ಬಾಲಕನಿಗೆ ಲೈಂಗಿಕ ಕಿರುಕುಳ; ಜೈಪುರ್ ನಲ್ಲಿ ನ್ಯಾಯಾಧೀಶ ಬಂಧನ

Team Newsnap
1 Min Read

ಜೈಪುರನಲ್ಲಿ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಅಮಾನತುಗೊಂಡಿದ್ದ ನ್ಯಾಯಾಧೀಶರೊಬ್ಬರನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ.

ಜಿತೇಂದ್ರ ಸಿಂಗ್‌ ಬಂಧಿತ ಆರೋಪಿ. ಇವರನ್ನು ಜೈಪುರದಿಂದ ಭಾರತ್‌ಪುರಕ್ಕೆ ಕರೆತರಲಾಗಿದೆ.

ಸಿಂಗ್‌ ಅವರು ಭ್ರಷ್ಟಾಚಾರ ವಿರೋಧಿ ಪ್ರಕರಣಗಳ ವಿಶೇಷ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಆರೋಪಿ ಸಿಂಗ್‌ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ನ್ಯಾಯಾಧೀಶರ ಸ್ಟೆನೋಗ್ರಾಫರ್‌ ಅಂಶುಲ್‌ ಸೋನಿ ಹಾಗೂ ನ್ಯಾಯಾಲಯದ ಸಿಬ್ಬಂದಿ ರಾಹುಲ್‌ ಕತಾರ ಮತ್ತಿಬ್ಬರು ಆರೋಪಿಗಳಾಗಿದ್ದಾರೆ.

14 ವರ್ಷದ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಜಿತೇಂದ್ರ ಸಿಂಗ್‌ ವಿರುದ್ಧ ಆರೋಪ ಕೇಳಿಬಂದಿತ್ತು. ಎಫ್‌ಐಆರ್‌ ಆಧರಿಸಿ ರಾಜಸ್ಥಾನ್‌ ಕೋರ್ಟ್‌ ಆರೋಪಿಯನ್ನು ಅಮಾನತುಗೊಳಿಸಿತ್ತು. ಅಲ್ಲದೇ ಪ್ರಕರಣದ ತನಿಖೆಗೆ ತಂಡವೊಂದನ್ನು ನೇಮಿಸಿತ್ತು.

ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಸಮ್ಮುಖದಲ್ಲಿ ಸಿಂಗ್‌ ಅವರನ್ನು ವಿಚಾರಣೆಗೊಳಪಡಿಸಲಾಯಿತು. ನಂತರ ಸುಪ್ರೀಂ ಕೋರ್ಟ್‌ ಮಾರ್ಗಸೂಚಿಯನ್ವಯ ಅವರನ್ನು ಬಂಧಿಸಲಾಯಿತು ಎಂದು ಭಾರತ್‌ಪುರ ಎಸ್‌ಪಿ ದೇವೇಂದ್ರಕುಮಾರ್‌ ಬಿಶ್ನೋಯ್‌ ತಿಳಿಸಿದ್ದಾರೆ.

Share This Article
Leave a comment