ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಎನ್ ಸಿಪಿ ಸೇರ್ಪಡೆ ಸಾಧ್ಯತೆ?

Team Newsnap
1 Min Read
Senior Congress leader Shashi Tharoor likely to join NCP? ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಎನ್ ಸಿಪಿ ಸೇರ್ಪಡೆ ಸಾಧ್ಯತೆ?

ಕಾಂಗ್ರೆಸ್ ಪಕ್ಷದಲ್ಲಿ ನಿರ್ಲಕ್ಷ್ಯಕ್ಕೊಳಗಾಗಿರುವ ಹಿರಿಯ ಮುಖಂಡ ಶಶಿ ತರೂರ್ ಎನ್ ಸಿಪಿ ಸೇರುವ ಸಾಧ್ಯತೆಯಿದೆ.

ಜಿ-23 ನಾಯಕರ ಗುಂಪಿನಲ್ಲಿದ್ದ ಶಶಿ ತರೂರ್ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಸ್ಪರ್ಧಿಸಿ ಸೋತ ನಂತರ ಪಕ್ಷದಲ್ಲಿ ಕಡೆಗಣಿಸಲ್ಪಟ್ಟಿದ್ದಾರೆ ಎನ್ನಲಾಗುತ್ತಿದೆ.KGF ಚಿನ್ನದ ಗಣಿಯಲ್ಲಿ ಮತ್ತೆ ಚಿನ್ನ ತೆಗೆಯುವ ಕಾರ್ಯ– ಟೆಂಡರ್ ಕರೆದ ಕೇಂದ್ರ- ಕಾರ್ಮಿಕರಿಗೆ ಬೇಸರ

ಗುಜರಾತ್ ವಿಧಾನಸಭಾ ಚುನಾವಣೆ ವೇಳೆಯಲ್ಲೂ ಪಕ್ಷ ಅವರಿಗೆ ಯಾವುದೇ ಹೊಣೆಗಾರಿಕೆ ನೀಡಿರಲಿಲ್ಲ. ಸ್ಟಾರ್ ಪ್ರಚಾರಕರ ಪಟ್ಟಿಯಲ್ಲೂ ಅವರ ಹೆಸರು ಇರಲಿಲ್ಲ. ಈ ಎಲ್ಲಾ ಕಾರಣಗಳಿಂದ ಬೇಸತ್ತಿರುವ ಶಶಿ ತರೂರ್ ಎನ್ ಸಿಪಿಯತ್ತ ಮುಖ ಮಾಡಿದ್ದಾರೆ ಎಂದು ಹೇಳಲಾಗಿದೆ

ಈ ಕುರಿತು ಪ್ರತಿಕ್ರಿಯಿಸಿರುವ ಕೇರಳ ಎನ್ ಸಿಪಿ ಅಧ್ಯಕ್ಷ ಪಿ. ಸಿ. ಚಾಕೋ, ಒಂದು ವೇಳೆ ಶಶಿ ತರೂರ್ ಎನ್ ಸಿಪಿಗೆ ಬರುವುದಾದರೆ ತುಂಬು ಹೃದಯದಿಂದ ಸ್ವಾಗತಿಸಲಾಗುವುದು ಎಂದು ತಿಳಿಸಿದ್ದಾರೆ. ಒಂದು ವೇಳೆ ಅವರು ಕಾಂಗ್ರೆಸ್ ತೊರೆದರೂ ತಿರುವನಂತಪುರಂ ಸಂಸದರಾಗಿ ಇರಲಿದ್ದಾರೆ. ಕಾಂಗ್ರೆಸ್ ಅವರನ್ನು ಏಕೆ ನಿರ್ಲಕ್ಷಿಸಿದೆ ಎಂಬುದು ಗೊತ್ತಿಲ್ಲ ಎಂದರು.

ಆದರೆ, ಎನ್ ಸಿಪಿಗೆ ಹೋಗಲ್ಲ, ಇಂತಹ ವಿಚಾರ ಕುರಿತು ಪಿಸಿ ಚಾಕೋ ಅವರೊಂದಿಗೆ ಚರ್ಚೆ ನಡೆಸಿಲ್ಲ ಎಂದು ಶಶಿ ತರೂರ್ ಸ್ಪಷ್ಪಪಡಿಸಿದ್ದಾರೆ.

Share This Article
Leave a comment