December 23, 2024

Newsnap Kannada

The World at your finger tips!

mysuru dasara

ನಾಡಹಬ್ಬ ದಸರಾ ಮೇಲೂ ಉಗ್ರರ ಛಾಯೆ: ಭದ್ರತೆ ಇಮ್ಮಡಿ ಮಾಡಿದ ಡಿಜಿ-ಐಜಿಪಿ

Spread the love

ಮೈಸೂರು :

ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಸಂಭ್ರಮದ ನಡುವೆ ಉಗ್ರರ ಛಾಯೆ ಆವರಿಸಿದೆ . ಹೀಗಾಗಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.ಡಿಜಿ & ಐಜಿಪಿ ಅಲೋಕ್ ಮೋಹನ್ ತುರ್ತಾಗಿ ಭದ್ರತೆ ಹೆಚ್ಚಳ ಮಾಡಿದ್ದಾರೆ.

ನಕಲಿ ಪಾಸ್ ಪೋರ್ಟ್ ಪಡೆದು ಸುಮಾರು 70 ಜನ ಭಾರತದೊಳಗೆ ನುಸುಳಿದ್ದಾರೆ ಎಂಬ ಎಚ್ಚರಿಕೆಯ ಸಂದೇಶವನ್ನು ಗುಪ್ತಚರ ಇಲಾಖೆ ಎಚ್ಚರಿಕೆ ಸಂದೇಶ ರವಾನಿಸಿದ ಕಾರಣಕ್ಕಾಗಿ ಪೊಲೀಸ್ ಭದ್ರತೆ ಹೆಚ್ಚಳ ಮಾಡಲಾಗಿದೆ.

ಪ್ರತಿ ಬಾರಿ ದಸರಾಗೆ 1700-2000 ಪೊಲೀಸರ ನಿಯೋಜಿಸಲಾಗ್ತಿತ್ತು. ಈ ಬಾರಿ ಭದ್ರತೆಗೆ 3500ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ.

ಇಂದು ಬೆಳಗ್ಗೆ 9 ಗಂಟೆಗೆ 1568 ಪೊಲೀಸರ ನಿಯೋಜನೆ ಮಾಡಲಾಗಿದೆ ಜೊತೆಗೆ 40 CAR ತುಕಡಿಗಳು, 30 KSRP ತುಕಡಿಗಳ ನಿಯೋಜನೆ ಮಾಡಲಾಗಿದೆ. ಶ್ರೀರಂಗಪಟ್ಟಣ, KRS ಪೊಲೀಸರಿಗೆ ಅಲರ್ಟ್ ಇರುವಂತೆ ಸೂಚನೆ ನೀಡಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!