ಷದ 9 ಸಾವಿರದ 696 ಮಂದಿ ಮಹಿಳೆಯರು ಪ್ರಯಾಣ ಮಾಡಿದ್ದಾರೆ.

ಯಾವ್ಯಾವ ದಿನ ಎಷ್ಟು ಪ್ರಯಾಣಿಕರು ಸಂಚರಿದ್ದಾರೆ ಎಂಬ ಮಾಹಿತಿ ಇಲ್ಲಿದೆ

  • 1) ಭಾನುವಾರ (ಯೋಜನೆ ಜಾರಿಯಾದ ದಿನ ಜೂ. 11): 5,71,023 ಮಂದಿ ಮಹಿಳಾ ಪ್ರಯಾಣಿಕರ ಪ್ರಯಾಣ. ಪ್ರಯಾಣದ ವೆಚ್ಚ 1,40,22,878 ರೂಪಾಯಿ.
  • 2) ಸೋಮವಾರ (ಜೂ.12): 41,34,726 ಮಂದಿ ಮಹಿಳಾ ಪ್ರಯಾಣಿಕರ ಪ್ರಯಾಣ. ಪ್ರಯಾಣದ ವೆಚ್ಚ 8,83,53,434 ರೂಪಾಯಿ.
  • 3) ಮಂಗಳವಾರ (ಜೂ.13): 51,52,769 ಮಂದಿ ಮಹಿಳಾ ಪ್ರಯಾಣಿಕರ ಪ್ರಯಾಣ. ಪ್ರಯಾಣದ ವೆಚ್ಚ 10,82,02,191 ರೂಪಾಯಿ.
  • 4) ಬುಧವಾರ (ಜೂನ್​ 14): 50,17,174 ಮಂದಿ ಮಹಿಳಾ ಪ್ರಯಾಣಿಕರ ಪ್ರಯಾಣ. ಪ್ರಯಾಣದ ವೆಚ್ಚ 11,51,08,324 ರೂಪಾಯಿ.
  • 5) ಗುರುವಾರ (ಜೂ.15): 54,05,629 ಮಂದಿ ಮಹಿಳಾ ಪ್ರಯಾಣಿಕರ ಪ್ರಯಾಣ. ಪ್ರಯಾಣದ ವೆಚ್ಚ 12,37,89,585 ರೂಪಾಯಿ.
  • 6) ಶುಕ್ರವಾರ (ಜೂ. 16): 55,09,770 ಮಂದಿ ಮಹಿಳಾ ಪ್ರಯಾಣಿಕರ ಪ್ರಯಾಣ. ಪ್ರಯಾಣ ವೆಚ್ಚ 12,45,19,265 ರೂಪಾಯಿ.
  • 7) ಶನಿವಾರ (ಜೂ. 17): 54,30,150 ಮಂದಿ ಮಹಿಳಾ ಪ್ರಯಾಣಿಕರ ಪ್ರಯಾಣ. ಪ್ರಯಾಣದ ವೆಚ್ಚ 12,88,81,618 ರೂಪಾಯಿ.

ವಿದ್ಯುತ್ ದರ ಕಡಿಮೆ ಆಗಲ್ಲ – ಸಿಎಂ ಸಿದ್ಧರಾಮಯ್ಯ ಸ್ಪಷ್ಟನೆ

ಯೋಜನೆ ಜಾರಿಯಾದ ದಿನದಿಂದ ಶನಿವಾರದವರೆಗೆ ಒಟ್ಟು ಮಹಿಳಾ ಪ್ರಯಾಣಿಕರ ಪ್ರಯಾಣದ ವೆಚ್ಚ 69 ಕೋಟಿ 77 ಲಕ್ಷದ 68 ಸಾವಿರದ 971 ರೂಪಾಯಿ ಆಗಿದೆ. 3 ಕೋಟಿ 12 ಲಕ್ಷದ 9 ಸಾವಿರದ 699 ಮಂದಿ ಪ್ರಯಾಣ ಮಾಡಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!