ಮಠದ ಮಾಜಿ ಆಪ್ತ ಸಹಾಯಕ ಅಭಿಷೇಕ್ ಹಾಗೂ ಸಹಚರರು ಗುಪ್ತಾಂಗ ವ್ಯಾಧಿ ವೇಳೆ ವೈದ್ಯರಿಗೆ ತೋರಿಸಿದ ವೀಡಿಯೋ ಇಟ್ಟುಕೊಂಡು ನನ್ನನ್ನು ಬ್ಲಾಕ್ ಮೇಲ್ ಮಾಡುತಿದ್ದಾರೆ ಎಂದು ಸ್ವಾಮಿಜಿ ತಮ್ಮ ಹಾಲಿ ಆಪ್ತ ಸಹಾಯಕ ಅಭಿಲಾಷ್ ಮೂಲಕ ಸೆನ್ ಠಾಣೆಯಲ್ಲಿ ದೂರು ನೀಡಿದ್ದರು.
ಈ ದೂರು ಬಾಲ ಮಂಜುನಾಥ ಸ್ವಾಮಿಜಿಗೆ ರಿವರ್ಸ್ ಆಗಿದ್ದು , ಅದೇ ಆರೋಪಿಗಳು ಸ್ವಾಮೀಜಿಯವರ ಬೇರೊಂದು ಹಗರಣವೊಂದನ್ನು ವಿಚಾರಣೆ ವೇಳೆ ಬಯಲು ಮಾಡಿದ್ದಾರೆ.
ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಬಾಲಮಂಜುನಾಥ ಸ್ವಾಮೀಜಿ ಹಾಗೂ ಆತನ ಆಪ್ತ ಸಹಾಯಕ ಅಭಿಲಾಷ್ ವಿರುದ್ಧ ಪೋಕ್ಸೋ ಕೇಸ್ (Pocso Case) ದಾಖಲು ಮಾಡಲಾಗಿದ್ದು , ಈಗ ತುಮಕೂರು ಎಸ್‌ಪಿ ಅಶೋಕ್ ಕೆ.ವಿ ನೇತೃತ್ವದಲ್ಲಿ ಇಬ್ಬರನ್ನು ಬಂಧಿಸಿ ತನಿಖೆ ನಡೆಸುತಿದ್ದಾರೆ.
ಸ್ವಾಮೀಜಿ ಮಠದಲ್ಲೇ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ಕೊಟ್ಟಿರುವ ಬಗ್ಗೆ ಆರೋಪ ಬಂದಿದ್ದು ,ಅಭಿಷೇಕ್ ಕೊಟ್ಟ ಮಾಹಿತಿ ಮೇರೆಗೆ ತಡರಾತ್ರಿ ಮಠಕ್ಕೆ ತೆರಳಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಬಾಲ ಮಂಜುನಾಥ ಸ್ವಾಮೀಜಿ ಅಭಿಷೇಕ್ ಜೊತೆ ತಮಗೆ ಚರ್ಮ ರೋಗದ ಸಮಸ್ಯೆ ಕುರಿತಂತೆ ಹೇಳಿಕೊಂಡಿದ್ದು , ಅಭಿಷೇಕ್ ಮಹಿಳೆಯನ್ನು ಪರಿಚಯಿಸಿ ವೈದ್ಯ ಎಂದು ಹೇಳಿದ್ದಾರೆ.ಸ್ವಾಮೀಜಿಗೆ , ಮಹಿಳೆಗೆ ಚರ್ಮ ರೋಗ ತೋರಿಸಲು ಇಷ್ಟವಿಲ್ಲದ ಕಾರಣ ಅವರ ಮೊಬೈಲಿಗೆ ಫೋಟೋ ಕಳುಹಿಸಿದ್ದಾರೆ.ವ್ಯಾಧಿಯ ಬಗ್ಗೆ ವೈದ್ಯರ ಬಳಿ ಹೇಳಿಕೊಳ್ಳಲು ಸ್ವಾಮೀಜಿಗೆ ವೀಡಿಯೋ ಕಾಲ್‌ನಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಆಗ ಸ್ವಾಮೀಜಿಯವರು ಚರ್ಮ ವ್ಯಾಧಿಯಿರುವ ಜಾಗವನ್ನು ತೋರಿಸಿದ್ದಾರೆ.ಅದೇ ವೀಡಿಯೋವನ್ನು ರೆಕಾರ್ಡ್ ಮಾಡಿಕೊಂಡು ಅಭಿಷೇಕ್ ಹಾಗೂ ಮತ್ತಿತರರು ಸ್ವಾಮೀಜಿಯವರನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದರೆಂದು ಮಠದ ದೇವಸ್ಥಾನದ ಟ್ರಸ್ಟಿ ಕೆ. ಅಭಿಲಾಷ್ ಎಂಬುವರು ಫೆಬ್ರವರಿ 10 ರಂದು ದೂರು ದಾಖಲಿಸಿದ್ದಾರೆ.
ಕುಣಿಗಲ್ ತಾಲೂಕಿನ ಹೊಸಕೆರೆ ಗ್ರಾಮದ ಎಚ್.ಎಸ್. ಅಭಿಷೇಕ್, ಬೆಂಗಳೂರಿನಲ್ಲಿರುವ ಯುವತಿ, ಪಾಂಡವಪುರ ಬಳಿಯ ವಿಜಯಕಾಳಿ ದೇವಸ್ಥಾನದ ರಾಜೇಶ್, ಶ್ರೀನಿವಾಸ್, ರಾಮನಗರ ಜಿಲ್ಲೆಯ ಕವನಪುರ ಗ್ರಾಮದ ಚೇತನ್, ಕುಣಿಗಲ್ ನ ನಂದೀಶ್ ಎಂಬುವರ ವಿರುದ್ಧ ದೂರು ದಾಖಲಾಗಿತ್ತು.ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ – ಓರ್ವ NIA ವಶಕ್ಕೆ
ಅಭಿಷೇಕ್ ಕರೆಯಿಸಿ ಪೊಲೀಸರು ವಿಚಾರಣೆ ನಡೆಸಿದಾಗ ಆತ ಸ್ವಾಮೀಜಿಯವರು ಹಲವು ದಿನಗಳ ಹಿಂದೆ ಮಠದಲ್ಲಿ ಅಪ್ರಾಪ್ತೆಯೊಬ್ಬಳಿಗೆ ಲೈಂಗಿಕ ಕಿರುಕುಳ ಕೊಟ್ಟಿರುವುದಾಗಿ ಆರೋಪಿಸಿದ್ದು ,ಈ ವಿಚಾರ ಪೋಕ್ಸೋ ಕಾಯ್ದೆಯಡಿ ಬರುವುದರಿಂದ ಮಠಕ್ಕೆ ಆಗಮಿಸಿದ ಪೊಲೀಸರು ಕಳೆದ ರಾತ್ರಿ ಮಠದಲ್ಲಿ ಪರಿಶೀಲನೆ ನಡೆಸಿದಾಗ ಸಿಕ್ಕಿದ ಕೆಲವು ದಾಖಲೆಗಳನ್ನು ಆಧರಿಸಿ ಸ್ವಾಮೀಜಿಯವರನ್ನು ಬಂಧಿಸಿದ್ದಾರೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು