ಮನೆಗಳಿಗೆ ನೀರು ನುಗ್ಗಿದೆ. ಇದರಿಂದ ನಿವಾಸಿಗಳು ರಾತ್ರಿ ಎಲ್ಲಾ ತುಂಬಾ ತೊಂದರೆಗೆ ಒಳಗಾದರೂ ನಗರಸಭೆ ಅಧಿಕಾರಿಗಳು ಯಾವುದೇ ರೀತಿ ಸ್ಪಂದನವಿಲ್ಲ ಎಂದು ದೂರಿದ್ದಾರೆ.
ಚಿಕ್ಕ ಮಂಡ್ಯ ಮಾತ್ರವಲ್ಲದೇ ನಗರದ ತಗ್ಗು ಪ್ರದೇಶಗಳಿಗೂ ನೀರು ನುಗ್ಗಿ ಅವಾಂತರ ಸೃಷ್ಠಿಸಿದೆ
ಇಂದು ಶಾಲೆಗಳಿಗೆ ರಜೆ :ಭಾರಿ ಮಳೆಯ ಹಿನ್ನೆಲೆಯಲ್ಲಿ ಜಿಲ್ಲೆಯ ಅಂಗನವಾಡಿ ಹಾಗೂ (1ರಿಂದ 10 ನೇ ತರಗತಿಯವರೆಗೆ) ಶಾಲೆಗೆ ಇಂದು (ಮೇ 19 ರಂದು) ಜಿಲ್ಲಾಧಿಕಾರಿ ಎಸ್.ಅಶ್ವತಿ ಅವರು ರಜೆ ಘೋಷಿಸಿರುತ್ತಾರೆ
ಇದನ್ನು ಓದಿ :ನೇರ ನುಡಿ ಸಾಹಿತಿ D S ನಾಗಭೂಷಣ್ ನಿಧನ
KRS ಗೆ 15000 ಕ್ಕೂ ಅಧಿಕ ಒಳಹರಿವು :ಕಳೆದ ಮೂರು ದಿನಗಳಿಂದ ಅವಾಂತರ ಸೃಷ್ಠಿಸಿರುವ ಮಳೆಯಿಂದಾಗಿ ನದಿಗಳಲ್ಲಿ ನೀರು ತುಂಬಿ ಹರೆಯುತ್ತಿದೆ
KRS ನೀರಿನ ಮಟ್ಟ ಏರಿಕೆಯಾಗಿದೆ. ಒಳ ಹರಿವಿನ ಪ್ರಮಾಣ ಕೂಡ 15000 ಕ್ಯುಸೆಕ್ ದಾಟಿದೆ. ಇಂದಿನ ಜಲಾಶಯದ ಮಟ್ಟ 101.72 ಅಡಿ ಇದೆ, ಒಳಹರಿವು 15885 ಕ್ಯುಸೆಕ್ ಹಾಗೂ ಹೊರ ಹರಿವು 3524 ಕ್ಯುಸೆಕ್ ಇದೆ.
ಮಾರ್ಕೋನಹಳ್ಳಿ ಜಲಾಶಯದಿಂದ ಶಿಂಷ ನದಿಗೆ ನೀರು:ಕುಣಿಗಲ್ ತಾಲ್ಲೂಕು ಮಾರ್ಕೋನಹಳ್ಳಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಜಲಾಶಯದಿಂದ ಶಿಂಷಾ ನದಿಗೆ ಹೆಚ್ಚಿನ ನೀರನ್ನು ಹೊರಬಿಡಲಾಗುತ್ತಿದೆ.
ಮಾರ್ಕೋನಹಳ್ಳಿ ಜಲಾಶಯದ ಜಲಾನಯನ ಪ್ರದೇಶದಲ್ಲಿ ಹಾಗೂ ಶಿಂಷ ನದಿ ಪಾತ್ರದಲ್ಲಿನ ಅಪಾಯದ ಅಂಚಿನ ಪ್ರದೇಶವನ್ನು ಗುರುತಿಸಿ,ಸಾರ್ವಜನಿಕರು ಮತ್ತು ಜಾನುವಾರುಗಳ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಂತೆ, ಕಾಳಜಿ ಕೇಂದ್ರ ಹಾಗೂ ಗೋಶಾಲೆ ಗುರ್ತಿಸಿ ಮುನ್ನಚ್ಚರಿಕಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಸ್.ಅಶ್ವತಿ ಸೂಚಿಸಿದ್ದಾರೆ.
ಸಾರ್ವಜನಿಕರು ಸಹ ಮಾರ್ಕೋನಹಳ್ಳಿ ಜಲಾಶಯದ ಜಲಾನಯನ ಪ್ರದೇಶ ಹಾಗೂ ಶಿಂಷ ನದಿ ಪಾತ್ರದಲ್ಲಿನ ಅಪಾಯದ ಅಂಚಿನ ಪ್ರದೇಶವನ್ನು ಪ್ರವೇಶಿಸದಂತೆ ಮುನ್ನಚ್ಚರಿಕೆ ವಹಿಸುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು