ಮುಂಬೈನ ಲೋಕಲ್ ಟ್ರೈನ್ ಒಂದರಲ್ಲಿ ದಾದರ್ರಿನಿಂದ ಅಂಧೇರಿಯ ಕಡೆಗೆ ಕ್ರಿಶನ್ ಟ್ರೈನನ್ನು ತರಾತುರಿಯಲ್ಲಿ ಏರಿದ.ಆ ಟ್ರೈನಿನೊಳಕ್ಕೆ ಸದಾ ನೂಕುನುಗ್ಗಲೆಂಬುದು ಜಗಕ್ಕೆಲ್ಲಾ ತಿಳಿದಿದೆ, ಆದರೂ ಮುಂಬೈನ ದುನಿಯಾ ಒಂಥರಾ ಸಂತೆಯೊಂದರಲ್ಲಿ ಕಳೆದು ಹೋದಂತೆ . ಆ ನೂಕಾಟ ತಲ್ಲಾಟದಲ್ಲಿ ರಾಮ್ ವಾಳ್ವೇಕರ್ ಹಾಗೂ ಈ ಕ್ರಿಶನ್ ಈರ್ವರ ನಡುವೆ. ತಳ್ಳಾಟವು ಏರ್ಪಟ್ಟಿತು ಇಬ್ಬರು ಏರು ಧ್ವನಿಯಲ್ಲಿ ಕೊರಳಿನ ಪಟ್ಟಿಯನ್ನು ಹಿಡಿದು ಜಟಾಪಟಿಗೆ ನಿಂತರು, ಲೋಕಲ್ ಟ್ರೈನಿನಲ್ಲಿ ಎಲ್ಲರೂ ಸಹ ಅವಾಕ್ಕಾಗಿ ಇವರಿಬ್ಬರ ಬಲಪ್ರದರ್ಶನದ ಬಿಟ್ಟಿಪ್ರದರ್ಶನವನ್ನು ಕಣ್ತುಂಬಿಕೊಂಡರು .
ಇದು ಇತ್ತೀಚಿನ ಬೆಂಗಳೂರಿನ ಮೆಟ್ರೋದಲ್ಲೂ ಸರ್ವೇಸಾಮಾನ್ಯವಾಗಿ ನಡೆಯುತ್ತಿದೆ ಹಾಗೂ ದೆಹಲಿಯ ಮೆಟ್ರೋದಲ್ಲೂ ಸಹ ಘಟಿಸಿದ್ದು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಲೀಲಾಜಾಲವಾಗಿ ಹರಿದಾಡುತ್ತಿತ್ತು . ಇಂತದ್ದೇ ಒಂದು ಘಟನೆ ಕೆಲವು ದಶಕದ ಹಿಂದೆ ಜರುಗಿತ್ತು .
ಈ ಜಗಳದ ಸನ್ನಿವೇಶದಿಂದ ಪ್ರಯಾಣಿಕರು ಮುಂದಿನ ನಿಲ್ದಾಣದಲ್ಲಿ ಇವರಿಬ್ಬರನ್ನು ರೈಲ್ವೇ ಪೊಲೀಸರಿಗೆ ಒಪ್ಪಿಸಿದರು . ಆಗ ಇದು ಆ ಸ್ಥಳೀಯ ಪೊಲೀಸ್ ಮುಖ್ಯಾಧಿಕಾರಿಗಳ ಗಮನಕ್ಕೆ ಬಂತು ಅವರ ಹೆಸರು ಹರಿನಾರಾಯಣ ಪಾವ್ಟೇ. ಅವರಿಗೆ ಈ ಇಬ್ಬರ ಕದನವನ್ನು ಸೂಕ್ಷ್ಮವಾಗಿ ಗಮನಿಸಿ ಅದಕ್ಕೆ ವಿರಾಮವನ್ನು ಘೋಷಿಸಿ, ಇಬ್ಬರಿಗು ರಾಜಿಯಾಗುವಂತೆ ಕೋರಿದರು ಹಾಗೂ ಅದನ್ನು ಸಹ ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದರು.
ಪ್ರಾರಂಭಿಕ ವಿಕೋಪಕ್ಕೆ ತಿರುಗಿದ್ದ ಈ ಜಗಳದ ಸನ್ನಿವೇಶ ತಿಳಿಯಾಯ್ತು ಒಬ್ಬರನ್ನೊಬ್ಬರು ಪರಸ್ಪರ ಹೊಡಿದಾಟಕ್ಕೆ ಜಿದ್ದಾಜಿದ್ದಿಗೆ ಬಿದ್ದಂತಹವರು ವಿಚಾರಿಸಿಕೊಂಡರು. ಪರಿಚಯ ಮಾಡಿಕೊಂಡರು ಹರಿನಾರಾಯಣ ಪಾವ್ಟೇ ಅವರು ಸಹ ಇವರಿಬ್ಬರ ಸೈರಣಿಗೆಯನ್ನು ಮೆಚ್ಚಿ ಒಂದು ದಿವಸ ಮುಂಬೈನ ಮಾತುಂಗಾದ ಬಳಿಯಲ್ಲಿ ಒಂದು ಹೊಟೇಲೊಂದಕ್ಕೆ ಇನ್ವೈಟ್ ಮಾಡಿದರು . ಈ ಮೂವರ ಸ್ನೇಹದ ಸೆಲೆ ಇನ್ನಷ್ಟು ವಿಸ್ತರಿಸುತ್ತಾ ಹೋದವು.
ರಾಮ್ ವಾಳ್ವೇಕರ್ ಓರ್ವ ದೇಶಸ್ಥ ಮನೆತನದ ಓರ್ವ ಸಭ್ಯ ವ್ಯಕ್ತಿ ಆರೆಸ್ಸಿಸ್ಸಿನ ಶಿಸ್ತಿನ ಸಿಪಾಯಿ.ಸಂಘದ ಸೇವಾ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿ ತೊಡಗಿಸಿಕೊಂಡಿದ್ದತವ ಒಂದು ವರ್ಷ ಪೂರ್ಣಾವಧಿ ಕಾರ್ಯಕರ್ತನಾಗಿ ಸಂಚಾರದಲ್ಲಿ ನೀರಿನ ಸಮಸ್ಯೆಯನ್ನು ನೀಗಿಸಲು ಹಲವು ಸಂಶೋಧನೆಗಳನ್ನು ನಡೆಸಿದ್ದರು ವಾಳ್ವೇಕರ್ ಮೂಲತಃ ಎಂಎಸ್ಸೀ ಪದವೀಧರರು .
ಕ್ರಿಶನ್ ಮೆಕ್ಯಾನಿಕಲ್ ಇಂಜಿನಿಯರ್ ಆಗಿದ್ದು ಖಾಸಗಿ ಸಂಸ್ಥೆಯೊಂದರಲ್ಲಿ ಕಾರ್ಯವನ್ನು ನಿರ್ವಹಿಸುತ್ತಿದ್ದರು . ಈ ಹೊಟೇಲ್ ಒಂದರ ಭೇಟಿಯಲ್ಲಿ ರೈಲ್ವೆ ಪೊಲೀಸ್ ಅಧಿಕಾರಿ ಹರಿನಾರಾಯಣ್ ಅವರು ನಿಜಕ್ಕೂ ಈ ಇಬ್ಬರು ವ್ಯಕ್ತಿಗಳ ಜಗಳದ ತಿರುವಿನಿಂದ ಒಬ್ಬರನ್ನೊಬ್ಬರು ಅರ್ಥೈಸಿಕೊಂಡು ಈ ಪರಿಚಯವೇ ಕ್ರಮೇಣ ಈ ಮೂವರನ್ನು ಸ್ನೇಹಿತರನ್ನಾಗಿ ಮಾರ್ಪಾಡು ಮಾಡುತ್ತಾ ಹೋಯಿತು .
ರಾಮ್ ವಾಳ್ವೇಕರ್ ಸಂಶೋಧನಾ ವಿಷಯದಲ್ಲಿ ಚಾಣಾಕ್ಷರಾಗಿದ್ದು ಹಲವು ವಿಚಾರಗಳಲ್ಲಿ ಪರಿಣತಿಯನ್ನು ಹೊಂದಿದ್ದರು ಅಟಾಮಿಕ್ ಫಿಸಿಕ್ಸಿನಲ್ಲಿ ಪದವಿ ಪಡೆದಿದ್ದರೂ ಸಸ್ಯ , ಪರಿಸರ ಮುಂತಾದ ವಿಚಾರಗಳಲ್ಲಿ ಆಸಕ್ತಿಯನ್ನು ಹೊಂದಿದ್ದರು ಮಹಾರಾಷ್ಟ್ರದ ಪಶ್ಚಿಮ ಘಟ್ಟದ ಪ್ರದೇಶವಾದ ರತ್ನಗಿರಿಯಲ್ಲಿ ಸಸ್ಯ ಸಂಶೋಧನೆಗೆಂದು ತೆರಳಿ ಅಲ್ಲಿದ್ದ ವಿವಿಧ ಸಸ್ಯಗಳ ಸಂಶೋಧನಾ ವರದಿಯನ್ನು ಸಿದ್ಧ ಪಡೆಸಿದ್ದರು ಇವೆಲ್ಲವನ್ನು ಇವರಿಬ್ಬರ ನಡುವೆ ಹಂಚಿಕೊಂಡರು.ಈ ವಿಚಾರ ವಿನಿಮಯಗಳು ಪರಸ್ಪರ ಭೇಟಿ ಹಾಗೂ ಅನುಭವ ಕಥನಗಳು ರಾಮ್ ಹಾಗೂ ಕ್ರಿಶನ್ನರನ್ನರನ್ನು ಗಟ್ಟಿಗೊಳಿಸುತ್ತ ಹೋಯಿತು . ಅವರು ಇವರ ಮನೆಯ ಕಾರ್ಯಕ್ರಮಕ್ಕೆ ಭಾಗಿಯಾಗುತ್ತ ಇವರು ಅವರ ಕಾರ್ಯಕ್ರಮಕ್ಕೆ ಭಾಗಿಯಾಗುತ್ತಾ ಇನ್ನಷ್ಟು ಮನೆಮನೆಯವರಂತೆ ಆದರು .
ಹೀಗೆ ಸಾಗಬೇಕಾದಾಗ ಕ್ರಿಶನ್ ಕೆಲಸ ಮಾಡುತ್ತಿದ್ದ ಖಾಸಗಿ ಕಂಪೆನಿಯೊಂದರಲ್ಲಿ ಒಂದು ಸಮೂಹ ಘರ್ಷಣೆಯಾಗಿರುತ್ತದೆ ಕಾರಣ ಯೂನಿಯನ್ ಲೀಡರ್ರಿಗೆ ಆತ ಕೆಲಸವನ್ನು ಕಳೆದುಕೊಳ್ಳುವಂತೆ ಮಾಡಿರುತ್ತಾನೆ ಎಂದು
ಈ ವಿಚಾರವನ್ನು ಬೆಂಬತ್ತಿ ಯೂನಿಯನ್ ಲೀಡರ್ ಸಂಬಂಧಿಕ ಡಾನ್ ಪ್ರೊಫೇಷನಲ್ ಕಿಲ್ಲರ್ರಿಗೆ ಡೀಲನ್ನು ಕ್ರಿಶನನ್ನು ಹತ್ಯೆಗೈಯ್ಯಲು . ಇದೇ ಕಾರಣಕ್ಕೆ ಬೆಂಬತ್ತಿ ಆ ಹಂತಕನು ತನ್ನ ಸಹಚರರನ್ನು ಈತನ ಹಿಂಬಾಲಿಸುವಂತೆ ಚಲನವಲನವನ್ನು ಗಮನಿಸುವಂತೆ ಕಳುಹಿಸಿರುತ್ತಾನೆ ಸಮಯ ನೋಡಿ ಆತನನ್ನು ಮುಗಿಸಲು.
ಒಂದು ಬೆಟ್ಟಬೆಳಗ್ಗೆ ಜುಹು ಬೀಚಿನತ್ತ ಕ್ರಿಶನ್ ತೆರಳಬೇಕಾದಾಗ ಆ ಸಂದರ್ಭಕ್ಕೆ ರಾಮ್ ವಾಳ್ವೇಕರ್ ಪುಣೆಗೆಂದು ಕೆಲಸದ ನಿಮಿತ್ತ ಹೊರಟಿರುತ್ತಾನೆ. ಈ ಡಾನಿನ ಸಹಚರರು ಕೋಳಿವಾಡದಲ್ಲಿ ಘೇರಾವ್ ಹಾಕಿ ಈತನ ಬಹುತೇಕ ಚಲನವಲನಗಳನ್ನು ಕಲೆ ಹಾಕಿರುತ್ತಾರೆ .
ಸಮಯಕ್ಕೆ ಸರಿಯಾಗಿ ಜುಹು ಬೀಚಿಗೆ ಬುಲೆಟ್ಟನ್ನು ಏರಿ ಪಿಸ್ತೂಲನ್ನು ಹಿಡಿದು ಹೊರಟರು .ವಾಳ್ವೇಕರ್ ರಾತ್ರಿ ಬರುವವನು ಅಚಾನಕ್ಕಾಗಿ ಬೆಳಗ್ಗೆನೆ ಪುಣೆಯ ಚಿಂಚವಾಡದಿಂದ ಹೊರಟು ಜುಹುವಿನತ್ತ ಬಂದು ಇಳಿಯುತ್ತಿರುವಾಗ ಕ್ರಿಶನ್ನನ್ನು ಕಂಡು ಕೂಗಿ ಕೈಕುಲುಕುವ ಸಮಯಕ್ಕೆ ಒಂದೆರಡು ಬಾರಿ ಫೈರಿಂಗ್ ನಡೆದು ಗುಂಡು ಕ್ರಿಶನ್ನಿಗೆ ತಗುಲದೆ ರಾಮ್ಗೇ ತಗುಲಿ ರಾಮ್ ಅಲ್ಲೇ ಕುಸಿದು ಬೀಳುತ್ತಾನೆ .
ಈ ವಿಷಯ ಪರಿಸ್ಥಿತಿಯಲ್ಲಿ ಆಂಬುಲೆನ್ಸನ್ನು ತರಿಸಿ ರಾಮ್ನನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗುತ್ತದೆ ಕ್ರಿಶನ್ನಿನ ಶ್ವೇತವಸ್ತ್ರವೆಲ್ಲಾ ರಕ್ತ ವರ್ಣಕ್ಕೆ ನೆತ್ತರಿನ ಓಕಳಿಯಿಂದ ಬದಲಾಗಿರುತ್ತದೆ .ತಕ್ಷಣವೇ ಮತ್ತೋರ್ವ ಸ್ನೇಹಿತರು ಪಾವ್ಟೇ ಸ್ಥಳಕ್ಕೆ ಧಾವಿಸಿ ಬರುತ್ತಾರೆ ಪೊಲೀಸ್ ತನಿಖೆಯು ಇದರ ಹಿಂದೆನೇ ಜರುಗುತ್ತದೆ.
ಮುಂದಕ್ಕೆ ರಾಮ್ ವಾಳ್ವೇಕರ್ನ ಪರಿಸ್ಥಿತಿ …
ಆತ ಚೇತರಿಸಿಕೊಂಡು ಈ ಸ್ನೇಹವು ನಿರಂತರವಾಗಿ ಸಹೋದರ ಬಾಂಧವ್ಯಕ್ಕಿಂತ ಮಿಗಿಲಾಗಿ ಈ ಇಬ್ಬರು ಸ್ನೇಹಿತರು ಸ್ವಯಂಸೇವಾ ಸಂಸ್ಥೆಯನ್ನು ಗೋವಾದಲ್ಲಿ ಸ್ಥಾಪಿಸಿ ಅಲ್ಲಿನ ಜನರಿಗೆ ಸಹಾಯ ಮಾಡಲು ತೆರಳುತ್ತಾರೆ.
ಒಂದು ಜಗಳದಿಂದ ಉಂಟಾದ ಪರಿಚಯ ಹೀಗೂ ಕೂಡ ಮಾರ್ಪಾಡಾಗಬಹುದು ಎಲ್ಲವೂ ಸಹೃದ ಮನೋಭಾವ, ಸಹಾನುಭೂತಿಯಿಂದ ಉಂಟಾಗಬಲ್ಲದೆಂಬುದಕೆ ಈ ಘಟನೆ ಜ್ವಲಂತ ಸಾಕ್ಷಿ ಎನ್ನಲೂ ಬಹುದು…!!
~ಆದಿತ್ಯ ಮೈಸೂರು✍️
More Stories
ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ