ಶ್ರೀರಂಗಪಟ್ಟಣ – ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿ ಶನಿವಾರ ಸಂಭವಿಸಿದ ಸರಣಿ ಅಪಘಾತದಲ್ಲಿ ಕಾರುಗಳು ನಜ್ಜು ಗುಜ್ಜಾಗಿ ಕಾರೊಂದು ಹೊತ್ತಿ ಉರಿದಿದೆ. ಜೊತೆಗೆ ಮಂಡ್ಯ ಎಸ್ಪಿ ಕಾರಿಗೂ ಡಿಕ್ಕಿ ಹೊಡೆದ ಘಟನೆ ಜರುಗಿದೆ.
ತಾಲೂಕಿನ ಟಿ.ಎಂ.ಹೊಸೂರು ಗೇಟ್ ಬಳಿ ಸಂಭವಿಸಿದ ಅಪಘಾತದಲ್ಲಿ ನಾಲ್ಕು ಕಾರುಗಳು ಜಖಂ ಗೊಂಡಿದ್ದರೆ, ಹೆದ್ದಾರಿಯಲ್ಲಿ ಕಾರೊಂದು ಧಗ ಧಗಿಸಿ ಉರಿದಿದೆ. ಬೆಂಗಳೂರು ಕಡೆಯಿಂದ ಮೈಸೂರು ಕಡೆ ತೆರಳುವಾಗ ಹೆದ್ದಾರಿಯಲ್ಲಿ ಅತೀವೇಗವಾಗಿ ಬಂದ ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮುಂಬದಿ ಸಂಚರಿಸುತ್ತಿದ್ದ ನಾಲ್ಕು ಕಾರುಗಳು ಜಖಂ ಗೊಂಡಿವೆ. ಇದನ್ನು ಓದು ಪ್ರೋ. ಭಗವಾನ್ ನಿವಾಸ ಮುಂದೆ ಒಕ್ಕಲಿಗರ ಭಾರಿ ಪ್ರತಿಭಟನೆ: ಬಂಧನ
ಕಾರಿನಲ್ಲಿ ಇದ್ದವರನ್ನು ಸ್ಥಳೀಯರು ಹಾಗೂ ಪೋಲೀಸರು ರಕ್ಷಣೆ ಮಾಡಿದ್ದಾರೆ. ಕಾರಿಗೆ ಬೆಂಕಿ ಹೊತ್ತಿಕೊಳ್ಳುವ ವೇಳೆ ಕಿಟಕಿ ಗ್ಲಾಸ್ ಒಡೆದು ಸುಟ್ಟು ಹೋದ ಕಾರಿನಲ್ಲಿದ್ದವರನ್ನು ಸಹ ರಕ್ಷಿಸಲಾಗಿದೆ. ಶ್ರೀರಂಗಪಟ್ಟಣ ಕಡೆಗೆ ಹೋಗುತ್ತಿದ್ದ ಮಂಡ್ಯ ಎಸ್ ಪಿ ಯತೀಶ್ ರವರ ಕಾರು ಸಹ ಜಖಂಗೊಂಡಿದೆ, ಈ ಸಂಬಂಧ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
Spread the love ಬೆಂಗಳೂರು: ಕುಂಭಮೇಳದ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು, ನೈಋತ್ಯ ರೈಲ್ವೆ ಮೈಸೂರುದಿಂದ ಪ್ರಯಾಗ್ ರಾಜ್ವರೆಗೆ ವಿಶೇಷ…
ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿ ಸರಣಿ ಅಪಘಾತ : ಹೊತ್ತಿ ಉರಿದ ಕಾರು – ಮಂಡ್ಯ ಎಸ್ಪಿ ಕಾರಿಗೆ ಡಿಕ್ಕಿ – Serial accident on Bangalore-Mysore highway: Car on fire – Mandya SP collided with car
More Stories
ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು