February 21, 2026

Newsnap Kannada

The World at your finger tips!

saharukahan

18 ದಿನದ ಬಳಿಕ ಜೈಲಿನಲ್ಲಿರುವ ಮೊದಲ ಬಾರಿಗೆ ಮಗನನ್ನು ಭೇಟಿಯಾದ ಶಾರೂಖ್ ಖಾನ್

Spread the love

ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಆರ್ಯನ್ ಖಾನ್‍ ನನ್ನು ಆತನ ತಂದೆ, ಬಾಲಿವುಡ್ ನಟ ಶಾರೂಖ್ ಖಾನ್ ಗುರುವಾರ ಬೆಳಿಗ್ಗೆ 18 ದಿನದ ಬಳಿಕ ಮುಂಬೈನ ಆರ್ಥರ್ ರೋಡ್ ಜೈಲಿಗೆ ಆಗಮಿಸಿ, ಮೊದಲ ಬಾರಿಗೆ ಆರ್ಯನ್ ಖಾನ್ ಅವರನ್ನು ಶಾರೂಖ್ ಖಾನ್ ಭೇಟಿಯಾಗಿದ್ದಾರೆ.

ಕೋವಿಡ್-19 ಮಧ್ಯೆ ಮಹಾರಾಷ್ಟ್ರ ದಲ್ಲಿ ನಿರ್ಬಂಧಗಳನ್ನು ಸಡಿಲಗೊಳಿಸಿದ ಬಳಿಕ ಶಾರೂಖ್ ಮಗನನ್ನು ಭೇಟಿಯಾಗಿ ಸುಮಾರು 20 ನಿಮಿಷಗಳ ಕಾಲ ಕಳೆದರು.

ಅಕ್ಟೋಬರ್ 2 ರಂದು ಮುಂಬೈನಿಂದ ಗೋವಾಗೆ ಹೊರಟಿದ್ದ ಐಷಾರಾಮಿ ಹಡಗಿನಲ್ಲಿ ರೇವ್ ಪಾರ್ಟಿ ನಡೆಸಲಾಗಿತ್ತಿತ್ತು.

ಈ ಪಾರ್ಟಿಯಲ್ಲಿ ಸ್ನೇಹಿತರ ಜೊತೆಗೆ ಭಾಗಿಯಾಗಿದ್ದ ಆರ್ಯನ್ ಖಾನ್ ಡ್ರಗ್ ಸೇವನೆ ಮಾಡಿದ್ದರು ಎಂದು ಆರೋಪಿಸಿ ಬಂಧಿಸಲಾಗಿತ್ತು.

error: Content is protected !!