ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟ – ಓರ್ವ NIA ವಶಕ್ಕೆ

Team Newsnap
2 Min Read

ಬೆಂಗಳೂರು : ರಾಷ್ಟ್ರೀಯ ತನಿಖಾ ದಳ (NIA) ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ (Rameshwaram Cafe Blast) ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ವಶಕ್ಕೆ ಪಡೆದಿದ್ದು , ವಿಚಾರಣೆ ನಡೆಸುತ್ತಿದೆ.

ಬಳ್ಳಾರಿ ಮಾಡ್ಯೂಲ್‌ನ (ISIS Ballari Module) ಶಂಕಿತ ಉಗ್ರ ಮಿನಾಜ್ ಅಲಿಯಾಸ್‌ ಸುಲೇಮಾನ್ ಮಾಹಿತಿ ಮೇರೆಗೆ ಓರ್ವ ಶಂಕಿತನ ವಶಕ್ಕೆ ಪಡೆದ ಎನ್‌ಐಎ ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದೆ.

ಎನ್‌ಐಎ ನ್ಯಾಯಾಲಯದಿಂದ ಜೈಲಿನಲ್ಲಿರುವ ಸುಲೇಮಾನ್‌ನನ್ನು ಬಾಡಿ ವಾರಂಟ್‌ ಮೇಲೆ ವಿಚಾರಣೆ ನಡೆಸಲು ಅನುಮತಿ ಪಡೆದಿದ್ದು , ನ್ಯಾಯಾಲಯ ಮಾರ್ಚ್‌ 9ರವರೆಗೆ ಕಸ್ಟಡಿಗೆ ನೀಡಿದೆ.

rameshwaram cafe

ಎನ್‌ಐಎ ಡಿ.18 ರಂದು ಬಳ್ಳಾರಿಯಲ್ಲಿ ದಾಳಿ ನಡೆಸಿ ಮಿನಾಜ್‌ ಅಲಿಯಾಸ್‌ ಸುಲೇಮಾನ್‌ ಬಂಧಿಸಿತ್ತು.

ಬಳ್ಳಾರಿ ಮಾಡ್ಯೂಲ್‌ ಎಂದರೇನು ?

ಐಸಿಸ್‌ನಿಂದ ಪ್ರೇರಣೆಗೊಂಡಿದ್ದ ಬಳ್ಳಾರಿ ಯುವಕ ಸುಲೈಮನ್ ಮತ್ತು ಸಹಚರರು ಬಳ್ಳಾರಿ ಐಸಿಸ್‌ ಮಾಡ್ಯೂಲ್‌ (ISIS Ballari Module) ಹೆಸರಿನಿಂದ ಗುರುತಿಸಿಕೊಂಡಿದ್ದರು. ಈ ಗುಂಪು ಕಾಲೇಜುಗಳಿಗೆ ಹೋಗಿ ವಿದ್ಯಾರ್ಥಿಗಳನ್ನೇ ಟಾರ್ಗೆಟ್‌ ಮಾಡಿ ತಮ್ಮ ತಂಡಕ್ಕೆ ಸೇರಿಸಿಕೊಳ್ಳುತ್ತಿದ್ದರು.

ಪಿಎಫ್‌ಐ (PFI) ಸಂಘಟನೆಯಲ್ಲಿ ಕಳೆದ 5 ವರ್ಷದಿಂದ ಇದ್ದ ಬಳ್ಳಾರಿ ಮೂಲದ ಸುಲೈಮನ್ ಬಳ್ಳಾರಿ ಘಟಕವನ್ನು ಆರಂಭಿಸಿ ,ಈತನಿಗೆ ಬಳ್ಳಾರಿಯ ಸೈಯ್ಯದ್‌ ಸಮೀರ್‌ ಸಹಕಾರ ನೀಡುತ್ತಿದ್ದ.

ಇವರು ಉತ್ತರ ಕರ್ನಾಟಕ , ಬೆಂಗಳೂರು ಮತ್ತು ಬಳ್ಳಾರಿಯಲ್ಲಿ ಬಾಂಬ್ ಸ್ಫೋಟಕ್ಕೆ ತಯಾರಿ ನಡೆಸುತಿದ್ದರು.

ಕಾಲೇಜು ವಿದ್ಯಾರ್ಥಿಗಳನ್ನು ಬಳಸಿಕೊಂಡು ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿ ,ಧರ್ಮಕ್ಕಾಗಿ ಜೀವವನ್ನೇ ಬಲಿ ಕೊಡಲು ಸಿದ್ದರಿದ್ದರೋ ಅವರನ್ನೇ ಬಳಸಿಕೊಳ್ಳುತ್ತಿದ್ದರು.

ಪಾಕಿಸ್ತಾನ, ಇರಾನ್, ಇರಾಕ್ ಪ್ರವಾಸದ ಬಳಿಕ ಜಿಹಾದಿಗಳನ್ನಾಗಿ ಮಾಡಲು ಸಂಚು ರೂಪಿಸಿದ್ದರು.

ಕಳೆದ ಡಿಸೆಂಬರ್‌ನಲ್ಲಿ ದೇಶದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಈ ಗ್ಯಾಂಗ್ ಸದಸ್ಯರ ಮೇಲೆ ಎನ್‌ಐಎ ದಾಳಿ ನಡೆಸಿ , . ದಾಳಿ ವೇಳೆ ಐಇಡಿ (IED) ಸ್ಫೋಟಿಸಲು ಬೇಕಾಗಿದ್ದ ವಸ್ತುಗಳನ್ನು ಮನೆಯಲ್ಲಿಯೇ ಇಟ್ಟುಕೊಂಡಿದ್ದ ವಿಚಾರ ಬೆಳಕಿಗೆ ಬಂದಿತ್ತು.ಶಾಸಕರ ಸತ್ಯಾಗ್ರಹ ಸತ್ಯದಿಂದ ಬಲು ದೂರವಿದೆ-ಸುಮಲತಾ ಅಂಬರೀಷ್

ದಾಳಿಯಲ್ಲಿ ಸಲ್ಫರ್‌, ಪೊಟಾಷಿಯಂ ನೈಟ್ರೇಟ್‌, ಗನ್‌ ಪೌಡರ್‌, ಸಕ್ಕರೆ, ಎಥೆನಾಲ್‌, ಹರಿತವಾದ ಆಯುಧಗಳು, ಹಣ, ರಹಸ್ಯ, ಮಾಹಿತಿಯ ದಾಖಲೆಗಳು, ಸ್ಮಾರ್ಟ್‌ಫೋನ್‌, ಡಿಜಿಟಲ್‌ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿತ್ತು.

Share This Article
Leave a comment