ಬೆಂಗಳೂರು: ಕಾಂಗ್ರೆಸ್ ಸರ್ಕಾರ ನೀಡಿದ ಚುನಾವಣಾ ಭರವಸೆಗಳಲ್ಲಿ ಒಂದಾದ ಶಕ್ತಿ ಯೋಜನೆಯು ಯಶಸ್ವಿಯಾಗಿ ಒಂದು ವಾರ ಪೂರೈಸಿದೆ.
ಉಚಿತ ಪ್ರಯಾಣ ಘೋಷಣೆಯಾದ ಬೆನ್ನಲ್ಲೇ ಮಹಿಳೆಯರ ಓಡಾಟ ದ್ವಿಗುಣಗೊಂಡಿದೆ, ಯಾವುದೇ ಸರ್ಕಾರಿ ಬಸ್ ನೋಡಿದರೂ ತುಂಬಿ ತುಳುಕುತ್ತಿದೆ.
ಶಕ್ತಿ ಯೋಜನೆ ಒಂದು ವಾರ ಪೂರ್ಣಗೊಳಿಸಿದೆ, ಒಂದು ವಾರದಲ್ಲಿ ಬರೊಬ್ಬರಿ 3 ಕೋಟಿ 12 ಲಕ್ಷದ 9 ಸಾವಿರದ 696 ಮಂದಿ ಮಹಿಳೆಯರು ಪ್ರಯಾಣ ಮಾಡಿದ್ದಾರೆ.
ಯಾವ್ಯಾವ ದಿನ ಎಷ್ಟು ಪ್ರಯಾಣಿಕರು ಸಂಚರಿದ್ದಾರೆ ಎಂಬ ಮಾಹಿತಿ ಇಲ್ಲಿದೆ
- 1) ಭಾನುವಾರ (ಯೋಜನೆ ಜಾರಿಯಾದ ದಿನ ಜೂ. 11): 5,71,023 ಮಂದಿ ಮಹಿಳಾ ಪ್ರಯಾಣಿಕರ ಪ್ರಯಾಣ. ಪ್ರಯಾಣದ ವೆಚ್ಚ 1,40,22,878 ರೂಪಾಯಿ.
- 2) ಸೋಮವಾರ (ಜೂ.12): 41,34,726 ಮಂದಿ ಮಹಿಳಾ ಪ್ರಯಾಣಿಕರ ಪ್ರಯಾಣ. ಪ್ರಯಾಣದ ವೆಚ್ಚ 8,83,53,434 ರೂಪಾಯಿ.
- 3) ಮಂಗಳವಾರ (ಜೂ.13): 51,52,769 ಮಂದಿ ಮಹಿಳಾ ಪ್ರಯಾಣಿಕರ ಪ್ರಯಾಣ. ಪ್ರಯಾಣದ ವೆಚ್ಚ 10,82,02,191 ರೂಪಾಯಿ.
- 4) ಬುಧವಾರ (ಜೂನ್ 14): 50,17,174 ಮಂದಿ ಮಹಿಳಾ ಪ್ರಯಾಣಿಕರ ಪ್ರಯಾಣ. ಪ್ರಯಾಣದ ವೆಚ್ಚ 11,51,08,324 ರೂಪಾಯಿ.
- 5) ಗುರುವಾರ (ಜೂ.15): 54,05,629 ಮಂದಿ ಮಹಿಳಾ ಪ್ರಯಾಣಿಕರ ಪ್ರಯಾಣ. ಪ್ರಯಾಣದ ವೆಚ್ಚ 12,37,89,585 ರೂಪಾಯಿ.
- 6) ಶುಕ್ರವಾರ (ಜೂ. 16): 55,09,770 ಮಂದಿ ಮಹಿಳಾ ಪ್ರಯಾಣಿಕರ ಪ್ರಯಾಣ. ಪ್ರಯಾಣ ವೆಚ್ಚ 12,45,19,265 ರೂಪಾಯಿ.
- 7) ಶನಿವಾರ (ಜೂ. 17): 54,30,150 ಮಂದಿ ಮಹಿಳಾ ಪ್ರಯಾಣಿಕರ ಪ್ರಯಾಣ. ಪ್ರಯಾಣದ ವೆಚ್ಚ 12,88,81,618 ರೂಪಾಯಿ.
ವಿದ್ಯುತ್ ದರ ಕಡಿಮೆ ಆಗಲ್ಲ – ಸಿಎಂ ಸಿದ್ಧರಾಮಯ್ಯ ಸ್ಪಷ್ಟನೆ
ಯೋಜನೆ ಜಾರಿಯಾದ ದಿನದಿಂದ ಶನಿವಾರದವರೆಗೆ ಒಟ್ಟು ಮಹಿಳಾ ಪ್ರಯಾಣಿಕರ ಪ್ರಯಾಣದ ವೆಚ್ಚ 69 ಕೋಟಿ 77 ಲಕ್ಷದ 68 ಸಾವಿರದ 971 ರೂಪಾಯಿ ಆಗಿದೆ. 3 ಕೋಟಿ 12 ಲಕ್ಷದ 9 ಸಾವಿರದ 699 ಮಂದಿ ಪ್ರಯಾಣ ಮಾಡಿದ್ದಾರೆ.
- ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
- IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
- ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
- ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: 25 ಕಡೆಗಳಲ್ಲಿ ಪರಿಶೀಲನೆ
- ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಗೊ.ರು.ಚ ಆಯ್ಕೆ
- ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಮತ್ತು ಸಾಯಿರಾ ಬಾನು ವಿಚ್ಛೇದನ
More Stories
ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ