ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸುವ ಕುರಿತು ನಿರ್ಧಾರ ತೆಗೆದುಕೊಳ್ಳುವ ಸಲುವಾಗಿ ನಾಳೆ ಶಿಕ್ಷಣ ಇಲಾಖೆ ಮಹತ್ವದ ವಿಡೀಯೋ ಕಾನ್ಫರೆನ್ಸ್ ಆಯೋಜಿಸಿದೆ.
ಬುಧವಾರ ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ವಿಡೀಯೋ ಕಾನ್ಫರೆನ್ಸ್ ನಡೆಸುವ ಕುರಿತು ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಕುರಿತು ಇಂದು ಶಿಕ್ಷಣ ಇಲಾಖೆ ಮಹತ್ವದ ಸುತ್ತೋಲೆ ಹೊರಡಿಸಿದೆ. ನಾಳೆ ಮಧ್ಯಾಹ್ನ 3 ಗಂಟೆಯಿಂದ 5.30ರ ವರೆಗೆ ವಿಡೀಯೋ ಕಾನ್ಫರೆನ್ಸ್ ನಡೆಯಲಿದೆ.
2020 -21ನೇ ಸಾಲಿನಲ್ಲಿ ಶಾಲೆಗಳನ್ನು ಆರಂಭಿಸುವ ಕುರಿತು ಚರ್ಚಿಸಲು ಮತ್ತು ಅಭಿಪ್ರಾಯ ಸಂಗ್ರಹಿಸಲು ಈ ವಿಡೀಯೋ ಕಾನ್ಫರೆನ್ಸ್ ಆಯೋಜಿಸಲಾಗಿದೆ. ರಾಜ್ಯದ ಆಯಾ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಕೇಂದ್ರದ ಸ್ವೀಕೃತಿ ಕೇಂದ್ರದಲ್ಲಿ ವಿಡೀಯೋ ಕಾನ್ಫರೆನ್ಸ್ ವ್ಯವಸ್ಥೆ ಮಾಡಲಾಗುತ್ತಿದೆ.
ಬೆಳಗಾವಿ ಮತ್ತು ಕಲಬುರಗಿ ವಿಭಾಗಕ್ಕೆ 3 ಗಂಟೆಯಿಂದ 4 ಗಂಟೆಯವರೆಗೆ ಹಾಗೂ ಮೈಸೂರು ಮತ್ತು ಬೆಂಗಳೂರು ವಿಭಾಗಕ್ಕೆ 4ರಿಂದ 5 ಗಂಟೆವರೆಗೆ ವಿಡೀಯೋ ಕಾನ್ಫರೆನ್ಸ್ ನಡೆಯಲಿದೆ.
ಪ್ರತಿ ತಾಲೂಕಿನಿಂದ ಗ್ರಾಮೀಣ ಭಾಗದ ಒಬ್ಬರು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು ಅಥವಾ ಸದಸ್ಯರು, ನಗರ ಪ್ರದೇಶದಿಂದ ಒಬ್ಬರು ಎಸ್ ಡಿಎಂಸಿ ಅಧ್ಯಕ್ಷರು ಅಥವಾ ಸದಸ್ಯರು, ಸಂಬಂಧಿಸಿದ ಶಾಲೆಯ ಮುಖ್ಯ ಶಿಕ್ಷಕರು, ಅಭಿವೃದ್ಧಿ ಉಪ ನಿರ್ದೇಶಕರು ಮತ್ತು ಆಡಳಿತ ಉಪನಿರ್ದೇಶಕರು ವಿಡೀಯೋ ಕಾನ್ಫರೆನ್ಸ್ ನಲ್ಲಿ ಭಾಗವಹಿಸಬೇಕಾಗುತ್ತದೆ.
ಶಾಲೆಗಳನ್ನು ಆರಂಭಿಸಲು ತರಗತಿ ಮತ್ತು ದಿನಾಂಕ ನಿರ್ಧರಿಸುವ ಕುರಿತು, ಶಾಲೆಗಳನ್ನು ಆರಂಭಿಸಲು ತೆಗೆದುಕೊಳ್ಳಬೇಕಾದ ಸುರಕ್ಷತಾ ಕ್ರಮಗಳು ಕುರಿತು, ಶಾಲೆಯನ್ನು ನಡೆಸುವ ಅವಧಿ ಕುರಿತು ( ಪೂರ್ಣ ಅವಧಿ ನಡೆಸಬೇಕೋ ಅಥವಾ ಅರ್ಧ ಅವಧಿಗೆ ನಡೆಸಬೇಕೋ ಎನ್ನುವ ಕುರಿತು) ಮತ್ತು ಪೋಷಕರ ಅಭಿಪ್ರಾಯ ಯಾವರೀತಿ ಇದೆ ಎನ್ನುವ ಕುರಿತು ಚರ್ಚೆ ನಡೆಸಲು ನಿರ್ಧರಿಸಲಾಗಿದೆ.
ಎಸ್ ಡಿಎಂಸಿ ಅಧ್ಯಕ್ಷರು ಅಥವಾ ಸದಸ್ಯರು ವಿಡೀಯೋ ಕಾನ್ಫರೆನ್ಸ್ ಗೆ ಹಾಜರಾಗುವಂತೆ, ಹಾಜರಾಗುವವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ, ಪ್ರಯಾಣ ವೆಚ್ಚ ನೀಡುವಂತೆ ಉಪನಿರ್ದೇಶಕರುಗಳಿಗೆ ಸೂಚಿಸಲಾಗಿದೆ.
- ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
- ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
- ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
- ಓದಿನ ಮಹತ್ವ
- ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
More Stories
ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ