July 6, 2022

Newsnap Kannada

The World at your finger tips!

film

ಶಾರುಖ್​​, ಕತ್ರಿನಾಗೆ ಕರೊನಾ ಪಾಸಿಟಿವ್; ಬಾಲಿವುಡ್​ ನಲ್ಲಿ ಮತ್ತೆ ಕರೊನಾ ಆತಂಕ!

Spread the love

ಕರಣ್ ಜೋಹರ್ ಅವರ 50 ನೇ ಜನ್ಮದಿನವು ಕೋವಿಡ್-19 ಹಾಟ್‌ಸ್ಪಾಟ್ ಎಂದು ಪರಿಗಣಿಸಲಾಗಿದೆ, 50 ಸೆಲೆಬ್ರಿಟಿಗೆ ಕರೊನಾ ಸೋಂಕು ತಗುಲುವ ಸಾಧ್ಯತೆ ಇದೆ!

ಬಾಲಿವುಡ್​ನಲ್ಲಿ ಕರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅಕ್ಷಯ್​ ಕುಮಾರ್​, ಕಾರ್ತಿಕ್​ ಆರ್ಯನ್​ ಬಳಿಕ ಶಾರುಖ್​​,ಕತ್ರಿನಾಗೆ ಸೋಂಕು ತಗುಲ್ಲಿದೆ.

ಮಮತಾ ಬ್ಯಾನರ್ಜಿ ಟ್ವೀಟ್ –

ಶಾರುಖ್​ಗೆ ಕರೊನಾ ತಗುಲಿರುವ ಬಗ್ಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಟ್ವೀಟ್​ ಮೂಲಕ ತಿಳಿಸಿದ್ದು, ಈ ರಾಜ್ಯದ ರಾಯಭಾರಿಯಾಗಿರುವ ಶಾರುಖ್​ ಅವರು ಶೀಘ್ರ ಗುಣಮುಖರಾಗಲೆಂದು ಅವರು ಪ್ರಾರ್ಥಿಸಿದ್ದಾರೆ.

ಇನ್ನು ಕರೊನಾ ದೃಢವಾಗಿರುವುದರಿಂದಲೇ ಐಫಾ ಅವಾರ್ಡ್​ನಲ್ಲಿ ಕತ್ರಿನಾ ಭಾಗವಹಿಸಿಲ್ಲ.

ತನ್ನ ಪತಿಗೆ ಅತ್ಯುತ್ತಮ ನಟ ಪ್ರಶಸ್ತಿ ದೊರೆತರೂ ಕತ್ರಿನಾ ಕಾರ್ಯಕ್ರಮಕ್ಕೆ ಹಾಜರಾಗದಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಇದೀಗ ಕತ್ರಿನಾಗೂ ಕರೊನಾ ಸೋಂಕು ತಗುಲಿರುವುದರಿಂದ ಪಾಲ್ಗೊಂಡಿಲ್ಲ ಎಂಬುದು ಮೂಲಗಳಿಂದ ತಿಳಿದುಬಂದಿದೆ. ಇದನ್ನು ಓದಿ – ಬೈಡನ್ ನಿವಾಸದ ಮೇಲೆ ವಿಮಾನ ಹಾರಾಟ – ದಾಳಿ ಭೀತಿ: ಸ್ಥಳಾಂತರ

ಮೇ 25 ರಂದು ನಡೆದ ನಿರ್ಮಾಪಕ ಕರಣ್​ ಜೋಹರ್​ ಅವರ 50ನೇ ಹುಟ್ಟುಹಬ್ಬ ಪಾರ್ಟಿಯಲ್ಲೇ ಕರೊನಾ ತಗುಲಿರಬಹುದು ಎಂದು ಹೇಳಲಾಗಿದೆ. ಸದ್ಯ ಇಬ್ಬರು ತಾರೆಯರು ಅವರವರ ಮನೆಯಲ್ಲಿ ಪ್ರತ್ಯೇಕ ಕ್ವಾರಂಟೈನ್​ನಲ್ಲಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ.

ಬೈಡನ್ ನಿವಾಸದ ಮೇಲೆ ವಿಮಾನ ಹಾರಾಟ – ದಾಳಿ ಭೀತಿ: ಸ್ಥಳಾಂತರ

ಅಮೆರಿಕ ಅಧ್ಯಕ್ಷ ಜೋ ಬೈಡನ್ ನಿವಾಸದ ಮೇಲೆ ವಿಮಾನವೊಂದು ಹಾರಾಟ ನಡೆಸಿದ್ದು, ದಾಳಿಯ ಭೀತಿ ಕಾಡಿತು

ಬೈಡನ್ ಅವರನ್ನು ಹಾಗೂ ಅವರ ಕುಟುಂಬವನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಶ್ವೇತಭವನ ತಿಳಿಸಿದೆ.

ಬೈಡನ್ ಅವರ ರೆಹೋಬೋತ್ ಬೀಚ್ ಬಳಿಯ ನಿವಾಸದ ಮೇಲೆ ನಿರ್ಬಂಧಿತ ವಾಯು ಪ್ರದೇಶದಲ್ಲಿ ಸಣ್ಣ ಖಾಸಗಿ ವಿಮಾನವೊಂದು ಹಾರಾಟ ನಡೆಸಿರುವುದು ಕಂಡುಬಂದಿದೆ.

ಈ ಹಿನ್ನೆಲೆ ದಾಳಿ ಭೀತಿಯಿಂದ ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

error: Content is protected !!