ಹಿರಿಯ ನಟ ಸತ್ಯಜಿತ್ ಇನ್ನಿಲ್ಲ:ವಿಪರೀತ ಅನಾರೋಗ್ಯದಿಂದ ಬಳಲಿದ್ದ ನಟ

Team Newsnap
1 Min Read

ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ನಟ ಸತ್ಯಜಿತ್ (72) ಶನಿವಾರ ಮಧ್ಯರಾತ್ರಿ 2 ಘಂಟೆಗೆ ಕೊನೆಯುಸಿರೆಳೆದರು.ಬೆಳಗ್ಗೆ 8 ಗಂಟೆಯಿಂದ ಸತ್ಯಜಿತ್ ನಿವಾಸದಲ್ಲಿ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು ಮಧ್ಯಾಹ್ನ 3 ಗಂಟೆಯ ನಂತರ ಹೆಗೆಡೆ ನಗರದ ಖಬರ್ ಸ್ಥಾನ್​ದಲ್ಲಿ ಸತ್ಯಜಿತ್​ರ ಅಂತ್ಯ ಸಂಸ್ಕಾರ ನಡೆಯಲಿದೆ.

ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲ ಖಳ ನಟ, ಪೋಷಕ ನಟರಾಗಿ ಅಪಾರ ಜನಪ್ರೀಯರಾಗಿದ್ದರು.

ಕಳೆದ 6 ದಿನಗಳಿಂದ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬುಧವಾರದವರೆಗೂ ನಟನ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡಿತ್ತು. ಆದರೆ ಗುರುವಾರ ಡಯಾಲಿಸೀಸ್ ಮಾಡುವಾಗ ಹಾರ್ಟ್ ರೇಟ್ ಕಡಿಮೆಯಾಗಿತ್ತು.

ಜೊತೆಗೆ ಇಂಟರ್ನಲ್ ಬ್ಲೀಡಿಂಗ್ ಕೂಡ ಆಗುತ್ತಿದೆ. ಹೀಗಾಗಿ ಮತ್ತೆ ವೆಂಟಿಲೇಟರ್ ಸಪೋರ್ಟ್ ನೀಡಲಾಗಿತ್ತು . ಮೊನ್ನೆವರೆಗೂ ಮಾತನಾಡುತ್ತಿದ್ದರು, ಆದರೆ ನಿನ್ನೆಯಿಂದ ಮತ್ತೆ ಆರೋಗ್ಯ ಕ್ಷೀಣಿಸಿತ್ತು.

ಕೆಲ ದಿನಗಳ ಹಿಂದೆ ಸತ್ಯಜಿತ್ ಅವರಿಗೆ ಜಾಂಡೀಸ್ ಆಗಿತ್ತು. ಈ ಬೆನ್ನಲ್ಲೇ ಹೃದಯಾಘಾತ ಕೂಡ ಸಂಭವಿಸಿತ್ತು. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿತ್ತು. ಎರಡು ದಿನಗಳ ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಆ ಬಳಿಕ ಮತ್ತೆ ನಟನ ಆರೋಗ್ಯ ಸ್ಥಿತಿ ಬಿಗಡಾಯಿಸಿದ ಕಾರಣ ಬೌರಿಂಗ್ ಭಾನುವಾರ ಆಸ್ಪತ್ರೆಗೆ ಮತ್ತೆ ದಾಖಲಿಸಲಾಗಿತ್ತು.

Share This Article
Leave a comment