February 22, 2026

Newsnap Kannada

The World at your finger tips!

chandan

ಉಪನ್ಯಾಸಕಿಯ ಪುತ್ರನಿಂದಲೇ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ವಿದ್ಯಾರ್ಥಿಯ ಬಂಧನ

Spread the love

ಬೆಂಗಳೂರಿನ ಪ್ರತಿಷ್ಟಿತ ಕಾಲೇಜಿನ‌‌ ಉಪನ್ಯಾಸಕಳ ಪುತ್ರನಿಂದಲೇ ವಿದ್ಯಾರ್ಥಿನಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿ ವಂಚಿಸಿದ ಕಾರಣಕ್ಕಾಗಿ ವಿದ್ಯಾರ್ಥಿಯೊಬ್ಬನನ್ನು ವಿದ್ಯಾರಣ್ಯ ಪುರಂ ಪೋಲಿಸರು ಬಂಧಿಸಿದ್ದಾರೆ.

ಚಂದನ್ ಎಂಬ ವಿದ್ಯಾರ್ಥಿಯೇ , ಸಹಪಾಠಿ ವಿದ್ಯಾರ್ಥಿನಿಗೆ ಮದುವೆಯಾಗುವುದಾಗಿ ವಂಚಿಸಿ, ಮೂರು ವರ್ಷಗಳಿಂದ ಲೈಂಗಿಕ ಕಿರುಕುಳ ನೀಡಿದ್ದಾನೆಂದು ಯುವತಿ ಪೋಲಿಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.

ನಗರದ ಪ್ರತಿಷ್ಟಿತ ಕಾಲೇಜ್ ನಲ್ಲಿ ಯವಕನ ತಾಯಿ ಲೆಕ್ಚರರ್ ಆಗಿದ್ದಾರೆ.ಅದೇ ಕಾಲೇಜ್ ನಲ್ಲಿ ವಿದ್ಯಾರ್ಥಿನಿ ಮತ್ತು ಮಗ ವಿದ್ಯಾರ್ಥಿಯಾಗಿ ವಿದ್ಯಾ ಅಭ್ಯಾಸ ಮಾಡುವ ವೇಳೆ ಆದ ಪರಿಚಯ, ಪ್ರೀತಿಗೆ ತಿರುಗಿದೆ.

ಈ ವೇಳೆ ಪರಿಚಯವಾಗಿದ್ದ ವಿದ್ಯಾರ್ಥಿ ನಿ ಒಂದು ಸಲ ಲೆಕ್ಚರ್ ರನ್ನು ನೋಡೋಕೆ ಅಂತಾ ವಿದ್ಯಾರ್ಥಿನಿ ಮನೆಗೆ ಬಂದ ವೇಳೆ ದೈಹಿಕವಾಗಿ ಚೇತನ್ ಬಳಕೆ ಮಾಡಿಕೊಂಡ. ನಂತರ ಅವಕಾಶ ಸಿಕ್ಕಾಗೆಲ್ಲಾ ಯುವತಿ ಮೇಲೆ ದೌರ್ಜನ್ಯ ನಡೆಸಿದ್ದಾನೆಂದು ದೂರಲಾಗಿದೆ.

ವಿದ್ಯಾರಣ್ಯಪುರ ಪೊಲೀಸರು ಆರೋಪಿ ಚಂದನ್ ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ವೈದ್ಯಕೀಯ ಪರೀಕ್ಷೆ ಕೂಡ ಮಾಡಲಾಗಿದೆ ಎಂದು ಮೂಲಗಳು ಹೇಳಿವೆ.

error: Content is protected !!