December 23, 2024

Newsnap Kannada

The World at your finger tips!

earthquake , turkey , syria

Serial Earthquake-'Turkey' Tremors; Over 1500 dead - massive damage ಸರಣಿ ಭೂಕಂಪ-'ಟರ್ಕಿ' ತತ್ತರ ; 1500 ಮಂದಿಗೂ ಹೆಚ್ಚು ಸಾವು - ಭಾರಿ ಹಾನಿ

ಸರಣಿ ಭೂಕಂಪ-‘ಟರ್ಕಿ’ ತತ್ತರ ; 1500 ಮಂದಿಗೂ ಹೆಚ್ಚು ಸಾವು – ಭಾರಿ ಹಾನಿ

Spread the love

ತೀವ್ರ ಭೂಕಂಪಕ್ಕೆ( earthquake ) ನಲುಗಿದ ಟರ್ಕಿ ತತ್ತರಿಸಿದೆ, 24 ಗಂಟೆಗಳಲ್ಲಿ ಸತತ 3ನೇ ಬಾರಿಗೆ ಭೂಮಿ ನಡುಗಿದೆ. ಬೆಳಿಗ್ಗೆ 6.0 ತೀವ್ರತೆಯ ಮತ್ತೊಂದು ಭೂಕಂಪ ಸಂಭವಿಸಿದೆ.

24 ಗಂಟೆಗಳಲ್ಲಿ ಎರಡು ಪ್ರಬಲ ಭೂಕಂಪಗಳ ನಂತರ ಟರ್ಕಿಯಲ್ಲಿ ಇದು ಮೂರನೇ ಭೂಕಂಪವಾಗಿದೆ. ಇನ್ನು ಈ ಸರಣಿ ಭೂಕಂಪಗಳಿಂದ ಟರ್ಕಿಯಲ್ಲಿ ಸಾವಿನ ಸಂಖ್ಯೆ 1500 ಗಡಿ ದಾಟಿದೆ.ಹೆಚ್‌ಡಿಕೆ ಬ್ರಾಹ್ಮಣ ವಿರೋಧಿ ಹೇಳಿಕೆ: ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಗೆ ಮುಳುವು ?

ಟರ್ಕಿ ( Turkey ) ಮತ್ತು ಸಿರಿಯಾ ( Syria ) ಸಂಭವಿಸಿದ ಪ್ರಬಲ ಭೂಕಂಪದಲ್ಲಿ 1,500ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಕುಸಿದ ಕಟ್ಟಡಗಳು ಮತ್ತು ರಕ್ಷಣಾ ಕಾರ್ಯ ನಡೆಯುತ್ತಿರುವುದರಿಂದ ನೂರಾರು ಸಿಕ್ಕಿಬಿದ್ದವರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ’ ಎಂದಿದೆ.

earthquake

ಈ ದುರಂತದಲ್ಲಿ 5000ಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ, 3 ಸಾವಿರ ಮನೆಗಳು ನಾಶವಾಗಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಸಿರಿಯಾದ ರಾಷ್ಟ್ರೀಯ ಭೂಕಂಪ ಕೇಂದ್ರದ ಮುಖ್ಯಸ್ಥ ರಯೀದ್ ಅಹ್ಮದ್ , ಸರ್ಕಾರಿ ಪರ ರೇಡಿಯೋಗೆ ಇದು ‘ಕೇಂದ್ರದ ಇತಿಹಾಸದಲ್ಲಿ ದಾಖಲಾದ ಅತಿದೊಡ್ಡ ಭೂಕಂಪ’ ಎಂದಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!