ಮುರುಘಾ ಸ್ವಾಮಿಯಿಂದ ಮತ್ತಿಬ್ಬರು ಬಾಲಕಿಯರಿಗೆ ಲೈಂಗಿಕ ಕಿರುಕುಳ: ಮೈಸೂರಿನಲ್ಲಿ FIR ದಾಖಲು

Team Newsnap
1 Min Read

ಈಗಾಗಲೇ ಪೋಕ್ಸೋ ಕಾಯ್ದೆಯಡಿ ನ್ಯಾಯಾಂಗ ಬಂಧನದಲ್ಲಿರುವ ಚಿತ್ರದುರ್ಗದ ಮುರುಘರಾಜೇಂದ್ರ ಮುರುಘಾ ಮಠದ ಶಿವಮೂರ್ತಿ ಸ್ವಾಮಿ ವಿರುದ್ಧ ಮತ್ತಿಬ್ಬರು ವಿದ್ಯಾರ್ಥಿನಿಯರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ.

ಸ್ವಾಮಿ ವಿರುದ್ಧ 12 ಹಾಗೂ 14 ವರ್ಷದ ಬಾಲಕಿಯರು ಲೈಂಗಿಕ ಕಿರುಕುಳದ ಆರೋಪ ಹೊರಿಸಿ ದೂರು ನೀಡಿದ್ದಾರೆ. ಮಠದಲ್ಲಿ‌ ಕೆಲಸ ಮಾಡುತ್ತಿದ್ದ ನೌಕರರ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ ಮುರುಘಾ ಸ್ವಾಮಿ ವಿರುದ್ಧ ಗುರುವಾರ ತಡ ರಾತ್ರಿ ಮೈಸೂರಿನ ನಜರಬಾದ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಅದರಂತೆ ಪೊಲೀಸರು ಎಫ್​ಐಆರ್ ದಾಖಲಿಸಿಕೊಂಡರು ನಂತರ , ಈ ಪ್ರಕರಣವನ್ನು ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಿದರು.

ಮುರುಘಾ ಸ್ವಾಮಿಗೆ ಈಗ ಭಾರಿ ಸಂಕಷ್ಟ ಮತ್ತೆ ಎದುರಾಗಿದೆ . ಸ್ವಾಮಿ ಸೇರಿ ಮತ್ತೆ 7 ಮಂದಿ ವಿರುದ್ದ ದೂರು ದಾಖಲಾಗಿದೆ. ಯಶಸ್ವಿನಿ ಯೋಜನೆ’ ಮತ್ತೆ ಜಾರಿ :ನವೆಂಬರ್ 1 ರಿಂದ ನೋಂದಣಿ ಪ್ರಾರಂಭ

ಮಠದಲ್ಲಿ ಡ್ರಗ್ಸ್ ವಾಸನೆ ? :

ಈ ನಡುವೆ ಮೈಸೂರಿನ ಒಡನಾಡಿ ಸಂಸ್ಥೆ ಸ್ಟ್ಯಾನ್ಲಿ ಮಾಧ್ಯಮಗಳ ಜೊತೆ ಮಾತನಾಡಿ , ಈ ಸ್ವಾಮೀಜಿ ಹಾಗೂ ಆತನ ಸಹಚರರು ಕೇವಲ ಲೈಂಗಿಕ ದೌರ್ಜನ್ಯ ಮಾತ್ರವಲ್ಲ ಮಾನವ ಅಂಗಾಗಳ ಮಾರಾಟ, ಡ್ರಗ್ಸ್ ವಾಸನೆ ಕೂಡ ಎದ್ದು ಕಾಣುತ್ತದೆ. ಈ ವಿಷಯವನ್ನು ಕೂಡ ತನಿಖೆ ಮಾಡಬೇಕಾಗುತ್ತದೆ ಎಂದಿದ್ದಾರೆ.

Share This Article
Leave a comment