ರೈತರ ಪ್ರತಿಭಟನೆ – ಸೆಲೆಬ್ರಿಟಿ, ವಿದೇಶಿ ಗಣ್ಯರ ಪ್ರತಿಕ್ರಿಯೆಗೆ ಕೇಂದ್ರದ ತಿರುಗೇಟು

Team Newsnap
1 Min Read
Modi to Hubballi on January 12: Preparations for the rush ಜನವರಿ 12ರಂದು ಹುಬ್ಬಳ್ಳಿಗೆಮೋದಿ: ಭರದ ಸಿದ್ಧತೆ

ಭಾರತದ ರೈತರ ಪ್ರತಿಭಟನೆಗೆ ವಿದೇಶೀ ಗಣ್ಯರಾದ ರಿಹಾನಾ, ಗ್ರೆಟ್ಟಾ ಥನ್‌ಬರ್ಗ್ ಸೇರಿ ಅನೇಕ ಗಣ್ಯರು ಬೆಂಬಲ ಸೂಚಿಸಿ ಟ್ವಿಟ್ ಮಾಡಿದ ಬೆನ್ನಲ್ಲೇ ಮೋದಿ ಸರ್ಕಾರ ಮಹತ್ವದ ಆದೇಶ ಮಾಡಿದೆ.

ಸರ್ಕಾರ ‘ಸಂವೇದನಾಶೀಲ ಸಾಮಾಜಿಕ ಮಾಧ್ಯಮ ಹ್ಯಾಶ್‌ಟ್ಯಾಗ್‌ ಮತ್ತು ಕಾಮೆಂಟ್‌ಗಳ ದುರಾಸೆ’ ವಿರುದ್ಧ ಎಚ್ಚರಿಕೆ ರವಾನಿಸಿದೆ.

ಈ ಪ್ರತಿಭಟನೆ ಭಾರತದ ‘ಅತೀ ಚಿಕ್ಕ ಭಾಗದ ರೈತರು’ ಮಾಡುತ್ತಿದ್ದಾರೆ ಎಂದು ಸರ್ಕಾರ ಹೇಳಿದೆ.

ಈ ಪ್ರತಿಭಟನೆ ಭಾರತದ ಪ್ರಜಾಪ್ರಭುತ್ವ ತತ್ವ, ಸರ್ಕಾರ ಹಾಗೂ ಇದರಲ್ಲಿ ಪಾಲ್ಗೊಂಡಿರುವ ರೈತ ಸಂಘಟನೆಯ ಸಮಸ್ಯೆ ಬಗೆಹರಿಸಲು ನಡೆಸುತ್ತಿರುವ ಯತ್ನವನ್ನು ಗಮನದಲ್ಲಿಟ್ಟುಕೊಂಡು ಪರಿಗಣಿಸಬೇಕು’ ಎಂದು ತಿಳಿಸಿದೆ.

ಯಾರೇ ಹೇಳಿಕೆ ನೀಡುವ ಮೊದಲು ವಾಸ್ತವತೆ, ಸತ್ಯ ಅರಿತು ಹಾಗೂ ಸಮಸ್ಯೆಯನ್ನು ಸಂಪೂರ್ಣವಾಗಿ ಅರ್ಥೈಸಿಕೊಳ್ಳ ಬೇಕು ಎಂದು ವಿದೇಶಿ ಗಣ್ಯರಿಗೆ ಸರ್ಕಾರ ಹೇಳಿದೆ.

anurag

ಸೋಶಿಯಲ್ ಮಿಡಿಯಾ ಹ್ಯಾಷ್‌ ಟ್ಯಾಗ್ ಹಾಗೂ ಕಮೆಂಟ್‌ಗಳು ಸಿಗುತ್ತವೆಂಬ ದುರಾಸೆಯಿಂದ ಇಂತಹ ನಡೆ ಸರಿಯಲ್ಲ. ಅದರಲ್ಲೂ ವಿಶೇಷವಾಗಿ ಸೆಲೆಬ್ರಿಟಿಗಳು ಇದನ್ನು ಗಮನದಲ್ಲಿರಿಸಕೊಳ್ಳಬೇಕು. ಈ ನಡೆ ಕೇವಲ ತಪ್ಪಲ್ಲ, ಬದಲಾಗಿ ಬೇಜವಾಬ್ದಾರಿತನವಾಗುತ್ತದೆ ಎಂದು ಹೇಳಲಾಗುತ್ತದೆ.

Share This Article
Leave a comment